ಆರ್‌ಬಿಐ ಗವರ್ನರ್ ರೇಸ್ ನಲ್ಲಿ 4 ಹೆಸರು

0
242

 
ವರದಿ:ಲೇಖಾ
ರಘುರಾಮ್‌ ರಾಜನ್‌ ಅವರಿಂದ ತೆರವಾಗಲಿರುವ ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್)ಗವರ್ನರ್‌ ಹುದ್ದೆಗೆ ಅಭ್ಯರ್ಥಿಗಳ ಪಟ್ಟಿಯ ಹೆಸರನ್ನು ಕೇಂದ್ರ ಸರ್ಕಾರ 4ಕ್ಕೆ ಇಳಿಸಿದೆ.
 
 
 
ಆರ್‌ಬಿಐ ಗವರ್ನರ್‌ ಹುದ್ದೆಗೆ 12ಕ್ಕೂ ಹೆಚ್ಚು ಹೆಸರುಗಳು ಕೇಳಿಬಂದಿದ್ದವು. ಈ ಪೈಕಿ ಆರ್‌ಬಿಐ ಉಪ ಗವರ್ನರ್‌ ಊರ್ಜಿತ್‌ ಪಟೇಲ್‌, ಮಾಜಿ ಉಪ ಗವರ್ನರ್‌ಗಳಾದ ರಾಕೇಶ್‌ ಮೋಹನ್‌, ಸುಬಿರ್‌ ಗೋಕರ್ಣ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ರೇಸ್‌ನಲ್ಲಿದ್ದಾರೆ. ಇವರ ಪೈಕಿ ಒಬ್ಬರರನ್ನು ರಾಜನ್‌ ಅವರ ಉತ್ತರಾಧಿಕಾರಿಯನ್ನಾಗಿ ನೂತನ ಹಣಕಾಸು ನೀತಿ ಸಮಿತಿ ಶೀಘ್ರದಲ್ಲೇ ನೇಮಕ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
 
 
ಇದೇ ವೇಳೆ, ಆರು ಮಂದಿ ಸದಸ್ಯರ ಆರ್‌ಬಿಐ ಹಣಕಾಸು ಸಮಿತಿಗೆ ಮೂವರು ಬಾಹ್ಯ ಸದಸ್ಯರನ್ನು ಶೋಧ ಸಮಿತಿ ನೇಮಿಸಲಿದ್ದು, ಶೋಧ ಸಮಿತಿಗೆ ರಘುರಾಮ್‌ ರಾಜನ್‌ ಅವರು ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here