ಆಗಸ್ಟ್ ತಿಂಗಳಲ್ಲಿ ಎನ್ನೇಲ್ಲಾ ಆಯ್ತು…

0
808

ವಿಶೇಷ ವರದಿ
2016ರ ಎಂಟನೇ ತಿಂಗಳಾದ ಜುಲೈನಲ್ಲಿ ಹಲವು ಘಟನೆಗಳು ನಡೆದು ಇತಿಹಾಸ ಸೇರಿದೆ. ಸೆಪ್ಟಂಬರ್ ನಲ್ಲಿ ಹಲವು ಹಬ್ಬಗಳು ಬಂದು ಹೋದವು. ನಾಗರಪಂಚಮಿ, ಆಟಿ ಅಮಾವಾಸ್ಯೆ/ಭೀಮಾನ ಅಮಾವಾಸ್ಯೆ, ಉಪಕರ್ಮ, ರಾಖಿಹಬ್ಬ, ಬರಮಹಾಲಕ್ಷ್ಮೀ ಹಬ್ಬಗಳನ್ನು ಆಚರಿಸಲಾಗಿದೆ. ಈ ತಿಂಗಳಲ್ಲಿ ನಡೆದ ರಾಖಿಹಬ್ಬ ಭಾರತೀಯರಿಗೆ ಬಹಳ ವಿಶೇಷವಾಗಿತ್ತು. ಏಕೆಂದರೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರ್ತಿಯರಿಬ್ಬರು ಬೆಳ್ಳಿ ಮತ್ತು ಕಂಚಿನ ಪದಕ ದೊರಕಿಸಿಕೊಟ್ಟಿದ್ದರು. ಇನ್ನು ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ನಿಶ್ಚಿತಾರ್ಥವೂ ಬಹಳ ಅದ್ದೂರಿಯಾಗಿ ನಡೆಯಿತು.
 
ಸಿಎಂ ಪುತ್ರ ಅಂತ್ಯಕ್ರಿಯೆ
ಸಿಎಂ ಸಿದ್ದರಾಮಯ್ಯ ಅವರ ಮಗ ರಾಕೇಶ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು.ಟಿ.ಕಾಟೂರಲ್ಲಿ ಅಂತ್ಯಕ್ರಿಯೆ ನಡೆಯಿತು. ಬೆಲ್ಜಿಯಂ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್(39) ಕಳೆದ ಒಂದು ವಾರದಿಂದ ಬೆಲ್ಜಿಯಂನ ಬ್ರಷಲ್ಸ್ ನ ಆಂಟ್ ವರ್ಪ್ ಯೂನಿರ್ವಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಕೇಶ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 30ರಂದು ಕೊನೆಯುಸಿರೆಳೆದಿದ್ದಾರೆ. ಇವರು ಪ್ಯಾಂಕ್ರಿಯಾಸ್ ತೊಂದರೆಯಿಂದ ಬಳಲುತ್ತಿದ್ದರು.
ತೈಲ ಬೆಲೆಯಲ್ಲಿ ಇಳಿಕೆ
ವಾಹನ ಸವಾರರಿಗೆ ಸಂತಸದ ಸುದ್ದಿಯೊಂದಿದೆ. ತೈಲ ಬೆಲೆಯಲ್ಲಿ ಇಳಿಕೆಯಾಗಿತ್ತು. ಪ್ರತಿ ಲೀಟರ್ ಗೆ 1.42 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.01 ರೂಪಾಯಿ ಇಳಿಕೆ ಮಾಡಿತ್ತು.
ವರುಣನ ಅರ್ಭಟಕ್ಕೆ ಉತ್ತರ ತತ್ತರ
ಉತ್ತರ ಭಾರತದಾದ್ಯಂತ ಭಾರೀ ವರ್ಷಧಾರೆಯಾಗಿತ್ತು. ಬಿಹಾರ ಮೇಘಾಲಯ ಉತ್ತರಾಖಂಡ್​ ಅಸ್ಸಾಂ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿದು ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು..
ಕರ್ನಾಟಕದ ವೀರಯೋಧ ಹಸನ್ ಸಾಬ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದರು. ಗ್ರೆನೇಡ್ ಸ್ಫೋಟಗೊಂಡು ಯೋಧ ಸಾವನ್ನಪ್ಪಿದ್ದರು. ಹುಟ್ಟೂರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಮ ಸೈದಾಪುರ ಅಂತ್ಯ ಕ್ರಿಯೆ ನಡೆದಿದೆ. ಸ್ಥಳದಲ್ಲಿ ಧಾರವಾಡ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸೇನಾಧಿಕಾರಿಗಳು ಉಪಸ್ಥಿತರಿದ್ದರು.
ಕೋರ್ಟ್ ಶೌಚಾಲಯದಲ್ಲಿ ಶಬ್ದ
ಬಾಂಬ್ ಸ್ಫೋಟ ಮಾದರಿಯಲ್ಲಿ ಸ್ಫೋಟಗೊಂಡ ಶಬ್ದ ಕೇಳಿಬಂದ ಘಟನೆ ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ಕೇಳಿ ಬಂದಿತ್ತು. ಶೌಚಾಲಯದಲ್ಲಿ ಸ್ಫೋಟಕ ಸಾಮಾಗ್ರಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೋರ್ಟ್ ಶೌಚಾಲಯದ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಶ್ವಾನದಳ, ಸ್ಫೋಟಕ ಪತ್ತೆ ದಳ ಸ್ಥಳ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ಲಲ್ಷ್ಮೀಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಆಟಿ/ಭೀಮನ ಅಮಾವಾಸ್ಯೆ
ಆಷಾಡ ಮಾಸದ ಕಡೆಯ ದಿನ ಮತ್ತು ಭೀಮನ ಅಮವಾಸ್ಯೆ ದಿನವಾಗಿತ್ತು. ಮಹಿಳೆಯರು ತಮ್ಮ ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ, ಓಜಸ್ಸು, ತೇಜಸ್ಸುಗಳ ವೃದ್ಧಿಗಾಗಿ ಭೀಮನ ಅಮವಾಸ್ಯೆ ಆಚರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಲ್ಲಿ ಭೀಮನ ಅಮವಾಸ್ಯೆ ಎಂದು ಆಚರಿಸಿದರೆ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನಲ್ಲಿ ಈ ಅಮವಾಸ್ಯೆಯನ್ನು ಆಟಿ ಅಮವಾಸ್ಯೆ ಎಂದು ಆಚರಿಸಿಕೊಂಡಿದ್ದಾರೆ.
ತನಿಖೆ ಚುರುಕು
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಸ್ಫೋಟ ಹಿನ್ನೆಲೆಯಲ್ಲಿ ತನಿಖೆ ಚುರುಕುಕೊಂಡಿತ್ತು. ಆವರಣದಲ್ಲಿ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸಿದ್ದಾರೆ.
