ಆತ್ಮ ಸಂಘಟನೆಯಿಂದ ದೇಶ ಸಂಘಟನೆ

0
281

 
ಚಿತ್ರ, ವರದಿ : ಶ್ಯಾಮಪ್ರಸಾದ ಸರಳಿ, ಬದಿಯಡ್ಕ
ಧರ್ಮದ ಆಧಾರದಲ್ಲಿ ಜೀವನ ಮಾಡುವ ಮಕ್ಕಳು ನಾವು. ಆತ್ಮ ಸಂಘಟನೆಯನ್ನು ಮಾಡಿದರೆ ದೇಶ ಸಂಘಟನೆ ಮಾಡಬಹುದು ಎಂಬುದನ್ನು ಭಾಗವತದಲ್ಲಿ ತಿಳಿದುಕೊಳ್ಳಬಹುದು ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ನುಡಿದರು.
 
badiyaka perada vaarrte2
ಅವರು ಬುಧವಾರ ಮಧ್ಯಾಹ್ನ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
 
badiyaka perada vaarrte1
ಅವರು ಮಾತನಾಡುತ್ತಾ ನಮ್ಮ ದೇಶ ಶ್ರೇಷ್ಠ ದೇಶ, ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರುವುದರಿಂದ ಸಕಾಲದಲ್ಲಿ ನಮಗೆ ಬೇಕಾದುದೆಲ್ಲವೂ ಲಭಿಸುತ್ತದೆ ಎಂದರು.
 
 
ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಐ.ವಿ. ಭಟ್ ಭಾಗವತ ಸಪ್ತಾಹವು ವಿಶ್ವವ್ಯಾಪಿಯಾಗಲಿ., ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಇದರಲ್ಲಿ ನಾವು ತಿಳಿಯಬೇಕಾದುದು ಬಹಳಷ್ಟಿದೆ ಎಂದರು.
 
 
ಭಾಗವತ ಸಪ್ತಾಹವೆಂದರೆ ಸತ್ಕರ್ಮಾಚರಣೆ, ಇದರಿಂದ ಹೃದಯ ಶುದ್ಧಿಯಾಗುತ್ತದೆ. ಕಲಿಯುಗದಲ್ಲಿ ಸಂಪೂರ್ಣ ಫಲ ಪ್ರಾಪ್ತಿಯಾಗಬೇಕಾದರೆ ಶ್ರೀಮದ್ಭಾಗವತ ಸಪ್ತಾಹದ ಮೊರೆ ಹೋಗಬೇಕು ಎಂದು ವೇದಮೂರ್ತಿ ಕೇಕಣಾಜೆ ಕೇಶವ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೇಶ ಸಂಘಟನೆಯಾಗಬೇಕಾದರೆ ನಾವು ಸಂಘಟಿತರಾಗಬೇಕು ಎಂದು ಪುರಾಣದಲ್ಲಿ ವಿವರಿಸಲ್ಪಟ್ಟಿದೆ. ಮನೆ ಮನಗಳಲ್ಲಿ ಭಾಗವತ ಸಪ್ತಾಹ ನಡೆದರೆ ನಮಗೆ `ಕೃಷ್ಣ’ ಲಭಿಸುತ್ತಾನೆ ಎಂದರು.
 
 
ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರು ಮಾತನಾಡಿ ಸರ್ವಭಕ್ತರ ಕಷ್ಟಗಳು ನಿವಾರಣೆಯಾಗಲಿ ಎಂದರು.
ವೇದಮೂರ್ತಿ ಮುರಳೀಕೃಷ್ಣ ಭಟ್ ಕಾಂಚನ, ಆಡಳಿತ ಮೊಕ್ತೇಸರ ವೆಂಕಟಕೃಷ್ಣ, ಚಂದ್ರಹಾಸ ರೈ, ಗಂಗಾಧರ ಗೋಳಿಯಡ್ಕ, ಪ್ರಸಾದ ಭಂಡಾರಿ, ಅರ್ಚಕ ಶಿವರಾಮ ಭಟ್, ಗಣೇಶ ಕಡಪ್ಪು, ಮೊದಲಾದವರು ಉಪಸ್ಥಿತರಿದ್ದರು.
ಶಿವರಾಮ ಪೆರ್ಮುಖ ಸ್ವಾಗತಿಸಿ, ಎಸ್.ಆರ್. ಶೇಟ್ ಧನ್ಯವಾದವನ್ನಿತ್ತರು. ಉದಯ ಪಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು.
 
ಮಂಗಳವಾರ ರಾತ್ರಿ ಭಾಗವತ ಪುರಾಣಾಧಾರಿತ ಯಕ್ಷಗಾನ ಬಯಲಾಟ ಜರಗಿತು.
 
ದೇವಸ್ಥಾನ, ಮಂದಿರಗಳಲ್ಲಿ ಭಾಗವತ ಸಪ್ತಾಹ ಕಾರ್ಯಕ್ರಮವು ನಡೆದರೆ ಕಲುಶಿತ ವಾತಾವರಣ ದೂರವಾಗಿ ಉತ್ತಮ ಪರಿಸರ ನಿರ್ಮಾಣವಾಗಬಹುದು. ಪೆರಡಾಲದ ಈ ಕಾರ್ಯಕ್ರಮವು ಅದಕ್ಕೆ ನಾಂದಿಯಾಗಲಿ.
– ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು.

LEAVE A REPLY

Please enter your comment!
Please enter your name here