ಆಮಂತ್ರಣ ಪತ್ರಿಕೆ ಬಿಡುಗಡೆ

0
291

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವವು ದಶಂಬರ 25 ಹಾಗೂ 26ರಂದು ನಡೆಯಲಿರುವುದು. ಕಾರ್ಯಕ್ರಮದ ಪ್ರಚಾರಣಾರ್ಥ ಮುದ್ರಿಸಿದ ಆಮಂತ್ರಣ ಪತ್ರಿಕೆಯನ್ನು ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರಿಗೆ ನೀಡುವ ಮೂಲಕ ಮಂಗಳವಾರ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ವೆಂಕಪ್ಪ ನಾಯ್ಕ ಮಾನ್ಯ, ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಪದ್ಮನಾಭ ಕೊಡಗಿ ಚುಕ್ಕಿನಡ್ಕ, ಕೃಷ್ಣ ಕುಮಾರ್ ಚುಕ್ಕಿನಡ್ಕ ಉಪಸ್ಥಿತರಿದ್ದರು.
 
 
 
ಫೆಬ್ರವರಿ 12ರಂದು ಬದಿಯಡ್ಕದ ಉದ್ಯಮಿ ಗೋಪಾಲಕೃಷ್ಣ ಪೈ ಅವರು ಶಿಲಾನ್ಯಾಸಗೈಯುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆಯನ್ನು ನೀಡಿದ್ದರು. ಊರ ಪರವೂರ ಕೊಡುಗೈ ದಾನಿಗಳ ಸಹಕಾರದಿಂದ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದೆ

LEAVE A REPLY

Please enter your comment!
Please enter your name here