ಆರ್ ಡಿಎಸ್ ಡ್ಯಾಂ ಗೆ ಆಪತ್ತು

0
330

ರಾಯಚೂರು ಪ್ರತಿನಿಧಿ ವರದಿ
ರಾಯಚೂರಿನ ಆರ್ ಡಿಎಸ್ ಜಲಾಶಯಕ್ಕೆ ಆಂಧ್ರ ಮತ್ತು ತೆಲಂಗಾಣ ರೈತರಿಂದ ಆಪತ್ತು ಎದುರಾಗಿದೆ. ರೈತರು ಇಲ್ಲಿನ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದ ಆರ್ ಡಿಎಸ್ ಡ್ಯಾಂ ಅನ್ನು ಧ್ವಂಸಗೊಳಿಸೋ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
 
 
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯಕ್ಕೆ ವ್ಯಾಪಕ ಭದ್ರತೆ ಮಾಡಲಾಗಿದೆ. ಕರ್ನಾಟಕ ವ್ಯಾಪ್ತಿಯ ಡ್ಯಾಂ ಬಲಬರ್ಧನೆ ಕಾಮಗಾರಿಗೆ ಬ್ರೇಕ್ ನೀಡಲಾಗಿದೆ.
 
 
ಹೆಚ್ಚಿನ ಪ್ರಮಾಣದ ನೀರು ಬಂದ್ರೆ ಡ್ಯಾಂಗೆ ತೊಂದರೆಯಾಗುತ್ತದೆ. ಇದರಿಂದ ಜಲಾಶಯದ ಸ್ಚ್ರೆಂತನಿಂಗ್ ಕಾಮಗಾರಿ ನೆನೆಗುದಿಗೆಗೆ ಬಿದ್ದಿದೆ. ಮೆಹಬೂಬನಗರ ಜಿಲ್ಲೆ ರೈತರಿಗೆ ಕಾಲುವೆ ಮೂಲಕ ನೀರು ಬೀಡುತ್ತಿಲ್ಲ. ಅಲ್ಲದೆ ಕಾಮಗಾರಿ ಮಾಡದಂತೆ ಕರ್ನೂಲ್ ಭಾಗದ ರೈತರು ಪಟ್ಟು ಹಿಡಿದಿದ್ದಾರೆ.
 
 
 
ಡ್ಯಾಂ ಬಗ್ಗೆ ತೆಲಂಗಾಣ ಮತ್ತು ರಾಯಲಸೀಮಾ ರೈತರ ನಡುವೆ ವಿವಾದ ಏರ್ಪಟ್ಟಿತ್ತು. ಸದ್ಯ ಆರ್ ಡಿಎಸ್ ಜಲಾಶಯದ ನದಿ ಪಾತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಡ್ಯಾಂ ಬಳಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ.

LEAVE A REPLY

Please enter your comment!
Please enter your name here