ಆರಾಧನಾ ಭಟ್‌ಗೆ ಪ್ರೋತ್ಸಾಹಕ ಸಾಮಾಜಿಕ ಸೇವಾ ಪುರಸ್ಕಾರ

0
948

ಮೂಡುಬಿದಿರೆ: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಕೊಡಮಾಡುವ ʻಪ್ರೋತ್ಸಾಹಕ ಸಾಮಾಜಿಕ ಸೇವಾ ಪುರಸ್ಕಾರʼಕ್ಕೆ ಮಜಾ ಭಾರತ ಖ್ಯಾತಿಯ ಆರಾಧನಾ ಭಟ್‌ ನಿಡ್ಡೋಡಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಜೂನ್‌ 1ರಂದು ಮಂಗಳೂರು ಪುರಭವನದಲ್ಲಿ ನಡೆಯುವ ʻಸಂಸ್ಕೃತಿ ವೈಭವʼ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಪ್ರಮುಖರಾದ ರಾಣಿ ಪುಷ್ಪಲತಾ ದೇವಿ ಅಧಿಕೃತ ಪತ್ರದಲ್ಲಿ ತಿಳಿಸಿದ್ದಾರೆ. ಆರಾಧನಾ ಭಟ್‌ ನಿಡ್ಡೋಡಿ ತನ್ನ ಎಳೆ ವಯಸ್ಸಿನಲ್ಲಿಯೇ ಅದ್ಭುತ ಪ್ರತಿಭೆಯ ಮೂಲಕ , ಹಾಗೂ ಸಾಮಾಜಿಕ ಕಾಳಜಿ, ಸಾಮಾಜಿಕ ಸೇವಾ ಮನೋಭಾವವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈಗಾಗಲೇ ಆರಾಧನಾ ಭಟ್‌ ನಿಡ್ಡೋಡಿಗೆ ಹಲವು ಸನ್ಮಾನ ಪುರಸ್ಕಾರಗಳು ಅರಸಿ ಬಂದಿವೆ.

LEAVE A REPLY

Please enter your comment!
Please enter your name here