ಆತ್ಮಗೌರವ ಬೆಳೆಸಿಕೊಳ್ಳಬೇಕು

0
192

 
ಉಜಿರೆ ಪ್ರತಿನಿಧಿ ವರದಿ
ಬೇಂದ್ರೆಯವರು 20 ನೇ ಶತಮಾನದ ಪ್ರಮುಖ ಹಾಗೂ ಮೊಟ್ಟಮೊದಲ ನಾಟಕಕಾರ. 67 ವರ್ಷಗಳ ಕಾಲ ಸಾಹಿತ್ಯ, ಕಾವ್ಯ ರಚನೆಗೆ ಮಾಡಿದ ಹೆಗ್ಗಳಿಕೆಯಲ್ಲಿ ಇವರಿದ್ದಾರೆ. ಇವರು ನನ್ನ ದೇಹದ ಪಂಚ ಪ್ರಾಣವಾಗಿದ್ದಾರೆ ಎಂದು ಧಾರವಾಡದ ಬೇಂದ್ರೆ ಟ್ರಸ್ಟ್ ನ ಅಧ್ಯಕ್ಷರಾದ ಶ್ಯಾಮ ಸುಂದರ ಬಿದರಕುಂದಿ ಅವರು ವ್ಯಕ್ತಪಡಿಸಿದರು.
 
 
ಇತ್ತೀಚೆಗೆ ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಮ್ಯಗ್ಧರ್ಶನದಲ್ಲಿ ಏರ್ಪಡಿಸಲಾದ ಚಿಂತನ ಸಿರಿ ಕಾರ್ಯಕ್ರಮದಲ್ಲಿ ‘ಬೇಂದ್ರೆಯವರ ಸಾಹಿತ್ಯ ಮತ್ತು ವ್ಯಕ್ತಿತ್ವ’ ಎಂಬ ವಿಷಯದ ಬಗ್ಗೆ ಇವರು ಮಾತನಾಡುತ್ತಿದ್ದರು.
 
 
 
ಹೃದಯಂತರಾಳದಲ್ಲಿರುವ ನಾರಾಯಣನೇ ಮೂಲ, ಒಬ್ಬ ಮನುಷ್ಯ ಜೀವಂತಿಕೆಯನ್ನು ಬೇಳೆಸಬೇಕು, ಮತ್ತು ಜೀವನದ ಆಸಕ್ತಿಯನ್ನು ಉಳಿಸಿಕೊಳ್ಳಬೇಕು. ಕಾವ್ಯ ರಚನೆ ಹಾಗೂ ಸೃಷ್ಟಿ ಮಾಡುವುದರ ಮೂಲಕ ಗುರುತಿಸಿಕೊಳ್ಳಬೇಕು ಎಂದು ನುಡಿದರು.
 
 
 
ಒಬ್ಬ ಕವಿ ಕನ್ನಡಕ್ಕೆ ಏನಾದರೂ ಮಾಡಬೇಕು. ಕಾಲಕ್ಕೆ ತಕ್ಕಂತ ಕಾವ್ಯವನ್ನು ಬರೆಯಬೇಕಾಗುತ್ತದೆ. ನಮ್ಮೊಳಗೆ ಆತ್ಮೀಕರಿಸಿಕೊಳ್ಳಬೇಕು. ಪ್ರಕೃತಿ ಜೊತೆ ನಾವು ತನ್ಮಯರಾಗಬೇಕು. ಜೊತೆಗೆ ಆತ್ಮಗೌರವ ಬೆಳೆಸಿಕೊಳ್ಳಬೇಕು ಎಂದರು.
 
 
ಸಿನೆಮಾ ಅನುಭವಗಳನ್ನು ತಮ್ಮ ಜೀವನದಲ್ಲಿ ತಂದುಕೊಳ್ಳಬಾರದು. ಒಲವಿನ ಬದುಕಿನ ಕುರಿತು ಬರೆಯಬೇಕು. ಹಿಗ್ಗುವ ಮನಸ್ಥಿತಿಯನ್ನು ನಿಯಂತ್ರಿಸಿ ಸಾಧನೆಯ ಬಗ್ಗೆ ಹೆಚ್ಚು ಒಲವಿರಬೇಕು ಎಂದು ಕಿವಿಮಾತು ಹೇಳಿದರು.
 
 
ಈ ಕಾರ್ಯಕ್ರಮದಲ್ಲಿ ಶ್ರೀ ಧ.ಮಂ ಕಾಲೇಜಿನ ಕಾರ್ಯದರ್ಶಿಗಳಾದ ಡಾ. ಬಿ. ಯಶೋವರ್ಮ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಶ್ರೀಧರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here