24 ಅಗತ್ಯ ಔಷಧಗಳ ಬೆಲೆ ಇಳಿಕೆ
ಕ್ಯಾನ್ಸರ್‌, ಎಚ್‌ಐವಿ, ಬ್ಯಾಕ್ಟೀರಿಯಾ ಸೋಂಕುಗಳು, ಸೇರಿದಂತೆ 24 ಅಗತ್ಯ ಔಷಧಗಳ ಬೆಲೆಯಲ್ಲಿ ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) 24 ಔಷಧಗಳ ಬೆಲೆಯನ್ನು ಪರಿಷ್ಕರಿಸಿದೆ. ಔಷಧ ಬೆಲೆಯಲ್ಲಿ ಸರಾಸರಿ ಶೇ 25ರಷ್ಟು ಕಡಿಮೆಯಾಗಿದೆ. ಕೆಲವು ಔಷಧಗಳ ಬೆಲೆ ಶೇ 10–15ರಷ್ಟು ಕಡಿಮೆಯಾಗಿದ್ದರೆ ಇತರ ಕೆಲವು ಔಷಧಗಳ ಬೆಲೆಯಲ್ಲಿ ಶೇ 30–35ರಷ್ಟು ಕಡಿಮೆಯಾಗಿದೆ ಎಂದು ಎನ್‌ಪಿಪಿಎ ಅಧ್ಯಕ್ಷ ಭೂಪೇಂದ್ರ ಸಿಂಗ್‌ ತಿಳಿಸಿದ್ದರು.
ನೆಲಬಾಂಬ್ ಸ್ಫೋಟ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿನ ಬೆಟಾಲಿಕ್ ಸೆಕ್ಟರ್ ನಲ್ಲಿ ಸಂಭವಿಸಿದ್ದ ನೆಲಬಾಂಬ್ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಯೋಧರಾದ ಬಸವರಾಜ ಚನ್ನಪ್ಪ ಪಾಟೀಲ ಹಾಗೂ ಹಸನ್ ಸಾಬ್ ಇಮಾನ್ ಸಾಬ್ ಖುದಾವಂದ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸರ್ಕಾರಿ ಬಂಗಲೆ ಖಾಲಿ ಮಾಡಿ: ಮಾಜಿ ಸಿಎಂಗಳಿಗೆ ಸುಪ್ರೀಂ ಆದೇಶ
ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳಲ್ಲಿನ ತಮ್ಮ ವಾಸ್ತವ್ಯವನ್ನು ಜೀವನ ಪರ್ಯಂತ ಮುಂದುವರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಉತ್ತರ ಪ್ರದೇಶದ ಸರ್ಕಾರೇತರ (ಎನ್​ಜಿಒ) ಸಂಘಟನೆ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿತ್ತು. ನ್ಯಾಯಮೂರ್ತಿ ಅನಿಲ್.ಆರ್.ದವೆ, ಯು.ಯು. ಲಲಿತ್ ಮತ್ತು ಎಲ್.ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿಗಳು ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತಿಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿತ್ತು.
ಸಚಿವರ ನಿವಾಸದ ಮೇಲೆ ಬಾಂಬ್ ದಾಳಿ
ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಸಚಿವ ನಹೀಂ ಅಖ್ತರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದರು. ಶ್ರೀನಗರ ಪರ್ರಯಪೊರ ಪ್ರದೇಶದಲ್ಲಿರುವ ನಯೀಂ ಅಖ್ತರ್ ಅವರ ನಿವಾಸದ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದರು.
ಗುಜರಾತ್ ಸಿಎಂ ಆನಂದಿಬೆನ್ ಪಟೇಲ್ ರಾಜೀನಾಮೆ
ಗುಜರಾತ್ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಕ್ಕಿನ ಮಹಿಳೆ ಖ್ಯಾತಿಯ ಆನಂದಿ ಬೆನ್ ಪಟೇಲ್ ಅವಧಿ ಪೂರ್ಣಗೊಳ್ಳುವ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಡುಗೆ ಅನಿಲ ಏರಿಕೆ
ಸಬ್ಸಿಡಿ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 1ರೂಪಾಯಿ 93 ಪೈಸೆ ಏರಿಕೆಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ಬಾರಿ ಅಡುಗೆ ಅನಿಲದ ಬೆಲೆ ಏರಿಕೆಗೊಂಡಿದೆ.
ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ
ಮುಂಬೈ-ಗೋವಾ ಹೆದ್ದಾರಿಯಲ್ಲಿ ಭಾರೀ ದುರಂತ ಸಂಭವಿಸಿದ್ದು. ಭಾರೀ ಮಳೆಯಿಂದ ಸಾವಿತ್ರಿ ನದಿ ಉಕ್ಕಿ ಹರಿದಿದೆ. ಪ್ರವಾಹಕ್ಕೆ ಸಾವಿತ್ರಿ ನದಿ ಸೇತುವೆ ಕೊಚ್ಚಿ ಹೋಗಿತ್ತು. ಪ್ರವಾಹದ ರಭಸಕ್ಕೆ ರಾಯಘಡ್ ಜಿಲ್ಲೆಯ ಮಹಾಡ್ ನಲ್ಲಿರುವ ಸೇತುವೆ ಧ್ವಂಸವಾಗಿ್ತು. 10ರಿಂದ 15 ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಸರ್ಕಾರಿ ಬಸ್ ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಪ್ರವಾಹದಲ್ಲಿ 22 ಮಂದಿ ಕಣ್ಮರೆಯಾಗಿದ್ದರು.
ಉಗ್ರ ಅಬು ಜುಂದಾಲ್ ಸೇರಿದಂತೆ 7 ಜನರಿಗೆ ಜೀವಾಧಿ ಶಿಕ್ಷೆ
2006ರಲ್ಲಿ ಔರಂಗಾಬಾದ್​ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 26/11ಮುಂಬೈ ದಾಳಿಯ ಸೂತ್ರಧಾರ ಅಬು ಜುಂದಾಲ್ ಸೇರಿ 7 ಜನರಿಗೆ ಮೋಕಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
‘ರೈ’ ಚಿತ್ರ ನಿರ್ದೇಶಕನಿಗೆ ನೋಟಿಸ್
‘ರೈ’ ಚಿತ್ರ ನಿರ್ದೇಶಕ ರಾಂಗೋಪಾಲ್ ವರ್ಮಾಗೆ ನೋಟಿಸ್ ಬಂದಿತ್ತು. ಸದ್ಯ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕುಖ್ಯಾತ ಪಾತಕಿ ಯೂಸಫ್ ಬಚ್ಚಾಖಾನ್ ನೋಟಿಸ್ ಕಳುಹಿಸಿದ್ದ. ಮುತ್ತಪ್ಪ ರೈ ಜೀವನಾಧಾರಿತ ‘ರೈ’ ಚಿತ್ರದ ಪಾತ್ರಕ್ಕೂ ನನಗೂ ಸಂಬಂಧವಿದೆ ಎಂದು ಬಚ್ಚಾಖಾನ್ ತಿಳಿಸಿದ್ದ. ಈ ಚಿತ್ರದ ಸ್ಕ್ರಿಪ್ಟ್ ತೋರಿಸುವಂತೆ ಬಚ್ಚಾಖಾನ್ ವಕೀಲರ ಮೂಲಕ ನಿರ್ದೇಶಕ ರಾಂಗೋಪಾಲ್ ಗೆ ನೋಟಿಸ್ ಜಾರಿ ಮಾಡಿದ್ದಾನೆ.
