ಆಯಿಲ್ ಫ್ಯಾಕ್ಟರಿ ಧಗಧಗ

0
228

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಆಯಿಲ್ ಫ್ಯಾಕ್ಟರಿಯ್ಲಲಿ ಭಾಗಿ ಅಗ್ನಿ ಅಕಸ್ಮಿಕ ಸಂಭವಿಸಿದೆ. ಮಾಗಡಿ ರಸ್ತೆ ಸೀಗೆಹಳ್ಳಿ ಗೇಟ್ ನಲ್ಲಿನ ಆಯಿಲ್ ಫ್ಯಾಕ್ಟರಿಯ್ಲಲಿ ಅಗ್ನಿ ಕಾಣಿಸಿಕೊಂಡಿದೆ.
 
 
ಓರ್ವ ವ್ಯಕ್ತಿ ಫ್ಯಾಕ್ಟರಿ ಒಳಗಡೆ ಸಿಲುಕಿರುವ ಶಂಕೆಯಿದ್ದು, ಜೆಸಿಬಿ ಮೂಲಕ ಕಟ್ಟಡ ಒಡೆದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಬೆಂಕಿ ಅಪಘಡದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಅಗ್ನಿಶಾಮಕ ವಾಹನಗಳ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಕಿಯ ಕಿನ್ನಾಲೆಗೆ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಅವರಿಸಿಕೊಂಡಿದೆ.

LEAVE A REPLY

Please enter your comment!
Please enter your name here