ಆತ್ಮಾಹುತಿ ಬಾಂಬ್‌ ದಾಳಿ

0
572

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸಿರಿಯಾ ಸರ್ಕಾರದ ವಶದಲ್ಲಿರುವ ಮೂರನೇ ನಗರವಾಗಿರುವ ಹೋಮ್ಸ್‌ ನ ಎರಡು ಭದ್ರತಾ ಸೇವಾ ನೆಲೆಗಳ ಮೇಲೆ ಶನಿವಾರ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ.
 
 
ಆತ್ಮಾಹುತಿ ಬಾಂಬ್ ದಾಳಿಯ ಸ್ಫೋಟದಲ್ಲಿ ಗುಪ್ತಚರ ಇಲಾಖೆಯ ಓರ್ವ ಹಿರಿಯ ಅಧಿಕಾರಿ ಸೇರಿದಂತೆ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಅವಳಿ ಆತ್ಮಾಹುತಿ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನಗರ ಕೇಂದ್ರವನ್ನು ಬಂದ್ ಮಾಡಿವೆ.
 
 
ರಾಜ್ಯ ಭದ್ರತಾ ಮತ್ತು ಮಿಲಿಟರಿ ಗುಪ್ತಚರ ದಳದ ಪ್ರಧಾನ ಕಚೇರಿಯ ಸಮೀಪ ಕನಿಷ್ಟ ಆರು ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವಿಚಕ್ಷಣ ಕೇಂದ್ರ ನಿರ್ದೇಶಕ ರಮೀ ಅಬ್ಧೆಲ್‌ ರೆಹಮಾನ್‌ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here