ಆದೇಶಕ್ಕೆ ಕ್ಯಾರೆ ಎನ್ನದೇ ಜಲ್ಲಿಕಟ್ಟು ಕ್ರೀಡೆ ಆಯೋಜನೆ

0
208

ರಾಷ್ಟ್ರೀಯ ಪ್ರತಿನಿಧಿ ವರದಿ
ಮಕರ ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಲ್ಲಿ ಇಂದು ಜಲ್ಲಿಕಟ್ಟು ಕ್ರೀಡೆ ಆಯೋಜನೆ ಮಾಡಲಾಗಿದೆ. ತಮಿಳರು ಸುಪ್ರೀಂಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದೇ ಕಾರ್ಯಕ್ರಮವನ್ನು ಆಯೋಚಿಸಲಾಗಿದೆ.
 
 
ಮಧುರೈನಲ್ಲಿ ಜಲ್ಲಿಕಟ್ಟು ಕ್ರೀಡೆ ಆಯೋಜಿಸಿದ್ದ 25 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಷೇಧದ ನಡುವೆಯೂ ಜಲ್ಲಿಕಟ್ಟು ಕ್ರೀಡೆಗೆ ಭರದ ತಯಾರಿ ನಡೆಲಾಗುತ್ತಿತ್ತು. ಅಲ್ಲದೆ ಜಲ್ಲಿಕಟ್ಟು ನಿಷೇಧ ವಿರೋಧಿಸಿ ಹಲವೆಡೆ ಇಂದೂ ಪ್ರತಿಭಟನೆಗಳು ನಡೆಯುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
 
 
 
ವಿವಿಧೆಡೆ ಪ್ರತಿಭಟನೆ:
ಜಲ್ಲಿಕಟ್ಟು ಕ್ರೀಡೆ ರಾಜ್ಯದ ಸಂಪ್ರದಾಯ ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ. 150ಕ್ಕೂ ಹೆಚ್ಚು ಧರಣಿನಿರತರ ಸೆರಾಗಿದ್ದು, ಪೊಲೀಸರ ಲಾಠಿಚಾರ್ಜ್ ನಡೆದಿದೆ. ಜಲ್ಲಿಕಟ್ಟು ಕ್ರೀಡೆ ನಿಷೇಧ ವಿರೋಧಿಸಿ ತಮಿಳಿನ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಚಿತ್ರನಿರ್ದೇಶಕ ಗೌತಮ್ ಮೆನನ್ ಸೇರಿ ಹಲವರಿಗೆ ಗಾಯಗಳಾಗಿವೆ. ತಮಿಳುನಾಡಿನ ಮಧುರೈ, ಪುದುಕೋಟ್ಟೈ, ಕೊಯಮತ್ತೂರು ಸೇರಿದಂತೆ ಹಲವೆಡೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಧರಣಿಗೆ ಕಾಲಿವುಡ್ ನಟರು, ನಿರ್ದೇಶಕರು ಸಾಥ್ ನೀಡಿದ್ದಾರೆ. ತಿರುಚ್ಚುಯಲ್ಲಿ ಯುವಕರು ಕಪ್ಪುಬಾವುಟ ಹಾಸಿರಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಧುರೈನಲ್ಲಿ ನಡೆಯುತ್ತದ್ದ ಧರಣಿಗೆ ನಟ ಆರ್ಯ, ಅಮಿತ್, ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಬೆಂಬಲ ನೀಡಿದ್ದಾರೆ.

LEAVE A REPLY

Please enter your comment!
Please enter your name here