ಆಗಸ್ಟ್ 20ರಂದು ಗೀತಂ ವಿವಿ 7ನೇ ಘಟಿಕೋತ್ಸವ

0
396

ಬೆಂಗಳೂರು ಪ್ರತಿನಿಧಿ ವರದಿ
ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ (ಗೀತಂ) ತನ್ನ 7ನೇ ಘಟಿಕೋತ್ಸವವನ್ನು ವಿಶಾಖಪಟ್ಟಣ ಕ್ಯಾಂಪಸ್ ನಲ್ಲಿ ಆಗಸ್ಟ್ 20ರಂದು ಆಚರಿಸಿಕೊಳ್ಳಲಿದೆ. ಸಮಾರಂಭದಲ್ಲಿ ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಸೈನ್ಸ್, ಫಾರ್ಮಸಿ, ಆರ್ಕಿಟೆಕ್ಚರ್ ಮತ್ತು ಇಂಟರ್ನ್ಯಾಷನಲ್ ಬ್ಯುಸಿನೆಸ್ ಕೋರ್ಸ್ ಗಳನ್ನು ಯಶಸ್ವಿಯಾಗಿ ಪೂರೈಸಿದ 2,625 ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೆ ಹಾಗೂ 35 ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಗುತ್ತದೆ. ಮೊದಲ 50 ರ್ಯಾಂಕ್ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರತಿಭಾನ್ವಿತರಿಗೆ 13 ಚಿನ್ನದ ಪದಕ ಕೂಡ ವಿತರಿಸಲಾಗುವುದು ಎಂದು ಸಂಸ್ಥೆಯ ಉಪ ಕುಲಪತಿ ಪ್ರೊ ಎಂಎಸ್ ಪ್ರಸಾದ್ ರಾವ್ ಹೇಳಿದರು.
 
 
7ನೇ ಘಟಿಕೋತ್ಸವದಲ್ಲಿ ಗೀತಂ ವಿವಿ ಉಪ ಕುಲಪತಿಗಳು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಮಾಧವನ್ ನಾಯರ್ ರಾಜೀವನ್ ಹಾಗೂ ಇತರ ಮೂವರು ಖ್ಯಾತ ವ್ಯಕ್ತಿಗಳಿಗೆ ಗೌರವ ವಿಜ್ಞಾನ ಡಾಕ್ಟರೇಟ್ ಕೂಡ ಪ್ರದಾನ ಮಾಡಲಿದ್ದಾರೆ.
 
ಡಾ. ಮಾಧವನ್ ನಾಯರ್ ರಾಜೀವನ್, ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಪ್ರೀಂ ಕೋರ್ಸ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಮಾಜಿ ಮಹಾ ನಿರ್ದೇಶಕರಾದ ಪ್ರೊ. ನಿರ್ಮಲ್ ಕುಮಾರ್ ಗಂಗೂಲಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಐ. ಇಳೆಯರಾಜಾ ಅವರಿಗೆ ಕೂಡ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿವಿ ಉಪ ಕುಲಪತಿ ಎಂಎಸ್ ಪ್ರಸಾದ್ ರಾವ್ ಪ್ರಕಟಿಸಿದರು.
 
 
ಸಹಾಯಕ ಉಪ ಕುಲಪತಿ ಪ್ರೊ ಕೆ. ಶಿವರಾಮ ಕೃಷ್ಣ, ರಿಜಿಸ್ಟ್ರಾರ್ ಪ್ರೊ. ಎಂ. ಪೋತರಾಜು ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here