ಧರ್ಮಂಬೀರ್ ರಿಯೋ ಕನಸು ಭಗ್ನ
ಡೋಪ್ ಟೆಸ್ಟ್​ನಲ್ಲಿ 200ಮೀ ಓಟಗಾರ ಧರ್ಮಂಬೀರ್ ಸಿಂಗ್(36) ವಿಫಲವಾಗಿತ್ತು. ಧರ್ಮಂಬೀರ್ ಸಿಂಗ್​ರ ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಿದ್ದು, ಮೊದಲ ಪರೀಕ್ಷೆಯ ಫಲಿತಾಂಶದಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿತ್ತು.
ರಾಜ್ಯಸಭೆಯಲ್ಲಿ ಜೆಎಸ್ ಟಿ ಮಂಡನ
ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಮಂಡಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಲ್ ಮಂಡನೆ ಮಾಡಿದ್ದರು.
ತಪ್ಪಿದ ದುರಂತ
ಸರ್ಕಾರಿ ಬಸ್ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಘಟನೆ ಬೆಂಗಳೂರಿನ ಓಕಳಿಪರಂ ಬಳಿ ಸಂಭವಿಸಿತ್ತು. ಮರ ಬಿದ್ದ ಪರಿಣಾಮ ಕೆಎಸ್ ಆರ ಟಿ ಸಿ ಬಸ್ ನ ಗಾಜು ಪುಡಿಪುಡಿಯಾಗಿತ್ತು.
ತಪ್ಪಿದ್ದ ವಿಮಾನ ದುರಂತ
ದುಬೈನಲ್ಲಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಭಾರೀ ದುರಂತ ತಪ್ಪಿತ್ತು. ಅಪಾಯಕಾರಿ ರೀತಿಯಲ್ಲಿ ವಿಮಾನ ಭೂಸ್ಪರ್ಶ ಮಾಡಿದೆ. ಏರ್ ಎಮಿರೇಟ್ಸ್ ಸಂಸ್ಥೆಗೆ ಸೇರಿದ ಇಕೆ 521 ವಿಮಾನ ಭೂಸ್ಪರ್ಶ ಮಾಡಿತ್ತು. ವಿಮಾನ ಕೇರಳದ ತಿರುವನಂತಪುರಂದಿಂದ ದುಬೈಗೆ ಬಂದಿತ್ತು. ಭೂಸ್ಪರ್ಶದ ನಂತರ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಂಜಿನ್ ಸ್ಪೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು. ವಿಮಾನದಲ್ಲಿ 282 ಪ್ರಯಾಣಿಕರಿದ್ದರು.
ಸಿಎಂ ಆಪ್ತ ಪೊಲೀಸರಿಗೆ ಶರಣು
ಮೈಸೂರು ಡಿಸಿ ಶಿಖಾಗೆ ಧಮ್ಕಿ ಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ. ಮರಿಗೌಡ ಶರಣಾಗಿದ್ದ. ಮರಿಗೌಡ ಕಳೆದ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ. ಈ ವೇಳೆ ನಿರೀಕ್ಷಣಾ ಜಾಮೀನು ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದ. ಎರಡು ದಿನಗಳ ಹಿಂದೆಯೂ ಮರಿಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಈತನ ಅರ್ಜಿಯನ್ನು ತಿರಸ್ಕರಿಸಿತ್ತು..
ಉಕ್ಕಿ ಹರಿಯುತ್ತಿರುವ ನದಿಗಳು
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗಿತ್ತು. ಕೃಷ್ಣಾ, ವೇದಗಂಗಾ, ದೂಧ್ ಗಂಗಾ ನದಿಗಳ ಒಳಹರಿವು ಹೆಚ್ಚಳವಾಗಿತ್ತು. ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಿವಿಧೆಡೆ 6 ಸೇತುವೆಗಳು ಜಲಾವೃತವಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರು ಸೇತುವೆ, ವೇದಗಂಗಾ ನದಿಯ ಜತ್ರಾಟ-ಭೀಮಶಿ ಮಾರ್ಗದ ಸೇತುವೆ, ಭೋಜವಾಡಿ-ಹುನ್ನರಗಿ, ಅಕ್ಕೋಳ-ಸಿದ್ನಾಳ ಬಳಿ ಸೇತುವೆ, ದೂಧ್ ಗಂಗಾ ನದಿಯ ಕಾರದಗಾ-ಭೋಜ ಬಳಿ ಸೇತುವೆ, ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತವಾಗಿದೆ. ಇದರಿಂದ ನದಿ ತೀರದ ನದಿ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ವಾಹನ ಸವಾರರೇ ಎಚ್ಚರ…
ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ. ಹೆಲ್ಮೆಟ್ ಹಾಕದಿದ್ರೆ 1 ಸಾವಿರ ದಂಡ, ಸೀಟ್ ಬೆಲ್ ಇಲ್ಲದೆ ಚಾಲನೆಗೆ ರೂ. 1,000 ದಂಡ, ರಸ್ತೆ ನಿಯಮ ಉಲ್ಲಂಘನೆಗೆ ರೂ.500 ದಂಡ, ಡ್ರಂಕ್ ಆ್ಯಂಡ್ ಡ್ರೈವ್ 10 ಸಾವಿರ ಫೈನ್, ಪರವಾನಗಿ ರಹಿತ ವಾಹನ ಚಾಲನೆಗೆ ರೂ.5,000, ಇನ್ಸೂರೆನ್ಸ್ ಇಲ್ಲದೆ ಚಾಲನೆಗೆ ರೂ.2,000 ಫೈನ್. ಹೌದು ಇಂಥ ಕಠಿಣ ನಿಯಮಗಳನ್ನೊಳಗೊಂಡ ವಿಧೇಯಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ದಂಡದ ಹೆಸರಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ಜಾಗೃತಿಯನ್ನು ಮೂಡಿಸಲು ಮುಂದಾಗಿದೆ.
ಶಂಕಿತ ಉಗ್ರನ ಅಟ್ಟಹಾಸ
ಲಂಡನ್ ನಲ್ಲಿ ಶಂಕಿತ ಉಗ್ರನ ಅಟ್ಟಹಾಸ ಮೆರೆದಿದ್ದು, ಸೆಂಟ್ರಲ್ ಲಂಡನ್ ನಲ್ಲಿ ಶಂಕಿತ ಉಗ್ರನ ಮೇಲೆ ದಾಳಿ ನಡೆಸಲಾಗಿದೆ. ಶ0ಕಿತ ಉಗ್ರ ಕಳೆದ ರಾತ್ರಿ ಚಾಕುವಿನಿಂದ ಜನರ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 6 ಮಂದಿಗೆ ಗಂಭೀರ ಗಾಯಗಳಾಗಿತ್ತು.
ಚೀನಾಗೆ ಕಠಿಣ ಸಂದೇಶ ರವಾನೆ
ನಿರಂತರವಾಗಿ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಚೀನಾಗೆ ಕಠಿಣ ಸಂದೇಶ ರವಾನಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಈಶಾನ್ಯ ಭಾರತದ ಗಡಿಗಳಲ್ಲಿ ಇಂಡೋ-ರಷ್ಯಾ ಜಂಟಿ ನಿರ್ಮಾಣದ ಅತ್ಯಾಧುನಿಕ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ನಿಯೋಜನೆಗೆ ಸಮ್ಮತಿ ನೀಡಿತ್ತು.
