ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಆಯ್ಕೆ!

0
1348

ಸರ್ಕಾರದ ನೋಟು ನಿಷೇಧ ನೀತಿಯನ್ನು ಬೆಂಬಲಿಸಿದ್ದ ಇಂಡಿಯನ್ ಸ್ಕೂರ್ ಆಫ್ ಬ್ಯುಸಿನೆಸ್ ಹೈದರಾಬಾದ್ನ ಪ್ರಾಧ್ಯಾಪಕ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಕೇಂದ್ರ ಸರ್ಕಾರ ನಿನ್ನೆ ನೇಮಕ ಮಾಡಿದೆ. ಅರವಿಂದ ಸುಬ್ರಮಣಿಯನ್ ಆರ್ಥಿಕ ಸಲಹೆಗಾರ ಸ್ಥಾನದಿಂದ ರಾಜಿನಾಮೆ ನೀಡಿದ ಕಾರಣ ಆರ್ಥಿಕ ಸಲಹೆಗಾರರ ಹುದ್ದೆ ತೆರವಾಗಿತ್ತು ಇದೀಗ ಮೋದಿ ಸರ್ಕಾರ ನೋಟು ರದ್ಧತಿಯನ್ನ ನಿಷೇಧಿಸಿದ್ದುದನ್ನ ಬೆಂಬಲಿಸಿದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಿಳು ನಾಡು ಮೂಲದವರಾದ ಕೃಷ್ಣಮೂರ್ತಿ ಸುಬ್ರಮಣಿಯನ್ ಶಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್’ನಲ್ಲಿ ಸುಬ್ರಮಣಿಯನ್ ಅವರು ಪಿಹೆಚ್’ಡಿ ಪೂರೈಸಿದ್ದಾರೆ.

LEAVE A REPLY

Please enter your comment!
Please enter your name here