ಆಳ್ವಾಸ್ ವಿರಾಸತ್ ಗಾಯಕ ಹರಿಹರನ್ಗೆ ಈ ಬಾರಿ ಪ್ರಶಸ್ತಿ.

0
354

ನಿನ್ನೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮುಖ್ಯಸ್ಥ ಮೋಹನ್ ಆಳ್ವ ನಡೆಸಿದ ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಈ ವರ್ಷದ ವಿರಾಸತ್ ಕಾರ್ಯಕ್ರಮದ ಬಗ್ಗೆ ಹಂಚಿಕೊಂಡ ಮೋಹನ್ ಆಳ್ವ, “ಕಳೆದೆರಡು ದಶಕಗಳಿಂದ ವಿರಾಸತ್ ನಡೆಯುತ್ತಿದೆ, ವಿರಾಸತ್ ತನ್ನದೆ ಆದ ಛಾಪನ್ನ ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಹೊಂದಿದೆ, ಈ ಬಾರಿ ಖ್ಯಾತ ಗಾಯಕ ಪದ್ಮಶ್ರೀ ಹರಿಹರನ್ಗೆ ವಿರಾಸತ್ ಪ್ರಶಸ್ತಿಯನ್ನ ನೀಡಲಾಗುವುದು.” ಎಂದರು, ಎರಡು ದಶಕಗಳಿಂದ ನಡೆಯುತ್ತಿರುವ ಆಳ್ವಾಸ್ ವಿರಾಸತ್ ನೆನೆಸಿಕೊಂಡ ಅವರು, “ಮೊದಲು ಸಮಾಜಮಂದಿರದಲ್ಲಿ ಆರಂಭವಾದ ವಿರಾಸತ್, ನಂತರದಲ್ಲಿ ಮಹಾವೀರ ಕಾಲೇಜು, ಧವಳ ಕಾಲೇಜು ಹಾಗೂ ಸಾವಿರ ಕಂಬದ ಬಸದಿಯಲ್ಲೂ ನಡೆದಿತ್ತು, ನಂತರದಲ್ಲಿ ಕಾರಣಾಂತರಗಳಿಂದ ಮಿಜಾರಿನಲ್ಲಿ ನಡೆಸಲಾಯಿತು, ಎಂದಿನಂತೆ ಈ ವರ್ಷವೂ ಆಳ್ವಾಸ್ ವಿರಾಸತ್ ಮಿಜಾರಿನ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಲಿದೆ” ಎಂದವರು ತಿಳಿಸಿದರು.

ಆಳ್ವಾಸ್ ವಿರಾಸತ್ ಪ್ರಶಸ್ತಿ ಪಡೆಯಲಿರುವ ಹರಿಹರನ್ ಸಾಧನೆಗಳೇನು?
ಮೂಲತಃ ಕೇರಳದ ತಿರುವನಂತಪುರಂನವರಾದ ಹರಿಹರನ್ ಮಲಯಾಳಂ, ತಮಿಳು, ಭೋಜ್‌ಪುರಿ, ಕನ್ನಡ ಸೇರಿದಂತೆ ಅನೇಕ ಭಾಷೆಯ ಹಾಡುಗಳಿಗೆ ದನಿಯಾಗಿದ್ದಾರೆ, ಪ್ಯೂಶನ್ ಮ್ಯೂಸಿಕ್ನಲ್ಲಿ ತನ್ನದೆ ಛಾಪು ಮೂಡಿಸಿರುವ ಹರಿಹರನ್ ಕರ್ನಾಟಿಕ್ ಹಾಗೂ ಹಿಂದೂಸ್ಥಾನಿ ಸಂಗೀತದಲ್ಲೂ ನುರಿತರು. ಮೂವತ್ತಕ್ಕೂ ಹೆಚ್ಚು ಘಜಲ್ ಅಲ್ಬಾಂಗಳಿಗೆ ಹರಿಹರನ್ ದನಿಯಾಗಿದ್ದಾರೆ.

LEAVE A REPLY

Please enter your comment!
Please enter your name here