ಗಣೇಶ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಇಲ್ಲೊಂದು ಯುವತಿಯೊಬ್ಬಳು ಗೋಲ್ಡನ್ ಸ್ಟಾರ್ ಗಣೇಶ ನನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಳು. ಸ್ಟೈಲ್ ಕಿಂಗ್ ಗೆ ದಾವಣಗೆರೆ ಚೆಲುವೆ ಮನಸೋತಿದ್ದಳು. ಗಣೇಶ್ ಅಂದ್ರೆ ಸಾಕು ಅದೇನೋ ಉಲ್ಲಾಸ-ಉತ್ಸಾಹ ಅಂತಾಳೆ ಈ ಯುವತಿ. ದಾವಣೆಗೆರೆಯ ಯುವತಿಗೆ ಹುಚ್ಚು ಪ್ರೀತಿ ಎಂದರೂ ತಪ್ಪಗಲಾರದು. ಯುವತಿ ಪುಷ್ಪಲತಾ ನಟ ಗಣೇಶ್ ನನ್ನೇ ಕನವರಿಸುತ್ತಿದ್ದಾಳೆ. ಗೋಲ್ಡನ್ ಸ್ಟಾರ್ ಅಂದ್ರೆ ತುಂಬಾ ಇಷ್ಟವಂತೆ.ನೀನೇ ನನ್ನ ಗಂಡ ಅಂತಿದ್ದಾಳೆ ಈಕೆ. ಗಣೇಶ್ ನೋಡಲು ಚೆನ್ನಾಗಿದ್ದಾರೆಂದು ಪ್ರೀತಿ ಮಾಡುತ್ತಿದ್ದೇನೆ ಎಂದು ಪುಷ್ಪಲತಾ ಹೇಳಿದ್ದಳು.
ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ರೈತರಿಗೆ ಸಾಲ ನೀಡುವ ಗುರಿ
ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 11 ಸಾವಿರ ಕೋಟಿ ರೂ. ಮೊತ್ತದ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಹೆಚ್. ಎಸ್. ಮಹದೇವಪ್ರಸಾದ್ ಅವರು ತಿಳಿಸಿದ್ದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವರು ಹಿಂದಿನ ಸರ್ಕಾರ 5 ವರ್ಷದಲ್ಲಿ 75 ಲಕ್ಷ ರೈತರಿಗೆ 25,011 ಕೋಟಿ ರೂ. ಸಾಲ ನೀಡಿದ್ದರೆ ನಮ್ಮ ಸರ್ಕಾರ ಬಂದ ಮೂರು ವರ್ಷಗಳಲ್ಲಿ ಸುಮಾರು 32,476 ಕೋಟಿ ರೂ ಸಾಲ ನೀಡಿದ್ದು, ಕಳೆದ ಸಾಲಿನಲ್ಲಿ 800 ಕೋಟಿ ರೂ. ಬಡ್ಡಿ ಬಾಬ್ತು ಹಣವನ್ನು ರೈತರಿಗೆ ನೀಡಲಾಗಿದೆ ಎಂದರು.
ಜಂಬೂ ಸವಾರಿ ಬಗ್ಗೆ ಗೊಂದಲ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ಜಂಬೂಸವಾರಿ ಯಾವ ದಿನ ನಡೆಸಬೇಕು ಎಂಬ ಗೊಂದಲ ಶುರುವಾಗಿತ್ತು. ಕೊನೆಗೂ ಚರ್ಚೆ ಬಳಿಕ ಅಕ್ಟೋಬರ್ 11ರ ವಿಜಯದಶಮಿಯಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ಜಂಬೂಸವಾರಿ ನಡೆಸಲು ನಿರ್ಧರಿಸಲಾಗಿತ್ತು. ಈ ಸಂದರಭದಲ್ಲಿ ದಸರಾ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಯಿತು.
ಇಸ್ಲಾಮಾಬಾದಿನಲ್ಲಿ ಕೇಂದ್ರ ಗೃಹ ಸಚಿವ
ಎರಡು ದಿನಗಳ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೆರಳಿದ್ದರು. ರಾಜನಾಥ್ ಆಗಮನವನ್ನು ಖಂಡಿಸಿ ವಿಮಾನ ನಿಲ್ದಾಣದಲ್ಲಿ ಧಾರ್ಮಿಕ ಹಾಗೂ ಉಗ್ರ ಸಂಘಟನೆ ಜತೆ ಗುರುತಿಸಿಕೊಂಡಿರುವ 2 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ ಘಟನೆ ನಡೆದಿತ್ತು.
ಮುಂದುವರಿದ ಪ್ರಕ್ಷುಬ್ಧ ಪರಿಸ್ಥಿತಿ
ಕಾಶ್ಮೀರ ಕಣಿವೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿತ್ತು. ಇದರಿಂದ ಕಾಶ್ಮೀರದಲ್ಲಿ 28 ದಿನಗಳಿಂದ ಕರ್ಫ್ಯೂ ಜಾರಿಯಲ್ಲಿತ್ತು. ಭಾರತೀಯ ಸೇನೆ ಕಾಶ್ಮೀರದ ಎಲ್ಲೆಡೆ ತೀವ್ರ ಕಟ್ಟೆಚ್ಚರ, ಭದ್ರತೆ ಹೆಚ್ಚಿಸಿತ್ತು. ಕಾಶ್ಮೀರದ ಪ್ರಕ್ಷುಬ್ಧ ಸ್ಥಿತಿ ಜಮ್ಮು ಪ್ರದೇಶಕ್ಕೂ ವ್ಯಾಪಿಸಿದೆ. ಕಶ್ತವಾರ್, ಜಮ್ಮುವಿನಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಭೀಕರ ದುರಂತ
ರಸ್ತೆ ಮೇಲೆ ಮಲಗಿದ್ದವರ ಮೇಲೆ ಬೃಹತ್ ಟ್ರಕ್ ಹರಿದ ಭೀಕರ ಘಟನೆ ಪಂಜಾಬ್ ನ ಕಪುರ್ತಲಾದಲ್ಲಿ ಸಂಭವಿಸಿತ್ತು.
ಈ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದ.
ಲೋಕಸಭೆಯಲ್ಲಿ ಮಹದಾಯಿ ಪ್ರಸ್ತಾಪ
ಲೋಕಸಭೆಯಲ್ಲಿ ಮಹದಾಯಿ ನದಿ ನೀರು ವಿವಾದ ಪ್ರಸ್ತಾಪವಾಗಿತ್ತು. ಶೂನ್ಯ ವೇಳೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ಪ್ರಸ್ತಾಪಿಸಿದ್ದರು. ನದಿ ಜೋಡಣೆ ಅಗತ್ಯತೆಯನ್ನು ಸಂಸದ ಪ್ರಕಾಶ್ ಹುಕ್ಕೇರಿ ವಿವರಿಸಿದ್ದು, ರಾಜ್ಯದ 4 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಧಾರವಾಡ, ವಿಜಯಪುರ, ಗದಗ, ಬೆಳಗಾವಿಯಲ್ಲಿ ತೊಂದರೆಯಿದೆ ಎಂದು ಲೋಕಸಭೆಯಲ್ಲಿ ಸಂಸದ ಹುಕ್ಕೇರಿ ಹೇಳಿದ್ದರು.
