ಆಯುಧ ಪೂಜೆಗಾಗಿ ವಿಶೇಷ ಸ್ವೀಟ್

0
179

ವಾರ್ತೆ ರೆಸಿಪಿ
ಕಾಜೂ ಬರ್ಫಿ
ಬೇಕಾಗುವ ಸಾಮಗ್ರಿಗಳು:
ಕಾಜೂ/ಗೋಡಂಬಿ – 250 ಗ್ರಾಂ., ಸಕ್ಕರೆ – 200 ಗ್ರಾಂ, ಹಾಲು – ಒಂದು ಕಪ್, ತುಪ್ಪ – ಸ್ವಲ್ಪ, ಏಲಕ್ಕಿ ಪುಡಿ- ಸ್ವಲ್ಪ.
 
 
 
ತಯಾರಿಸುವ ವಿಧಾನ:
ಒಂದು ಜಾರ್‍ಗೆ ಗೋಡಂಬಿ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ರುಬ್ಬಿದ ಮಿಶ್ರಣ ಮತ್ತು ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.. ಮಿಶ್ರಣ ಗಟ್ಟಿಯಾಗುವ ತನಕ ತಳಹಿಡಿಯದಂತೆ ತಿರುವುತ್ತಿರಿ. ಚಪಾತಿ ಹಿಟ್ಟಿನಂತೆ ಮಿಶ್ರಣ ಗಟ್ಟಿಯಾದಾಗ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಪಾತ್ರೆಯನ್ನು ಕೆಳಗಿಳಿಸಿ. ಮಿಶ್ರಣ ತಣ್ಣಗಾದ ನಂತರ ಮಣೆ ಮೇಲೆ ಹಾಕಿ ಲಟ್ಟಿಸಿಕೊಳ್ಳಿ.ನಂತರ ಡೈಮಂಡ್ ಆಕಾರದಲ್ಲಿ ಕಟ್ ಮಾಡಿ ಸವಿಯಲು ಕೊಡಿ.

LEAVE A REPLY

Please enter your comment!
Please enter your name here