ಆತನ ಬಾಯಿಯೊಳಗೆ ಭಸ್ಮವನ್ನು ಹಾಕುತ್ತಾನೆ. ತಕ್ಷಣದಲ್ಲಿ ಕಣ್ಣನ್ ಸಹಜಸ್ಥಿತಿಗೆ ಬರುತ್ತಾನೆ!!!

0
1273

ನಿತ್ಯ ಅಂಕಣ:೪೦

ಅಮರರಾದ ವಕೀಲ ಈಶ್ವರ ಐಯ್ಯರ್ ಅವರ ಚಿತಾಭಸ್ಮವನ್ನು, ನಿತ್ಯಾನಂದರು ಕಾಶಿಯ ಪವಿತ್ರ ಗಂಗಾ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ನಿತ್ಯಾನಂದರು ಕಾಶಿ ಕ್ಷೇತ್ರದಲ್ಲಿ ಅನುಷ್ಠಾನ ಮಾಡುತ್ತ ದಿನಗಳ ಕಳೆಯುತ್ತಾರೆ. ಫಲ ಆಹಾರ, ದ್ರವ ಆಹಾರಗಳನ್ನು ಮಿತವಾಗಿ ಸೇವನೆ ಮಾಡುತ್ತಿದ್ದರು. ಅದು ಅವರು ವಿಧಿಸಿಕೊಂಡಿರುವ ಆಹಾರ ಸಂಹಿತೆ ಆಗಿತ್ತು. ನಂತರದ ದಿನಗಳಲ್ಲಿ ನಿತ್ಯಾನಂದರು ತಿಲಬಂಡೇಶ್ವರ ಕ್ಷೇತ್ರದಲ್ಲಿ ಸ್ವಲ್ಪ ಸಮಯ ಕಳೆಯುತ್ತಾರೆ. ನಂತರ ವಂಡೇಕಾಶಿಯ ಗುಹೆಗಳಿರುವ ಸ್ಥಳಗಳದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿಯ ಕಾಲಭೈರವ ದೇವಾಲಯದ ಬಳಿ 41 ದಿನಗಳ ಕಾಲ ತಪಸ್ಸಿನಲ್ಲಿ ಕಳೆಯುತ್ತಾರೆ. ನಂತರದಲ್ಲಿ ಅವರು ವಿದೇಶಗಳ ಪರ್ಯಟನೆ ನಡೆಸುತ್ತಾರೆ. ಬರ್ಮಾ, ಶ್ರೀಲಂಕಾ ಮೊದಲಾದ ದೇಶಗಳಿಗೂ ಸಂಚರಿಸುತ್ತಾರೆ. ನಿತ್ಯಾನಂದರು ಪವಾಡಗಳ ತೋರ್ಪಡಿಸಿ ಅಲ್ಲಿಯ ದೇಶವಾಸಿಗಳನ್ನು ಅಚ್ಚರಿ ಮೂಡಿಸುತ್ತಾರೆ. ಈ ಇಲ್ಲಾ ವಿಚಾರಗಳನ್ನು ನಿತ್ಯಾನಂದರ ಚರಿತೆಗಳ ಕೃತಿಗಳಲ್ಲಿ ಲೇಖಕರು ಉಲ್ಲೇಖಿಸಿರುವುದು ಕಂಡು ಬರುತ್ತದೆ. ರಾಷ್ಟ್ರಸಂತ ಸ್ವಾಮಿ ವಿವೇಕಾನಂದರು ಜುಲೈ 14, 1902 ರಲ್ಲಿ ಸಮಾಧಿ ಪಡೆಯುವಾಗ ನಿತ್ಯಾನಂದ ಸ್ವಾಮಿಗಳು ಚೆನೈನಲ್ಲಿ ಇದ್ದರಂತೆ. ಅವರು ಗಣೇಶಪುರಿಯಲ್ಲಿ ಗತ ನೆನಪುಗಳ ಮೆಲುಕು ಹಾಕುವಾಗ ಈ ವಿಚಾರ ಭಕ್ತರಲ್ಲಿ ಪ್ರಸ್ತಾಪಿಸುತಿದ್ದರು.

