ಆಯುರ್ವೇದ, ಪ್ರಕೃತಿ ಚಿಕಿತ್ಸಾ ಪರಿಚಯ ಕಾರ್ಯಕ್ರಮ

0
303

ಮಂಗಳೂರು ಪ್ರತಿನಿಧಿ ವರದಿ
ಭಾರತೀಯ ವೈದ್ಯ ಪದ್ದತಿಗಳು ಮತ್ತು ಹೋಮಿಯೋಪತಿ  ಚಿಕಿತ್ಸಾ ಪದ್ಧತಿ “ಆಯುಷ್” ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡುತ್ತಿದ್ದು, ಈ ಚಿಕಿತ್ಸಾ ಸೌಲಭ್ಯ ಹಾಗೂ ಜೀವನ ಪದ್ಧತಿಗಳ ಬಗ್ಗೆ ಆಸಕ್ತಿ ಕಂಡು ಬರುತ್ತಿದೆ. ಆರೋಗ್ಯಪೂರ್ಣ ಜೀವನಕ್ಕೆ ಆಯುಷ್ ಆತ್ಯುಪಯುಕ್ತ ಎನ್ನುವ ಸತ್ಯಾಂಶದ ಆರಿವು ಮೂಡಿಸುವ ಪ್ರಯತ್ನವಾಗಿ ಆಯುಷ್ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆಯುಷ್ ಆಸ್ಪತ್ರೆಯ ಕಾರ್ಯ ನಿರ್ವಹಣೆಯ ಬಗ್ಗೆ , ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಪರಿಚಯ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
 
 
 
ಮಂಗಳೂರು ನಗರದ ಲಾಲ್‌ಬಾಗ್ ಹ್ಯಾಟ್‍ಹಿಲ್ ಆಯುಷ್ ಆಸ್ಪತ್ರೆ ರಸ್ತೆಯಲ್ಲಿರುವ ಜಿಲ್ಲಾ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಗೆ ಗುರುವಾರ ಮಂಗಳೂರಿನ ಬೈಕಂಪಾಡಿ ಸಮೀಪದ ಮೀನಕಳಿಯ ಸರಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳು ತಮ್ಮ ಶಿಕ್ಷಕಿ ಶ್ರೀಮತಿ ವಿನಯ ಪ್ರಭಾ ಇವರೊಂದಿಗೆ ಭೇಟಿ ನೀಡಿದರು. ಈ ಸಂದರ್ಭ ಜಿಲ್ಲಾ ಆಯುಷ್ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯರಾದ ಡಾ.ದೇವದಾಸ್  ಇವರು ವಿಧ್ಯಾರ್ಥಿಗಳಿಗೆ ಸ್ಪಾಸ್ಥ್ಯ ರಕ್ಷಣೆಗಾಗಿ ಹಾಗೂ ರೋಗ ಬಂದ ನಂತರ ನೀಡುವ ಚಿಕಿತ್ಸಾ ಕ್ರಮಗಳಾದ  ಸ್ನೇಹನ, ಸ್ವೇದನ, ನಸ್ಯ, ಕಟಿಬಸ್ತಿ, ಜಾನುಬಸ್ತಿ, ಗ್ರೀವಾಬಸ್ತಿ, ನಾಡಿ ಸ್ವೇದ ಹಾಗೂ ಸೂಜಿ ಚಿಕಿತ್ಸಾಗಳ ಪ್ರಾತ್ಯಕ್ಷಿಕೆಯೊಂದಿಗೆ ಅಗತ್ಯ ಮಾಹಿತಿ ನೀಡಿದರು.
 
 
 
ಉಜಿರೆಯ ಶ್ರೀಧರ್ಮಸ್ಥಳ ಮುಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ವೈದ್ಯರಾದ  ಡಾ. ಅಕ್ಕಮಹಾದೇವಿ ದುರ್ಗದ್ ಮತ್ತು ಸೌಮ್ಯ ಶಾನ್‌ಬೋಗ್ ಚಿಕಿತ್ಸಾ ಸೇವೆ ಹಾಗೂ ಮಾಹಿತಿ ನೀಡಿದರು.
 
 
ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಶುಂಪಾಲರಾದ ಡಾ. ಸಂತೋಷ್ ಕುಮಾರ್.ಜಿ, ಡಾ ಸಂದೀಪ್ ಬೇಕಲ್, ಡಾ. ಶಿಲ್ಪಾ, ಡಾ.ವೀಣಾ ವಿನಾಯಕ್ ಇವರು ಆಯುರ್ವೇದ ಪಂಚಕರ್ಮ, ದಿನಚರ್ಯೆ, ಖುತುಚರ್ಯೆ ಮುಂತಾದ ಅಗತ್ಯ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಮೊಹಮ್ಮದ್ ಇಕ್ಬಾಲ್ ಇವರು ಆಯುಷ್ ಬಗ್ಗೆ ಆಯುಷ್ ಇಲಾಖೆ ಹೊರ ತಂದಿರುವ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here