ಆದಾಯ ಧೃಡೀಕರಣ ಪತ್ರ ನೀಡಲು ಮಾಹಿತಿ ಸಂಗ್ರಹಿಸಿ

0
552

 
ಮ0ಗಳೂರು ಪ್ರತಿನಿಧಿ ವರದಿ
ಮೇ-ಜೂನ್ ನಲ್ಲಿ ಶಾಲಾ ಕಾಲೇಜುಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಧೃಡೀಕರಣ ಪತ್ರಗಳನ್ನು ಸೂಕ್ತ ಸಮಯದಲ್ಲಿ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮಕರಣಿಕರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಿಳಿಸಿದ್ದಾರೆ.
 
 
ಅವರು ಬುಧವಾರ ತಮ್ಮ ಕಛೇರಿಯಲ್ಲಿ ಈ ಸಂಬಂಧ ನಡೆದ ಜಿಲ್ಲೆಯ ಕಂದಾಯ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ವಿತರಿಸಿರುವ ಪಡಿತರ ಚೀಟಿಯಲ್ಲಿನ ಮಾಹಿತಿ, ಆದಾರ್ ನೊಂದಣಿ ಸಂಖ್ಯೆ ಜಾತಿ, ಆದಾಯ ಇತ್ಯಾದಿಗಳ ಬಗ್ಗೆ ಗ್ರಾಮ ಕರಣಿಕರು, ಮನೆಮನೆ ಭೇಟಿ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಿ, ಆ ಮಾಹಿತಿಯನ್ನು ನಾಡ ಕಚೇರಿಯಲ್ಲಿರುವ ಮಾಹಿತಿಯೊಂದಿಗೆ ತಾಳೆ ನೋಡಿ ನಂತರ ತಾಲೂಕು ಕಛೇರಿಗಳಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಕರಣಿಕರಿಗೆ ಸೂಚಿಸಿ, ಮಾಹಿತಿ ಸಂಗ್ರಹ ಕಾರ್ಯ ಮೇ ಅಂತ್ಯಕ್ಕೆ ಪೂರ್ಣವಾಗಬೇಕೆಂದು ಕಾಲಮಿತಿ ನಿಗದಿ ಪಡಿಸಿದರು.
 
 
ಈ ಬಾರಿ ನೀಡುವ ಜಾತಿ ಮತ್ತು ಆದಾಯ ಧೃಡೀಕರಣ ಪತ್ರ 5 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಆದ ಕಾರಣ ಆದಾಯ ಮತ್ತು ಜಾತಿ ಧೃಡೀಕರಣ ಪತ್ರಗಳನ್ನು ನೀಡುವಲ್ಲಿ ಜಾಗ್ರತೆ ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

LEAVE A REPLY

Please enter your comment!
Please enter your name here