ಆರ್ ಬಿಐ ಯಿಂದ ಕಠಿಣ ಕ್ರಮ

0
179

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೆ ನೋಟುಗಳು ಬ್ಯಾನ್ ಹಿನ್ನೆಲೆಯಲ್ಲಿ ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಕೆಲ ನಿರ್ದಿಷ್ಟ ಬ್ಯಾಂಕ್ ಗಳ ಖಾತೆಗಳ ಮೇಲಿನ ವಿತ್ ಡ್ರಾ ಮೇಲೆ ಮಿತಿ ಹೇರಿದೆ.
 
 
ತಿಂಗಳಿಗೆ 10 ಸಾವಿರ ರುಗಳಿಗೆ ಕಡಿತಗೊಳಿಸಿದೆ. ಆರ್ ಬಿಐ ಮೂಲಗಳ ಪ್ರಕಾರ ನವೆಂಬರ್ 8ರ ನೋಟು ನಿಷೇಧ ಬಳಿಕ ಜನ್ ಧನ್ ಖಾತೆ ಮತ್ತು ಎಸ್ ಬಿ ಖಾತೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣ ಠೇವಣಿ ಮಾಡಿರುವ ಖಾತೆಗಳ ತಿಂಗಳ ವಿತ್ ಡ್ರಾ ಮಿತಿಯನ್ನು ಕೇವಲ 10 ಸಾವಿರಕ್ಕೆ ಮಿತಿಗೊಳಿಸಿದೆ ಎಂದು ತಿಳಿದುಬಂದಿದೆ.
 
 
 
ಕಪ್ಪು-ಬಿಳಿ ದಂಧೆಯಲ್ಲಿ ಕೆಲ ಖಾಸಗಿ ಬ್ಯಾಂಕ್ ಗಳ ಅಧಿಕಾರಿಗಳು ಸಿಕ್ಕಿಬೀಳುತ್ತಿರುವ ಬೆನ್ನಲ್ಲೇ ಮತ್ತಷ್ಟು ಕಠಿಣ ಕ್ರಮ ಜರುಗಿಸಲು ಆರ್ ಬಿಐ ನಿರ್ಧರಿಸಿದೆ.
ಜತೆಗೆ ನವೆಂಬರ್ 9ರ ಬಳಿಕ ಯಾವ ಖಾತೆಯಲ್ಲಿ 5ಲಕ್ಷಕ್ಕೂ ಅಧಿಕ ಠೇವಣಿ ಇದೆಯೊ ಅಂತಹ ಖಾತೆಗಳನ್ನು ಪರೀಕ್ಷಣೆಯಲ್ಲಿಡುವಂತೆ ಆರ್ ಬಿಐ ಬ್ಯಾಂಕುಗಳಿಗೆ ಸೂಚಿಸಿದೆ. ಒಂದು ವೇಳೆ ಖಾತೆದಾರನ ಬಳಿ ಪ್ಯಾನ್ ಸಂಖ್ಯೆ ಇಲ್ಲದೇ ಹೋದರೆ ಅಥವಾ ಫಾರ್ಮ್ 60 ಸಲ್ಲಿಸದೇ ಇರುವ ಖಾತೆದಾರರಿಗೆ ವಿತ್ ಡ್ರಾ ಅಥವಾ ಹಣ ವರ್ಗಾವಣೆಗೆ ಅನುಮತಿ ನೀಡದಂತೆಯೂ ಸೂಚಿಸಿದೆ.

LEAVE A REPLY

Please enter your comment!
Please enter your name here