‘ಆದಿತ್ಯಹೃದಯ’ ಪುಸ್ತಕ ಲೋಕಾರ್ಪಣೆ

0
479

 
ನಮ್ಮ ಪ್ರತಿನಿಧಿ ವರದಿ
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀಭಾರತೀ ಪ್ರಕಾಶನವು ಹೊರತಂದಿರುವ ‘ಆದಿತ್ಯಹೃದಯ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
 
 
 
ಶ್ರೀಗಳ ಆಶಯದಂತೆ, ಪ್ರತಿವರ್ಷ ಶಂಕರಪಂಚಮಿಯಂದು ವರ್ಷಕ್ಕೊಂದರಂತೆ ಸ್ತ್ರೋತ್ರದ ಅಭಿಯಾನವನ್ನು ಕೈಗೊಳ್ಳುತ್ತಿದ್ದು, ಈ ವರ್ಷ ಲೋಕಕಲ್ಯಾಣಾರ್ಥವಾಗಿ ‘ಆದಿತ್ಯಹೃದಯ’ ಪಾರಾಯಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
 
 
 
 
ಇದಕ್ಕೆ ಪೂರಕವಾಗಿ ಅರ್ಥಸಹಿತವಾದ ‘ಆದಿತ್ಯಹೃದಯ’ ಪುಸ್ತಕವನ್ನು ಶ್ರೀಭಾರತೀ ಪ್ರಕಾಶನವು ಹೊರತಂದಿದೆ. ಹಿಂದಿನ ವರ್ಷಗಳಲ್ಲಿ ಭಜಗೋವಿಂದಮ್, ವಿಷ್ಣುಷಟ್ಪದಿ ಹಾಗೂ ಹನುಮಾನ್ ಚಾಲೀಸಾ ಅಭಿಯಾನಗಳು ಸಮಾಜದಲ್ಲಿ ಉಂಟುಮಾಡಿದ ಧನಾತ್ಮಕ ಸಂಚಲನವನ್ನು ನಾವಿಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here