ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪಿಎಸ್ಐ

0
294

ಬೆಂಗಳೂರು ಪ್ರತಿನಿಧಿ ವರದಿ
ಡಿವೈಎಸ್ ಪಿ ಎಂಕೆ ಗಣಪತಿ ಮತ್ತು ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಆತ್ನಹತ್ಯೆಗೆ ಯತ್ನಿಸಿದ್ದಾರೆ.
 
 
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ರೂಪಾ ತಂಬದ ಅವರು ಮಂಗಳವಾರ ಸಂಜೆ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
 
 
ರೂಪಾ ಅವರು ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಠಾಣೆಯ ಇನ್ಸ್ ಪೆಕ್ಟರ್ ಕೂಡಲೇ ಅವರನ್ನು ರಾಜಾಜಿನಗರದ ಸುಗುಣಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೂಪಾ ಅವರಿಗೆ 36 ಗಂಟೆಗಳ ಕಾಲ ಅವರಿಗೆ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ರೀತಿಯ ಚಿಕಿತ್ಸೆಗೆ ಪಿಎಸ್ ಐ ರೂಪಾ ಸ್ಪಂದಿಸುತ್ತಿದ್ದಾರೆ. ರಕ್ತದ ಮಾದರಿಗಳನ್ನು ಹೈದರಾಬಾದ್ ಗೆ ರವಾನಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
 
ಮೊಬೈಲ್ ಕಳ್ಳತನ ಪ್ರಕರಣದ ಬಗ್ಗೆ ಠಾಣಾಧಿಕಾರಿ ಪ್ರಶ್ನಿಸಿದ್ದರು. ಜಪ್ತಿ ಮಾಡಿದ್ದ ಮೊಬೈಲ್ ದರ್ಬಳಕೆ ಎಂದು ರೂಪಾ ಅವರನ್ನು ಅನುಮಾನಿಸಲಾಗಿದೆ. ಅಲ್ಲದೆ ಸರಿಯಾಗಿ ಕೆಲಸ ಮಾಡಿಲ್ಲವೆಂದು ಠಾಣಾಧಿಕಾರಿ ಡೈರಿಯಲ್ಲಿ ಉಲ್ಲೇಖಿಸಿದ್ದಕ್ಕೆ ಕಂಡು ರೂಪಾ ಆಕ್ರೋಶಗೊಂಡದ್ದರು. ಅಲ್ಲದೆ ರೂಪಾ ಅವರು, ನಾನು ಡಿವೈಎಸ್ಪಿ ಗಣಪತಿ ರೀತಿ ಸಮವಸ್ತ್ರದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಿಬ್ಬಂದಿಗೆ ಹೆದರಿಸಿದ್ದಾರೆ. ಇದಾದ ಬಳಿಕ ಮಧ್ಯಾಹ್ನ ರೂಪಾ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

LEAVE A REPLY

Please enter your comment!
Please enter your name here