ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು :
ಆಲೂಗಡ್ಡೆ 6-7, ಕೆಂಪು ಮೆಣಸಿನ ಪೇಸ್ಟ್ 2 ಚಮಚ, ಟೊಮೆಟೊ ಸಾಸ್ 1 ಚಮಚ, ಟೊಮೆಟೊ ಪೇಸ್ಟ್ 1 ಚಮಚ, ರುಚಿಗೆ ತಕ್ಕ ಉಪ್ಪು, ಚಿಲ್ಲಿ ಪ್ಲಕ್ಸ್ 2 ಚಮಚ, ಜೇನು 2 ಚಮಚ, ವಿನೆಗರ್ 2 ಚಮಚ, ಫ್ರೈ ಮಾಡಲು ಎಣ್ಣೆ.
ತಯಾರಿಸುವ ವಿಧಾನ :
ಆಲೂಗಡ್ಡೆಯ ಸಿಪ್ಪೆ ಸುಲಿದು ಅದನ್ನು ಉದ್ದವಾಗಿ ಸೀಳಿ ನೀರಿನಲ್ಲಿ ಹಾಕಿ ತೊಳೆದು ನಂತರ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಇಡಿ. ನಂತರ ಪ್ಯಾನ್ ನಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಎಣ್ಣೆಯಿಂದ ತೆಗೆದು ಪೇಪರ್ ಹಾಕಿದ ಪಾತ್ರೆಯಲ್ಲಿ ಹಾಕಿಡಿ. ನಂತರ ಪ್ಯಾನ್ ನಲ್ಲಿ 1 ಚಮಚದಷ್ಟು ಎಣ್ಣೆ ಹಾಕಿ ಅದರಲ್ಲಿ ಟೊಮೆಟೊ ಪೇಸ್ಟ್, ಟೊಮೆಟೊ ಸಾಸ್, ಕೆಂಪು ಮೆಣಸಿನ ಪೇಸ್ಟ್, ವಿನೆಗರ್, chilli flakes, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಫ್ರೈ ಮಾಡಿ ಆಲೂ ಫಿಂಗರ್ ಚಿಪ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಉರಿಯಿಂದ ಇಳಿಸಿ, ಜೇನು ಹಾಕಿ ಮಿಕ್ಸ್ ಮಾಡಿದರೆ ಬಿಸಿ-ಬಿಸಿಯಾದ ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ ರೆಡಿ.