ಆತ್ಮಾಹುತಿ ಬಾಂಬ್ ದಾಳಿ

0
192

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಟರ್ಕಿಯ ಏರ್ ಪೋರ್ಟ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದೆ. ಇಸ್ತಾಂಬುಲ್ ನಲ್ಲಿನ ಅತಾತುರ್ಕ್ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ.
 
 
 
ಆತ್ಮಾಹುತಿ ಬಾಂಬ್ ದಾಳಿಯಲ್ಲಿ 38ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಎಕೆ 47ರೊಂದಿಗೆ ಏರ್ ಪೋರ್ಟ್ ಗೆ ನುಗ್ಗಿದ್ದ ಉಗ್ರರು ಏರ್ ಪೋರ್ಟ್ ಕಾರು ಪಾರ್ಕಿಂಗ್ ಬಳಿಯಿಂದ ಫೈರಿಂಗ್ ಶುರು ಮಾಡಿದ್ದಾರೆ. ನಂತರ ಮೂವರು ಉಗ್ರರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ.
 
 
ಇಸ್ತಾಂಬುಲ್ ಏರ್ ಪೋರ್ಟ್ ನಲ್ಲಿ ಆತ್ಮಾಹುತಿ ದಾಳಿ ಪ್ರಕರಣ ಹಿಂದೆ ಐಸಿಸ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಟರ್ಕಿ ಪ್ರಧಾನಮಂತ್ರಿ ಬಿನಾಲಿ ಯಿಲ್ದ್ರೀಮ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here