ಭಯೋತ್ಪಾದಕರ ಅಟ್ಟಹಾಸ
ಅಸ್ಸಾಂನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡಿದ ಗಟನೆ ಅಸ್ಸಾಂನ ಕೋಕ್ರಝಾರ್ ನಲ್ಲಿ ಸಂಭವಿಸಿತ್ತು. ಉಗ್ರರು 12 ಮಂದಿ ಅಮಾಯಕರನ್ನು ಹತ್ಯೆ ಮಾಡಿದ್ದರು.
ಗಾಂಜಾ ವಶ
ಮಂಗಳೂರಿನಲ್ಲಿ ಗಾಂಜಾ ಸಾಗಣೆಯ ಜಾಲವನ್ನು ಪತ್ತೆ ಮಾಡಿದ ಸಿಸಿಬಿ ಪೊಲೀಸರು ಸುಮಾರು 10.50 ಲಕ್ಷ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದರು.
ಬಾರ್ ಸ್ಫೋಟ
13 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಫ್ರಾನ್ಸ್ ನ ರೋಯಿನ್ ನಗರದ ಬಾರೊಂದರಲ್ಲಿ ನಡೆದಿತ್ತು. ಸ್ಫೋಟವಾದ ಬಳಿಕ ಅಪಾರ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು.
ರಿಯೋ ಒಲಿಂಪಿಕ್ಸ್ ಅದ್ದೂರಿ ಚಾಲನೆ
ಬ್ರೆಜಿಲ್ ನಲ್ಲಿ ರಿಯೋ ಒಲಿಂಪಿಕ್ಸ್ ವರ್ಣರಂಜಿತವಾಗಿ ಚಾಲನೆ ದೊರೆತಿತ್ತು. ಬ್ರೆಜಿಲಿಯನ್ ಮ್ಯಾರಥಾನ್ ರನ್ನರ್ ವಾಂಡೆರ್ಲಿ ಡಿ ಲಿಮಾ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಮರಕಾನ ಮೈದಾನಕ್ಕೇ ಆಗಮಿಸಿ, ಒಲಿಂಪಿಕ್ ಜ್ವಾಲೆಯನ್ನು ಹತ್ತಿಸುವ ಮೂಲಕ ಬ್ರೆಜಿಲ್’ನಲ್ಲಿ ನಡೆಯುತ್ತಿರುವ 2016 ರಿಯೊ ಒಲಿಂಪಿಕ್ಸ್’ಗೆ ಅಧಿಕೃತ ಚಾಲನೆ ನೀಡಿದ್ದರು.
ಚಿಕ್ಕೊಡಿಯಲ್ಲಿ ಮತ್ತೊಂದು ಸೇತುವೆ ಜಲಾವೃತ
ನೆರೆಯ ಮಹಾರಾಷ್ಟ್ರದಲ್ಲಿ ವರುಣನ ಅರ್ಭಟ ಮುಂದುವರಿದ ಪರಿಣಾಮ ಚಿಕ್ಕೊಡಿ ಉಪವಿಭಾಗದಲ್ಲಿ ಮತ್ತೊಂದು ಸೇತುವೆ ಜಲಾವೃತವಾಗಿತ್ತು. ಉಗಾರ ಬಿಕೆ-ಉಗಾರ ಕೆಡಿ ಗ್ರಾಮಗಳ ನಡುವಿನ ಸೇತುವೆ ಜಲಾವೃತವಾಗಿತ್ತು.
ಹಣಕಾಸು ನೀಡುತ್ತಿದ್ದವನ ಬಂಧನ
ಐಸಿಸ್ ಗೆ ಹಣಕಾಸು ನೆರವು ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕುವೈತ್ ನಲ್ಲಿ ಅಬ್ದುಲ್ಲಾ ಹದಿಯನ್ನು ಪೊಲೀಸರು ಬಂಧಿಸಲಾಗಿತ್ತು.
ರಕ್ಷಿಸಲು ಹೋದ ವ್ಯಕ್ತಿ ದುರ್ಮರಣ
ಸಮುದ್ರಕ್ಕೆ ಬಿದ್ದಿದ್ದವನ ರಕ್ಷಿಸಲು ಹೋದ ವ್ಯಕ್ತಿ ದುರ್ಮರಣ ಹೊಂದಿದ್ದ ಘಟನೆ ಮಂಗಳೂರಿನ ಉಳ್ಳಾಲ ಬಳಿಯ ಅಳಿವೆ ಬಾಗಿಲಿನಲ್ಲಿ ನಡೆದಿತ್ತು. ಕಲ್ಲು ಬಂಡೆಗೆ ತಲೆ ಬಡಿದು ಫಯಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ಬೋಟ್ ಮುಳುಗಡೆಯಾಗುತ್ತಿತ್ತು. ಬೋಟ್ ನಲ್ಲಿದ್ದ ಓರ್ವ ನಾಪತ್ತೆಯಾಗಿದ್ದು, ಮೀನುಗಾರರಿಬ್ಬರ ರಕ್ಷಣೆ ಮಾಡಲಾಗಿತ್ತು.
ಮಳೆಯ ಅಬ್ಬರ ಇಳಿಕೆ
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಇಳಿಕೆಯಾಗಿತ್ತು. ಆದರೆ ಮಳೆ ನಿಂತರೂ ಸಹ ನದಿಗಳ ನೀರಿನ ಮಟ್ಟ ಕಡಿಮೆಯಾಗಿರಲಿಲ್ಲ..
ಭೀಕರ ರಸ್ತೆ ಅಪಘಾತ
ಟ್ರ್ಯಾಕ್ಟರ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಯಾತ್ರಿಕರು ಸಾವನ್ನಪ್ಪಿದ್ದ ಘಟನೆ ಸೋಮವಾರ ಮುಂಜಾನೆ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ನಡೆದಿತ್ತು.
ರಿಯೋದಲ್ಲಿ ಅವಘಡ
ರಿಯೋ ಒಲಿಂಪಿಕ್ಸ್‌ ಆರಂಭವಾದ ಮೊದಲ ದಿನವೇ ಅವಘಡವೊಂದು ಸಂಭವಿಸಿತ್ತು. ಫ್ರಾನ್ಸ್‌ನ ಜಿಮ್ನ್ಯಾಸ್ಟ್ ಒಬ್ಬರು ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ಕಾಲು ಮುರಿದುಕೊಂಡಿದ್ದರು. ಫ್ರಾನ್ಸ್‌ನ ಜಿಮ್ನಾಸ್ಟ್‌ ಸಮೀರ್‌ ಐತ್‌ ಸಯಿದ್‌ ಅವರು ಪ್ರದರ್ಶನ ವೇಳೆ, ಕೆಲ ಮೀಟರ್‌ ಓಡಿಬಂದು ಟೇಕ್‌ ಅಪ್‌ ಪಡೆದು ಮೇಲಕ್ಕೆ ಜಿಗಿದು ಗಾಳಿಯಲ್ಲಿ ಎರಡು ಸುತ್ತು ಲಾಗ ಹಾಕಿ, ಮೂರನೇ ಸುತ್ತಿಗೆ ನೆಲದ ಮೇಲೆ ನಿಲ್ಲಬೇಕಿದ್ದ ಕ್ಷಣದಲ್ಲಿ ಅವರ ಎಡ ಕಾಲು ಮುರಿತಕ್ಕೊಳಗಾಗಿದ್ದರು.
