ಆರೋಗ್ಯವಂತ ಮಕ್ಕಳಿಂದ ಸದೃಢ ಸಮಾಜ ನಿರ್ಮಾಣ

0
503

 
ಮಂಗಳೂರು ಪ್ರತಿನಿಧಿ ವರದಿ
ಪಡಿ ಸಂಸ್ಥೆ ಮತ್ತು ಮಂಗಳೂರು ವಿಶ್ವವಿಧ್ಯಾನಿಲಯ ಮಂಗಳ ಗಂಗೋತ್ರಿ ಕೊಣಾಜೆ ಇಲ್ಲಿನ ಸಮಾಜ ಕಾರ್ಯ ಸ್ನಾತ್ತಕೋತ್ತರ ವಿಭಾಗ ಇವರ ಸಹಭಾಗಿತ್ವದಲ್ಲಿ ಮಕ್ಕಳ ಪೋಷಣೆ, ಮತ್ತು ರಕ್ಷಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಭಾನುವಾರ ಮಂಗಳೂರು ನಗರದ ಪಚ್ಚನಾಡಿ ಬಳಿಯ ಪ್ರಜ್ಞಾ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.
 
 
 
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕಿಯಾಗಿ ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ಕಮಲ ಗೌಡ ರವರು ಮಾತನ್ನಾಡಿ, ಎಲ್ಲಾ ಮಕ್ಕಳಿಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿದ್ದು, ಹೆತ್ತವರ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಮಕ್ಕಳ ಆರೋಗ್ಯ ಮತ್ತು ಶುಚಿತ್ವದ ನಿರ್ವಹಣೆಯಲ್ಲಿ ಹೆತ್ತವರ ಪಾತ್ರ ಮಹತ್ವದ್ದು ಆ ನಿಟ್ಟಿನಲ್ಲಿ ಹೆತ್ತವರು ಗಮನಹರಿಸಬೇಕು. ಆರೋಗ್ಯವಂತ ಮಕ್ಕಳಿಂದ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
 
 
 
ತಮ್ಮ ಮನೆ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಮಕ್ಕಳಿಗೂ ಕೂಡ ಶುಭ್ರವಾದ ಬಟ್ಟೆ, ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು. ಅದರ ಜೊತೆಗೆ ಮಕ್ಕಳಿಗೆ ಮುಖ್ಯವಾಗಿ ರಕ್ಷಣೆಯ ಅಗತ್ಯವೂ ಇದ್ದು ಮಕ್ಕಳಿಗೆ ಸಂಪೂರ್ಣ ರಕ್ಷಣೆಯು ತಮ್ಮ ಮನೆಯಲ್ಲಿ ಹೆತ್ತವರಿಂದ ದೊರಕಲು ಸಾಧ್ಯವಾಗುತ್ತದೆ. ಹೆತ್ತವರು ಮುಖ್ಯವಾಗಿ ಹೆಣ್ಣು ಮಕ್ಕಳ ಬಗ್ಗೆ ನಿಗಾ ವಹಿಸಿ ಅವರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವ ಜವಬ್ಧಾರಿಯನ್ನು ವಹಿಸಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
 
 
 
ಮಕ್ಕಳ ಸಹಾಯವಾಣಿ, ಮಂಗಳೂರು ಚೈಲ್ಡ್ ಲೈನ್-1098ನ ಶ್ರೀ ನಾಗರಾಜ್ ಪಣಕಜೆಯವರು ಮಾತನಾಡುತ್ತಾ ಮಕ್ಕಳಿಗೆ ಸಂಪೂರ್ಣ ರಕ್ಷಣೆಯ ಅಗತ್ಯವಿದ್ದು, ಮಕ್ಕಳಿಗೆ ತುರ್ತು ರಕ್ಷಣೆಯ ಅಗತ್ಯ ಕಂಡುಬಂದಲ್ಲಿ ಚೈಲ್ಡ್ ಲೈನ್-1098 ಗೆ ಕರೆಮಾಡುವಂತೆ ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿಯನ್ನು ನೀಡಿದ ಅವರು, ಪೊಲೀಸ್ ಹಾಗೂ ಇತರೆ ಇಲಾಖೆಗಳು ನಮ್ಮೊಂದಿಗೆ ಸಹಕರಿಸುತ್ತಿದೆ. ಹೆತ್ತವರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಿ ಮಕ್ಕಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವುದು ಹೆತ್ತವರ ಜವಬ್ಧಾರಿ ಆಗಿದೆ ಎಂದರು. ಮಕ್ಕಳ ಸಮಸ್ಯೆಗಳಿಗೆ ಸಂಬಂಧಪಟ್ಟ ಮಕ್ಕಳ ಸಹಾಯವಾಣಿ ಗೀತೆಯನ್ನು ಮಕ್ಕಳಿಂದ ಹಾಡಿಸಿದರು.
 
 
ಈ ಕಾರ್ಯಕ್ರಮದಲ್ಲಿ ಪಡಿ ಸಂಸ್ಥೆಯ ಎಡ್ವಕೆಸಿ ಮ್ಯಾನೇಜರ್ ಆಗಿರುವ ದೀಕ್ಷಿತ್ ಅಚ್ರಪ್ಪಾಡಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಾವು ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಮಾತು ಆರಂಭಿಸಿದ ಕೂಡಲೇ ಅದು ಬಾಲಕಾರ್ಮಿಕ ಪದ್ದತಿ, ಬಾಲ್ಯವಿವಾಹ ಅದಕ್ಕೆ ಸಂಬಂಧಿಸಿದಂತಹ ಸಾಮಾಜಿಕ ಅನಿಷ್ಠಗಳ ಕಡೆಗೆ ಹೊರಳುತ್ತದೆ. ಮೂಲಭೂತ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ಉತ್ತಮ ಆರೋಗ್ಯ ವ್ಯವಸ್ಥೆ ವಸತಿ ಸೌಲಭ್ಯ ನೀಡಿದಲ್ಲಿ, ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಹಾರ ದೊರಕುತ್ತದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಹೆತ್ತವರು ಹಾಗೂ ಇತರೆ ಇಲಾಖೆಗಳು ಸಹಕರಿಸಬೇಕಾಗಿದೆ ಎಂದರು.
 
 
ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿಧ್ಯಾನಿಲಯದ ಸಮಾಜ ಕಾರ್ಯ ಸ್ಥಾತ್ನಕೋತ್ತರ ವಿದ್ಯಾರ್ಥಿನಿಯಾದ ಕ್ರಿಶಲ್ ಫ್ರೀಮಾ ಮೊಂತೆರೋರವರು ಸ್ವಾಗತಿಸಿದರು. ಚಂದ್ರಿಕಾ.ಕೆ.ಎಮ್. ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳು, ಹೆತ್ತವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here