ಈಶ್ವರ್ ಐಯ್ಯರ್ ಅವರು ಮೃತಪಟ್ಟಾಗ ಅವರ ಎಲ್ಲಾ ಕಾರ್ಯಗಳು ಮುಗಿದ ಬಳಿಕ ನಿತ್ಯಾನಂದರು ಕಾಶಿಗೆ ಹೋಗಿರುವುದು ಕೊಯಿಲಾಂಡಿಯ ಜನತೆಗೆ ತಿಳಿದಿರುತ್ತದೆ. ಆದರೆ ಅದರ ನಂತರದ ದಿನಗಳಲ್ಲಿ ನಿತ್ಯಾನಂದರು ಏಲ್ಲಿಗೆ ಹೋದರು..? ಏಲ್ಲಿದ್ದಾರೆ..! ಅವರ ಬಗೆಗೆ ಯಾವೊಂದು ಮಾಹಿತಿಯೂ ಕೊಯಿಲಾಂಡಿ ಗ್ರಾಮದ ಜನರಿಗೆ ತಿಳಿದುಬರುವುದಿಲ್ಲ. ಹೀಗೆ ಒಂದೆರಡು ವರ್ಷಗಳು ಕಳೆದಿರ ಬೇಕು. ಮಳೆಗಾಲದ ಪ್ರಾರಂಭದ ದಿನಗಳು. ಊರಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದವು. ಅಲ್ಲಿಯೇ ಹಾದು ಹೋಗಿರುವ ರೈಲು ಪಟ್ಟಿಯನ್ನು ದಾಟಿಕೊಂಡು ಆ ಭಾಗದಲ್ಲಿರುವ ಗೆದ್ದೆಗಳಲ್ಲಿ ಕೆಲಸ ಮಾಡಲು ಕೃಷಿ ಕಾರ್ಮಿಕರ ಗುಂಪೊಂದು ತೆರಳುತಿತ್ತು. ಆ ಗುಂಪಿನಲ್ಲಿದ್ದ ಕಣ್ಣನ್ ಕಾಲು ಎಡವಿ ನೆಲಕ್ಕೆ ಉರುಳುತ್ತಾನೆ. ಆತನಿಗಿರುವ ಅಪಸ್ಮಾರ ವ್ಯಾಧಿಯ ಬಾಧೆಯಿಂದ ಆತ ಬೀಳಲು ಕಾರಣವಾಗಿರುತ್ತದೆ. ತಕ್ಷಣ ಗುಂಪಿನ ಸಹ ಕಾರ್ಮಿಕರು ಕಣ್ಣನ್ ಅವನನ್ನು ಉಪಚರಿಸಲು ಮುಂದೆಬರುತ್ತಾರೆ.

ಆವಾಗ ಅಲ್ಲಿಗೆ ಸಫೂರ ದೇಹಕಾಯದ, ಕಪ್ಪು ಮೈಬಣ್ಣದ, ವ್ಯಕ್ತಿಯೊರ್ವ ಕಾರ್ಮಿಕರ ಸನಿಹ ಬರುತ್ತಾನೆ. ಆತನು ಎಲ್ಲರಿಗೂ ತೇಜೋಮಯನಾಗಿ ಕಂಡುಬರುತ್ತಾನೆ. ಕಣ್ಣನ್ ಸನಿಹ ಬಂದು ಆತನ ಬಾಯಿಯೊಳಗೆ ಭಸ್ಮವನ್ನು ಹಾಕುತ್ತಾನೆ. ತಕ್ಷಣದಲ್ಲಿ ಕಣ್ಣನ್ ಸಹಜಸ್ಥಿತಿಗೆ ಬರುತ್ತಾನೆ. ಕಣ್ಣು ಬಿಟ್ಟು ಸುತ್ತಲೂ ನೋಡುತ್ತಾನೆ. ಈ ಪವಾಡ ಕಂಡು ಎಲ್ಲರೂ ಅಚ್ಚರಿಪಡುತ್ತಾರೆ. ಈ ವ್ಯಕ್ತಿ ಯಾರಿರ ಬಹುದು..! ಊರಿಗೆ ಹೊಸಬನಾಗಿ ಕಾಣುತ್ತಾನೆ..! ಹೀಗೆಲ್ಲಾ ಸಂಶಯಗಳು ಸುಳಿದಾಡುತ್ತಿರುವಾಗ, ಗುಂಪಿನಲ್ಲಿದ್ದ ಒರ್ವ ಕಾರ್ಮಿಕನು, ಇತನು ಈ ಮೊದಲು ಚಾತು ನಾಯರ್- ಉನ್ನಿ ಅಮ್ಮ ದಂಪತಿಗಳು ಸಾಕಿದ ರಾಮ. ಈಶ್ವರ್ ಐಯ್ಯರ್ ಮನೆಯಲ್ಲಿ ಬೆಳೆದ ರಾಮ. ಈ ರಾಮನೇ ನಿತ್ಯಾನಂದ. ಇತ ಕೊಯಿಲಾಂಡಿ ಬಿಟ್ಟು ಬಹಳ ಸಮಯವಾಯಿತು, ಎಂದು ಹೇಳುತ್ತಾನೆ. ಆಗ ಎಲ್ಲರಿಗೂ ಸುಲಭವಾಗಿ ನಿತ್ಯಾನಂದರ ಪರಿಚಯವಾಗುತ್ತದೆ. ಎಲ್ಲರೂ ನಿತ್ಯಾನಂದರ ಚರಣಗಳಿಗೆ ನಮಸ್ಕರಿಸುತ್ತಾರೆ. ನಿತ್ಯಾನಂದರಲ್ಲಿ ಖಾಯಂ ಕೊಯಿಲಾಂಡಿ ಗ್ರಾಮದಲ್ಲಿ ವಾಸವಾಗಿರುವಂತೆ ವಿನಂತಿಸುತ್ತಾರೆ. ತನ್ನ ಗುರುತು ಹಿಡಿದ ಊರ ಜನರಕಂಡು ನಿತ್ಯಾನಂದರು ಸಂತೋಷ ವ್ಯಕ್ತಪಡಿಸುತ್ತಾರೆ.

ತಾರಾನಾಥ್‌ ಮೇಸ್ತ ಶಿರೂರು.

Advertisement

LEAVE A REPLY

Please enter your comment!
Please enter your name here