ಕೆ ಪಿಎಸ್ ಸಿ ಅಧ್ಯಕ್ಷರಾಗಿ ಶ್ಯಾಂ ಆಯ್ಕೆ
ಕರ್ನಾಟಕದ ಲೋಕಸೇವಾ ಆಯೋಗ(ಕೆಪಿಎಸ್ ಸಿ)ದ ಅಧ್ಯಕ್ಷರಾಗಿ ಶ್ಯಾಂ ಭಟ್ ನೇಮಕಗೊಂಡಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆಯುಕ್ತ ಟಿ. ಶ್ಯಾಂ ಭಟ್ ಅವರನ್ನು ಕೆಪಿಎಸ್ ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿತ್ತು. ಸರ್ಕಾರದ ಈ ಶಿಫಾರಸ್ಸಿಗೆ ಕೊನೆಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದರು.
ಕುಖ್ಯಾತ ಪಾತಕಿ ನಯೀಂ ಮಟಾಷ್
ಕುಖ್ಯಾತ ಪಾತಕಿ ನಯೀಂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ತೆಲಂಗಾಣ ನಕ್ಸಲ್ ನಿಗ್ರಹ ಪಡೆ-ಗ್ರೇಹಾಂಡ್ ಗೆ ಬಲಿಯಾಗಿದ್ದ. ಈತ ಮೆಹಬೂಬ್ ನಗರದ ಶಾದ್ ನಗರದಲ್ಲಿರುವ ಮೀಲೇನಿಯಂ ಟೌನ್ ಶಿಪ್ ನ ಮನೆಯೊಂದರಲ್ಲಿ ಆಡಗಿಕೊಂಡಿದ್ದ. ಈತ ಹಲವು ಪ್ರಕರಣಗಳ ಆರೋಪಿಯಾಗಿದ್ದ.
ಅಂತಿಮ ಸುತ್ತು ತಲುಪಿದ ದೀಪಾ
ಭಾರತದ ಜಿಮ್ನಾಸ್ಟಿಕ್ (ವ್ಯಾಯಾಮ ಪಟು) ದೀಪಾ ಕರ್ಮಕರ್ ತಮ್ಮ ಮೊದಲ ಒಲಿಂಪಿಕ್ ಗೇಮ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದರು. ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ 8ನೆಯವರಾಗಿ ಪಂದ್ಯ ಮುಗಿಸಿದರು.
ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ
ಸಿವಿಲ್ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟಗೊಂಡ ಘಟನೆ ಸೋಮವಾರ ಬೆಳಗ್ಗೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಕ್ವೆಟ್ವಾದಲ್ಲಿ ಸಂಭವಿಸಿತ್ತು. ಘಟನೆಯಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಖ್ಯಾತ ಸಾಹಿತಿ ಚಿತ್ತರಂಜನ್ ಶೆಟ್ಟಿ ವಿಧಿವಶ
ಖ್ಯಾತ ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ಅವರು ಮಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಭಾನುವಾರ ಸಂಜೆ 4ಗಂಟೆ ಸುಮಾರಿಗೆ ಚಿತ್ತರಂಜನ್ ಶೆಟ್ಟಿ (72) ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಮಂಗಳೂರಿನ ನಿವಾಸಕ್ಕೆ ಸಿಐಡಿ ತಂಡ
ಮಡಿಕೇರಿಯಲ್ಲಿ ಮಂಗಳೂರು ಡಿವೈಎಸ್ ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ಸಿಐಡಿ ತಂಡ ಗಣಪತಿಯವರ ಮಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ್ದರು.
ಸಸ್ಯಜನ್ಯ ಕೊಬ್ಬು ಬಳಸಲು ಅನುಮತಿ
ಚಾಕೊಲೇಟ್​ಗಳಲ್ಲಿ ಸಸ್ಯಜನ್ಯ ಕೊಬ್ಬು ಮತ್ತು ಕೃತಕ ಸಿಹಿಯನ್ನು ಸೇರಿಸಿಕೊಳ್ಳಲು ಭಾರತೀಯ ಆಹಾರ ಗುಣಮಟ್ಟ ಪ್ರಮಾಣ ಮತ್ತು ಸುರಕ್ಷತಾ ಮಂಡಳಿ(ಎಫ್​ಎಸ್​ಎಸ್​ಎಐ) ಅನುಮತಿ ನೀಡಿತ್ತು.
ತೆರಿಗೆ ವ್ಯವಸ್ಥೆ ನಿವಾರಣೆಗೆ ಮಸೂದೆ ಸಹಕಾರಿ
ಲೋಕಸಭೆಯಲ್ಲಿ ಮಹತ್ವದ ಜಿಎಸ್ ಟಿ ಮಸೂದೆ ಮಂಡನೆಯಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಜಿಎಸ್ ಟಿ ಬಿಲ್ ಮಂಡನೆ ಮಾಡಿದ್ದರು.
ಹುತಾತ್ಮರಾದ ಬಿಎಸ್ ಎಫ್ ಯೋಧರು
ಗುಂಡಿನ ಘರ್ಷಣೆಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್​ಎಫ್) ಇಬ್ಬರು ಯೋಧರು ಹುತಾತ್ಮರಾದ ಘಟನೆ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಮಚಿಲ್ ಪ್ರದೇಶದಲ್ಲಿ ನಡೆದಿತ್ತು.
ಶಕ್ತಿ ಪ್ರದರ್ಶನಕ್ಕೆ ಮುಂದಾದ ಈಶ್ವರಪ್ಪ
ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕರ ಭಿನ್ನಮತ ಭುಗಿಲೆದ್ದಿದೆ. ಕುರುಬ ಸಮುದಾಯ ಸಂಘಟನೆಗೆ ಕೆ ಎಸ್ ಈಶ್ವರಪ್ಪ ತಂತ್ರ ರೂಪಿಸಿದ್ದರು. ಬಿಜೆಪಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಕೆ.ಎಸ್. ಈಶ್ವರಪ್ಪ ರಣತಂತ್ರ ರೂಪಿಸಿದ್ದಾರೆ. ಅಹಿಂದ ನಾಯಕರ ಜತೆ ಈಶ್ವರಪ್ಪ ಸಮಾಲೋಚನೆ ನಡೆಸಿದ್ದಾರೆ. ಇದಕ್ಕಾಗಿ ಈಶ್ವರಪ್ಪ ಬೆಂಗಳೂರಿನ ಕಬ್ಬನ್ ಪಾರ್ಕ್ ಸೆಕ್ರೆಟರಿಯೇಟ್ ಕ್ಲಬ್ ನಲ್ಲಿ ಸಭೆ ನಡೆಸಿದ್ದರು.
ಹೆಲಿಕಾಫ್ಟರ್ ಪತನ
ನೇಪಾಳದಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಹೆಲಿಕಾಪ್ಟರ್ ನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು ನೇಪಾಳದ ನುವಾಕೋಟ್ ನಲ್ಲಿ ಈ ದುರಂತ ಸಂಭವಿಸಿತ್ತು.
