ಆಯುರ್ವೇದ ಮೆಡಿಕಲ್ ಕೇಂಪ್ ಉಚಿತ ಶಿಬಿರ

0
563

ವರದಿ: ಗೋವಿಂದ ಬಳ್ಳಮೂಲೆ
ಮಧುವಾಹಿನಿ ವಾಯನಶಾಲೆ – ಗ್ರಂಥಾಲಯ ಬೆಳ್ಳಿಪ್ಪಾಡಿ ಮತ್ತು ಕಾಸರಗೋಡು ಜಿಲ್ಲಾ ಸರಕಾರೀ ಆಯುರ್ವೇದ ಚಿಕಿತ್ಸಾಲಯದ ನೇತೃತ್ವದಲ್ಲಿ ಆಯುರ್ವೇದ ಮೆಡಿಕಲ್ ಕೇಂಪ್ ಉಚಿತ ಶಿಬಿರವು ಬಳ್ಳಮೂಲೆಯಲ್ಲಿ ಜರಗಿತು.
 
 
 
ಈ ಸಂದರ್ಭದಲ್ಲಿ ನಡೆದ ಸಭೆಯು ವೃಂದಾ ಬಿ. ಜಿ. ಬಳ್ಳಮೂಲೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮುಳಿಯಾರು ಗ್ರಾಮ ಪಂಚಾಯತ್ ವೈಸ್ ಪ್ರಸಿಡೆಂಟ್ ಗೀತಾ ಗೋಪಾಲನ್ ಅವರು ಶಿಬಿರ ಉದ್ಘಾಟನೆ ಮಾಡಿ ಶುಭಹಾರೈಸಿದರು.
 
 
 
ಪಂಚಾಯತ್ ಮೆಂಬರ್ ಮಾಧವನ್ ಶುಭಾಶಂಸನೆಯಿತ್ತರು. ಸೀನಿಯರ್ ಮೆಡಿಕಲ್ ಆಫೀಸರ್ ಡಾ. ಟಿ. ಕೆ. ವಿಜಯಕುಮಾರ್ ಅವರು ಮುಖ್ಯ ಭಾಷಣ ಮಾಡಿ ಶಿಬಿರದ ಸಮಗ್ರ ಮಾಹಿತಿಗಳನ್ನಿತ್ತರು. ಡಾ. ರಂಜಿತ್, ಡಾ. ಷಿಮ್ನ.ಡಿ, ಡಾ. ಸುದಿನಾ ನಾಯರ್ ಅವರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು. ಗೋವಿಂದಬಳ್ಳಮೂಲೆ ಅಧ್ಯಕ್ಷಸ್ಥಾನ ವಹಿಸಿದರು. ಪಿ. ಚೆರಿಯೋನ್ ಸ್ವಾಗತ ಮತ್ತು ಕೆ. ಜಯಚಂದ್ರನ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here