ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ

0
372

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಐದು ದಿನಗಳ ಕಾಲ(ಜು.11) ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಆಫ್ರಿಕಾ ಖಂಡದ 4 ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಮೊಝಾಂಬಿಕ್, ದಕ್ಷಿಣಾ ಆಫ್ರಿಕಾ, ತಾಂಜೇನಿಯಾ ಮತ್ತು ಕೀನ್ಯಾ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ.
 
 
34 ವರ್ಷಗಳ ಬಳಿಕ ಮೊಝಾಂಬಿಕ್ ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಬಳಿ ಭಾರತದ ಪ್ರಧಾನಿ ಭೇಟಿ ನೀಡುತ್ತಿದ್ದಾರೆ. ಇಂದಿರಾ ಗಾಂಧಿ ಅವರು 1982ರಲ್ಲಿ ಮೊಝಾಂಬಿಕ್ ಗೆ ಭೇಟಿ ನೀಡಿದ್ದರು.
 
 

ಬುಧವಾರ ರಾತ್ರಿ ನವದೆಹಲಿಯಿಂದ ಪ್ರಯಾಣ ಆರಂಭಿಸಿದ ನರೇಂದ್ರ ಮೋದಿ ಗುರುವಾರ ಬೆಳಗಿನ ಜಾವ ಮೊಜಾಂಬಿಕ್ ತಲುಪಿದರು. ಮೊಝಾಂಬಿಕ್ ನಲ್ಲಿರುವ ಪ್ರಧಾನಿ ಮೋದಿ ಇಂದು ಬೆಳಗ್ಗೆ ಅಲ್ಲಿನ ಅಧ್ಯಕ್ಷ ಫಿಲಿಪೆ ನ್ಯೂಸಿ ಜತೆ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರು ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

 
 
ಆಫ್ರಿಕಾ ಭೇಟಿ ವೇಳೆ ಮೋದಿ 2 ಬೃಹತ್ ಸಾರ್ವ ಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜು.8ಕ್ಕೆ ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಜು. 10ರಂದು ಕೀನ್ಯಾದ ನೈರೋಬಿಯಲ್ಲಿ ಮಾತನಾಡ ಲಿದ್ದು, 20,000 ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ.
 
 
ಜುಲೈ 7 ರಂದು ಮೋದಿ ಮೊಜಾಂಬಿಕ್​ಗೆ ಭೇಟಿ ನೀಡಲಿದ್ದು, ನಂತರ ಜುಲೈ 8 ಮತ್ತು 9 ರಂದು ದಕ್ಷಿಣ ಆಫ್ರಿಕಾಗೆ ತೆರಳಲಿದ್ದು, ಅಲ್ಲಿ ಪ್ರೆಟೋರಿಯ, ಜೋಹನ್ಸ್ ಬರ್ಗ್, ದರ್ಬನ ಭೇಟಿ ನೀಡಲಿದ್ದಾರೆ. ಜುಲೈ 10 ರಂದು ತಾಂಜೇನಿಯಾಗೆ ಭೇಟಿ ನೀಡಲಿರುವ ಮೋದಿ ಜುಲೈ 11 ರಂದು ಕೀನ್ಯಾಗೆ ಭೇಟಿ ನೀಡಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.
 
 
ಕಳೆದ ಆರು ತಿಂಗಳ ಅವಧಿಯಲ್ಲಿ ಭಾರತದ ಪ್ರಮುಖ ನಾಯಕರೊಬ್ಬರು ಆಫ್ರಿಕಾಗೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ಈ ಹಿಂದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಫ್ರಿಕಾ ಪ್ರವಾಸ ಕೈಗೊಂಡಿದ್ದರು.

LEAVE A REPLY

Please enter your comment!
Please enter your name here