 
ಅನಗತ್ಯ ಹುದ್ದೆಗಳಿಗೆ ಕೊಕ್
ವಿಧಾನಸಭಾಧ್ಯಕ್ಷ ಕೊಳಿವಾಡದಿಂದ ದುಂದುವೆಚ್ಚಕ್ಕೆ ಕೊಕ್ ನೀಡಲಾಗಿದೆ. ವಿಧಾನಸಭೆ ಸಚಿವಾಲಯದ 41 ಹುದ್ದೆಗಳನ್ನು ರದ್ದು ಮಾಡಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ರೂ.18 ಕೋಟಿ ಉಳಿತಾಯವಾಗಲಿದೆ.
ರಸ್ತೆ ಅಪಘಾತ: ಇಬ್ಬರ ದುರ್ಮರಣ
ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸಾದೊಳಲು ಗೇಟ್ ಬಳಿ ತಡರಾತ್ರಿ ಸಂಭವಿಸಿತ್ತು.
ಹೆಲಿಕಾಪ್ಟರ್ ಪತನ
ಫಿಶ್ ತೈಲ್ ಏರ್ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಮಗು ಸೇರಿ 7 ಪ್ರಯಾಣಿಕರು ದಾರುಣ ಸಾವನ್ನಪ್ಪಿದ್ದ ಘಟನೆ ನೇಪಾಳದ ಕಾಠ್ಮಂಡು ಬಳಿ ಸೋಮವಾರ ಸಂಭವಿಸಿತ್ತು.
ಕಲಿಖೋ ಮೃತದೇಹ ಪತ್ತೆ
ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಮೃತದೇಹ ಪತ್ತೆಯಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಕಲಿಖೋ ಪುಲ್ (47) ಶವ ಪತ್ತೆಯಾಗಿತ್ತು. ಕಳೆದ ತಿಂಗಳಷ್ಟೇ ಸಿಎಂ ಹುದ್ದೆಯಿಂದ ಕಲಿಖೋ ಕೆಳಗಿಳಿದಿದ್ದರು. ನೇಣು ಬಿಗಿದಕೊಂಡು ಕಲಿಖೋ ಪುಲ್ ಆತ್ಮಹತ್ಯೆ ಶಂಕಿಸಲಾಗಿತ್ತು.
ಹಿರಿಯ ನಟಿ ಜ್ಯೋತಿಲಕ್ಷ್ಮೀ ವಿಧಿವಶ
ಚೆನ್ನೈ ನಗರದಲ್ಲಿ ಚತುರ್ಭಾಷಾ ನಟಿ ಜ್ಯೋತಿಲಕ್ಷ್ಮೀ(63) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಹಿರಿಯ ನಟಿ ಜ್ಯೋತಿಲಕ್ಷ್ಮೀ ಇಹಲೋಕ ತ್ಯಜಿಸಿದ್ದರು.
3ನೇ ಆರೋಪಿ ಆತ್ಮಹತ್ಯೆಗೆ ಯತ್ನ
ಉಡುಪಿಯ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ 3ನೇ ಆರೋಪಿ ನಿರಂಜನ್ ಅಸ್ರಣ್ಣ ಆತ್ಮಹತ್ಯೆಗೆ ಯತ್ನಿಸಿದ್ದ. ವಜ್ರದ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಜುಲೈ 28ರಂದು ನಾಪತ್ತೆಯಾಗಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾದ ವಿಚಾರ ಆಗಸ್ಟ್ 6 ರಂದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್‌ನನ್ನು ಬಂಧಿಸಲಾಗಿತ್ತು.
ಯಥಾಸ್ಥಿತಿಯಲ್ಲಿ ಬಡ್ಡಿದರ
ಆರ್ ಬಿಐ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೆಪೋ ದರದಲ್ಲಿ ಆರ್ ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ.
ಪ್ರಸ್ತುತ ದೇಶದಲ್ಲಿ 6.5ರಷ್ಟಿರುವ ಬಡ್ಡಿದರದಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ.
ದಸರಾ ಉದ್ಘಾಟಕರಾಗಿ ಕಣವಿ ಆಯ್ಕೆ
ಸಾಹಿತಿ ಚೆನ್ನವೀರ ಕಣವಿ ಅವರು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು.
ಸಿಬ್ಬಂದಿಗಳಿಗೆ ಶಾಕ್ ನೀಡಿದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದರು. ಸಿಎಂ ಅವರು ವಿಧಾನಸೌಧಕ್ಕೆ ಧಿಡೀರ್ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಆಗಮನದಿಂದ ಸಿಬ್ಬಂದಿಗಳು ಗಲಿಬಿಲಿಗೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಕಚೇರಿಯ ಬಾಗಿಲನ್ನೂ ತೆಗೆದಿರಲಿಲ್ಲ.
ಕೆಐಎಎಲ್ ಸ್ಮಗ್ಲರ್ ಗಳ ಬಂಧನ
ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಶ್ರೀಲಂಕಾ ಮೂಲದ ಸ್ಮಗ್ಲರ್ ಗಳ ಬಂಧನವಾಗಿದೆ. ಗೋಲ್ಡ್ ಬಿಸ್ಕತ್ ಕಳ್ಳಸಾಗಣೆ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರಿಂದ 65.7ಲಕ್ಷ ಮೌಲ್ಯದ 8 ಗೋಲ್ಡ್ ಬಿಸ್ಕತ್ ಗಳನ್ನು ಜಪ್ತಿ ಮಾಡಲಾಗಿತ್ತು.
ಕಾಂಗ್ರೆಸ್ ನಿಂದ ಗೇಟ್ ಪಾಸ್
ಕಾಂಗ್ರೆಸ್ ಮುಖಂಡ ಮತ್ತು ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಿಎಂ ಸಿದ್ದರಾಮಯ್ಯರ ಆಪ್ತ ಕೆ.ಮರಿಗೌಡನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಈ ಬಗ್ಗೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧಿಕೃತ ಆದೇಶ ಹೊರಡಿಸಿತ್ತು. ಮೈಸೂರು ಜಿಲ್ಲಾಧಿಖಾರಿ ಡಿಸಿ ಸಿ.ಶಿಖಾಗೆ ಧಮ್ಕಿ, ಕರ್ತವ್ಯಕ್ಕೆ ಅಡ್ಡಿ ಪ್ರಕರಣದ ಸಂಬಂಧ ಮರಿಗೌಡ ಬಂಧಿತನಾಗಿದ್ದಾನೆ. ಹೀಗಾಗಿ ಪಕ್ಷದಿಂದ ಅಮಾನತುಗೊಳಿಸುವಂತೆ ಕೆಪಿಸಿಸಿಯು ಆದೇಶಿಸಿತ್ತು.
ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ
16 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. 6ಎಸಿಪಿಗಳನ್ನು ಮತ್ತು 16 16 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸುವಂತೆ ಸರ್ಕಾರ ಆದೇಶಿಸಿತ್ತು.
