ಆಟಿಡೊಂಜಿ ದಿನ

0
325

ವರದಿ-ಚಿತ್ರ: ಸುನೀಲ್ ಬೇಕಲ್
ಬೆಳ್ತಂಗಡಿ ತಾಲೂಕು ಸಯಬ್ರಹ್ಮಣ್ಯ ಸ್ತಾನಿಕ ಬ್ರಾಹ್ಮಣ ಸಭಾ ಇದರ ವತಿಯಿಂದ ‘ಆಟಿಡೊಂಜಿ ದಿನ’ ವನ್ನು ಜು.24ರಂದು ಸಾಂಪ್ರದಾಯಿಕವಾಗಿ ಆಟಿಯ ತಿಂಡಿ-ತಿನಿಸುಗಳೊಂದಿಗೆ ಹಿಂದಿನ ವೇಷಭೂಷಣಗಳನ್ನು ಧರಿಸಿ ಆಚರಿಸಲಾಯಿತು. ನಾರಾವಿ ಮೋದನ ರಾವ್ ಮನಮೋಹಕವಾದ, ಆಕರ್ಷಣೀಯವಾದ, ಮರದ ಕೆತ್ತನೆ ಹಾಗೂ ಹಳೆಯ ಸಂಪ್ರದಾಯದ ರೀತಿಯಲ್ಲಿರುವ ಮನೆಯಲ್ಲಿ ಸಮಾಜ ಬಾಂಧವರ ಕೂಡುವಿಕೆಯಿಂದ ಉತ್ತಮ ರೀತಿಯಲ್ಲಿ ಆಚರಿಸಲಾಯಿತು.
 
naravi_ati dina1
 
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಡುಬಿದ್ರೆ ಸ್ತಾನಿಕ ಸಂಘದ ಅಧ್ಯಕ್ಷ ಮೋಹನ್ ರಾವ್ ಆಗಮಿಸಿ, ಸಂಘದ ಇಂತಹ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 
 
ಅಂದು ಸಂಘದ ಸದಸ್ಯರೆಲ್ಲ ಸಾಂಪ್ರದಾಯಿಕ ಉಡುಪಿನೊಂದಿಗೆ ಹಳೆಯ ಪದ್ಧತಿಯಲ್ಲಿ ಕಾಣಿಸಿಕೊಂಡು ಆಟಿಯ ದಿನಕ್ಕೆ ಮಹತ್ವ ನೀಡಿದರು.
 
 
ಸ್ತಾನಿಕ ಸಂಘದ ಅಧ್ಯಕ್ಷ ಧನಂಜಯ ರಾವ್, ಕಾರ್ಯದರ್ಶಿ ದಿನೇಶ್ ಕುಮಾರ್, ಉಪಾಧ್ಯಕ್ಷ ರಘಚಂದ್ರ ರಾವ್, ಮಹಿಳಾ ವಿಭಾಗದ ಅಧ‍್ಯಕ್ಷೆ ಕಾರ್ಯದರ್ಶಿ, ಯುವವೇದಿಕೆ ಅಧ್ಯಕ್ಷ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬಹಳ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು.
 
 
ಈ ಸಮಾರಂಭದಲ್ಲಿ ರಾಷ್ಟ್ರೀಯ ಖ್ಯಾತಿಯ ಬಾಲ ಪ್ರತಿಭೆ ಪೂರ್ವಿಯಿಂದ ನೃತ್ಯ ಹಾಗೂ ಹಾಡು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಲ್ಲದೆ ಅವಳನ್ನು ಸಂಘದ ವತಿಯಿಂದ ಅಭಿನಂದನಾ ಪೂರಕವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ನೆನಪಿಗಾಗಿ ಸ್ಥಳೀಯ ಸದಸ್ಯರೊಬ್ಬರು ತುಂಬಾ ಅನಾರೋಗ್ಯದಿಂದ ಇದ್ದಿ ಅವರಿಗೆ ‘ನೀರು ತುಂಬಿಸಿದ’ ಹಾಸಿಗೆಯನ್ನು(ವಾಟರ್ ಬೆಡ್) ನೀಡಲಾಯಿತು. ಅಲ್ಲದೆ ಸ್ಥಳೀಯ ಬೇರೆ ವರ್ಗದ ಅತೀ ಪ್ರತಿಭಾವಂತ ವಿದ್ಯಾರ್ಥಿಗಳಿಬ್ಬರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
 
 
ಸ್ತಾನಿಕ ಸಭಾದ ಸುಮಾರು 200 ಜನ ಸದಸ್ಯರು ಹಾಗೂ ಸುತ್ತಮುತ್ತಲಿನ ಇತರ ವರ್ಗದವರೂ ಭಾಗವಹಿಸಿ ಆನಂದಿಸಿದರು. ಆಟಿ ತಿಂಗಳಲ್ಲಿ ಮಾಡುವ ಕೆಸುವು, ಹಲಸು, ಮಾವುಗಳ ವಿಶೇಷ ಖಾದ್ಯಗಳನ್ನು ಮಾಡಲಾಗಿತ್ತು. ಸುಲ್ಕೇರಿ ವಸಂತ ರಾವ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here