ಆರ್ ಬಿಐ ಶಾಕ್

0
290

ರಾಷ್ಟ್ರೀಯ ಪ್ರತಿನಿಧಿ ವರದಿ
ಜನ್ ಧನ್ ಖಾತೆದಾರರಿಗೆ ಆರ್ ಬಿಐ ಶಾಕ್ ನೀಡಿದೆ. ಬಡವರು-ರೈತರಿಗಾಗಿ ಹೊಸ ಯೊಜೆನಯನ್ನು ಜಾರಿಗೆ ತಂದಿದೆ. ಜನ್ ಧನ್ ಖಾತೆಗಳಲ್ಲಿನ ವಿತ್ ಡ್ರಾ ಮಿತಿ 10ಸಾವಿರ ರೂ.ಮಾಡಲಾಗಿದೆ. ತಿಂಗಳಿಗೆ ಕೇವಲ 10 ಸಾವಿರ ರೂ. ಡ್ರಾ ಮಾಡಬಹುದು.
 
 
10 ಸಾವಿರಕ್ಕೂ ಹೆಚ್ಚು ಹಣ ಪಡೆಯಲು ಬ್ಯಾಂಕ್ ಗೆ ಅಗತ್ಯ ದಾಖಲೆ ನೀಡಿ ಹಣ ಪಡೆಯಬಹುದು. ಜನದ ಧನ್ ಖಾತೆಯಲ್ಲಿ 60 ಸಾವಿರಕ್ಕಿಂತ ಹೆಚ್ಚು ಹಣವಿದ್ದರೆ ತನಿಖೆ ನಡೆಸಲಾಗುತ್ತದೆ.
 
 
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಆರ್‍ಬಿಐ, ಕೆವೈಸಿ (ನೋ ಯುವರ್ ಕಸ್ಟಮರ್/ನಿಮ್ಮ ಗ್ರಾಹಕರನ್ನು ತಿಳಿಯಿರಿ) ವ್ಯಾಪ್ತಿಗೆ ಒಳಪಟ್ಟ ಜನ್‍ಧನ್ ಯೋಜನೆಯ ಖಾತೆದಾರರು ಪ್ರತಿ ತಿಂಗಳು 10,000 ರೂ.ಗಳ ಹಣವನ್ನು ಮಾತ್ರ ಪಡೆಯಲು ಅನುಮತಿ ನೀಡಿದೆ. ಕೆವೈಸಿ ಆಗಿರದ ಗ್ರಾಹಕರು ತಮ್ಮ ಖಾತೆಗಳಿಗೆ ಮಾಸಿಕ ಗರಿಷ್ಠ 5,000 ರೂ.ಗಳ ಹಣ ವಿತ್‍ಡ್ರಾ ಮಾಡಬಹುದಾಗಿದೆ ಎಂದು ತಿಳಿಸಿದೆ. ಪ್ರಮುಖವಾಗಿ ನೋಟು ಅಮಾನ್ಯಗೊಂಡ ನ.8ರ ನಂತರ ಪಿಎಂಪಿಡಿವೈ ಖಾತೆಗಳಿಗೆ ಜಮೆಯಾದ ಹಣಕ್ಕೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here