ವಾರ್ತೆ

ಆಯುರ್ವೇದ ಚಿಕಿತ್ಸೆ ಸರ್ವ ಶ್ರೇಷ್ಠ-ಡಾ. ಬಿ. ಎಂ. ಹೆಗ್ಡೆ

ಉಡುಪಿ ಪ್ರತಿನಿಧಿ ವರದಿ
ಸಾವಿರಾರು ವರ್ಷಗಳ ಪರಂಪರೆ ಇರುವ, ಚರಕ, ಸುಶ್ರುತ ಜೀವಕ ಮೊದಲಾದ ಋಷಿಮುನಿಗಳಿಂದ ಬೋಧಿಸಲ್ಪಟ್ಟ, ಯಾವುದೇ ಅಡ್ಡಪರಿಣಾಮಗಳಿಲ್ಲದ 90% ರೋಗಗಳಿಗೆ ಪರಿಹಾರ ನೀಡಬಲ್ಲ ಅಪೂರ್ವ ಭಾರತೀಯ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ಸರ್ವ ಶ್ರೇಷ್ಠವೆಂದು ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ. ಬಿ. ಎಂ. ಹೆಗ್ಡೆಯವರು ಹೇಳಿದರು.
 
 
ಅವರು ಫೆಬ್ರವರಿ 1 ರಂದು ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಘಟಿಕೋತ್ಸವ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಂಸ್ಥೆಯ ಸಂಸ್ಥಾಪಕರಾದ ಡಾ|ಯು.ಕೃಷ್ಣ ಮುನಿಯಾಲು ಅವರ ಅಪೂರ್ವ ಸಾಧನೆಗಳನ್ನು ಅವರು ಸಂಸ್ಮರಿಸಿಕೊಂಡರು.
 
 
ಪೂರ್ವಾಹ್ನ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಡಗ್ಮನ್ಸ್ ಕನ್ಸಲ್ಟೆನ್ಸಿಯ ನಿರ್ದೇಶಕರಾದ ಡಿ.ಎ ಶೆಟ್ಟಿ ಇವರು ನೆರವೇರಿಸಿದರು. ಸಾಯಂಕಾಲ ಜರಗಿದ ಘಟಿಕೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಡಾ. ಎಂ. ವಿ ಶೆಟ್ಟಿಯವರು ವಹಿಸಿದರು. ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ್ ಬಿ ಅವರು ಸಂಸ್ಥೆಯ ವಾರ್ಷಿಕ ಪ್ರಗತಿಯನ್ನು ವಾಚಿಸಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯ್ತು.
 
 
 
ಸಂಸ್ಥೆಯ ನಿರ್ದೇಶಕಿಯಾದ ಹೇಮಲತಾ ಶೆಟ್ಟಿ, ಡಾ.ಶ್ರದ್ಧಾ ಶೆಟ್ಟಿ, ಆಡಳಿತಾಧಿಕಾರಿ ತಾರನಾಥ ಶೆಟ್ಟಿ, ಭುವನಪ್ರಸಾದ ಹೆಗ್ಡೆ, ಪ್ರಭಾಕರ ರೈ ಉಪಸ್ಥಿತರಿದ್ದರು. ಡಾ.ನಿವೇದಿತಾ ಮತ್ತು ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ರಜನೀಶ್ ಧನ್ಯವಾದವಿತ್ತರು.ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here