ಯಾತ್ರಾರ್ಥಿಗಳ ಲಗೇಜ್ ನಾಪತ್ತೆ
ಶಿರಡಿಗೆ ಹೋಗಿದ್ದ ಯಾತ್ರಾರ್ಥಿಗಳ ಲಗೇಜ್ ನಾಪತ್ತೆಯಾಗಿತ್ತು. ಬಸ್ ನಲ್ಲಿದ್ದ 25ಕ್ಕೂ ಹೆಚ್ಚು ಯಾತ್ರಾರ್ಥಿಗಳು ಕಂಗಾಲಾಗಿದ್ದರು. 50 ಮಂದಿ ಯಾತ್ರಾರ್ಥಿಗಳು ಸಿಬರ್ಡ್ ವೋಲ್ವೊ ಬಸ್ ಕೆಎ 01 ಎಬಿ 7425ರಲ್ಲಿ ತೆರಳಿದ್ದರು. ಶಿರಡಿಯಿಂದ ನಿನ್ನೆ ಮಧ್ಯಾಹ್ನ 2 ಗಂಟೆಗೆ ನಿರ್ಗಮನವಾದ ಸೀಬರ್ಡ್ ಬಸ್ ಬೆಂಗಳೂರಿಗೆ ಇಂದು ಬೆಳಗ್ಗೆ 11 ಗಂಟೆಗೆ ತಲುಪಿತ್ತು. ಯಶವಂತಪುರದಲ್ಲಿ ಬಸ್ ನಲ್ಲಿದ್ದ ಓರ್ವ ಯಾತ್ರಿಕ ಇಳಿದಾಗ ನಾಪತ್ತೆಯಾದ ವಿಚಾರ ಬೆಳಕಿಗೆ ಬಂದಿತ್ತು.50 ಯಾಂತ್ರಿಕರ ಪೈಕಿ 25ಕ್ಕೂ ಹೆಚ್ಚು ಯಾತ್ರಿಕರ ಲಗೇಜ್ ನಾಪತ್ತೆಯಾಗಿದೆ. ಇದರಿಂದ ಬಸ್ ನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಯಾತ್ರಿಕರು ಗರಂ ಆಗಿದ್ದರು.
ಭಾರೀ ದರೋಡೆ
ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಭಾರೀ ದರೋಡೆ ನಡೆದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಗೆ ಹಣ ಸಾಗಿಸಲಾಗುತ್ತಿತ್ತು. ಚೆನ್ನೈನಿಂದ ಹೊರಟಿದ್ದ ರೈಲಿನಲ್ಲಿದ್ದ 300 ಕೋಟಿ ದರೋಡೆಯಾಗಿದೆ. 300 ಕೋಟಿ ಹಣ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗೆ ಸೇರಿದ್ದಾಗಿದೆ. ಸೇಲಂ ನಿಲ್ದಾಣಕ್ಕೆ ರೈಲು ಬಂದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ. ರೈಲಿನ 2 ಬೋಗಿಗಳಲ್ಲಿ ಬ್ಯಾಂಕ್ ನ ಹಣ ಸಾಗಿಸಲಾಗುತ್ತಿತ್ತು.
ಚಿರತೆ ಶವ ಪತ್ತೆ
ಕಪಿಲಾ ನದಿಯ ಹಿನ್ನೀರಿನಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿತ್ತು. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಕಿತ್ತೂರಿನ ರಾಮೇಶ್ವರಸ್ವಾಮಿ ಕ್ಷೇತ್ರದ ಬಳಿ ನದಿಯಲ್ಲಿ ಶವ ಪತ್ತೆಯಾಗಿತ್ತು.
ಗುಂಡಿನ ದಾಳಿ
ಪತ್ರಕರ್ತರಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಬ್ರೆಜಿಲ್ ರಿಯೋ ಡಿ ಜನೈರೋನಲ್ಲಿ ಪತ್ರಕರ್ತರನ್ನು ಬಸ್ ನಲ್ಲಿ ಕರದೊಯ್ಯುತ್ತಿದ್ದಾಗ ಗುಂಡಿನ ದಾಳಿ ಸಂಭವಿಸಿತ್ತು. ಒಲಿಂಪಿಕ್ಸ್ ವರದಿ ಮಾಡಲು ಪತ್ರಕರ್ತರು ತೆರಳಿದ್ದರು.
ಅರಮನೆ ಪಂಚಾಂಗ ಅನುಸಾರ ಆಚರಣೆ
ರಾಜಮನೆತನದಿಂದ 10ನೇ ದಿನವೇ ವಿಜಯದಶಮಿ ಆಚರಣೆ ನಡೆಯಲಿದೆ ಎಂದು ಯದುವಂಶದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದರು. ಮೈಸೂರಲ್ಲಿ ಮಾತನಾಡಿದ ಮಹಾರಾಜರು, ಅರಮನೆ ಪಂಚಾಂಗಕ್ಕೆ ಅನುಸಾರವಾಗಿ ಆಚರಣೆ ನಡೆಯಲಿದೆ. ನಮಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಯಾವ ಸಂಬಂಧ ಇಲ್ಲ. ನಮ್ಮ ಪೂಜಾ ವಿಧಿವಿಧಾನಗಳು ನಿಗದಿಯಂತೆ ನಡೆಯುತ್ತದೆ. ಖಾಸಗಿ ದರ್ಬಾರ್ ಕುರಿತು ಧರ್ಮಾಧಿಕಾರಿಗಳು ನಿರ್ಧರಿಸಲಿದ್ದಾರೆ. ಅರಮನೆ ಪಂಚಾಂಗದ ಪ್ರಕಾರ ಸಮಯ ನಿಗದಿಯಾಗಲಿದೆ ಎಂದಿದ್ದರು.
ಇಂಫಾಲದಲ್ಲಿ ಪೊಲೀಸರು ಕಣ್ಗಾವಲು
ಮಣಿಪುರ ರಾಜಧಾನಿ ಇಂಫಾಲದಲ್ಲಿ ಬಾಂಬ್ ಸ್ಫೋಟವಾಗಿತ್ತು. ಮಣಿಪುರ ವಿಶ್ವವಿದ್ಯಾಲಯದ ಮುಖ್ಯ ಗೇಟ್ ಬಳಿ ಈ ಘಟನೆ ಸಂಭವಿಸಿತ್ತು.
ಕ್ವಾರ್ಟರ್ ಫೈನಲ್ ಗೆ ಬಾಕ್ಸರ್ ವಿಕಾಸ್
ರಿಯೋ ಡಿ ಜನೈರೋ ಒಲಿಂಪಿಕ್ಸ್ ಲ್ಲಿ 75 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಭಾರತದ ವಿಕಾಸ್ ಕೃಷ್ಣನ್ ಗೆಲುವು ಸಾಧಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಗೆ ಪಾದಾರ್ಪಣೆ ಮಾಡಿದ್ದರು.
ಕೈದಿಗಳ ಬಿಡುಗಡೆ
ಸ್ವಾತಂತ್ರ್ಯ ದಿನಾಚರಣೆಯಂದು 320 ಕೈದಿಗಳು ಬಿಡುಗಡೆಯಾಗಲಿದೆ. ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಟಿ ಬಿ ಜಯಚಂದ್ರ ಹೇಳಿದ್ದರು.
ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವರು, ಈ ಬಾರಿ 272 ಪುರುಷ, 48 ಮಹಿಳಾ ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿತ್ತು.
ಡಿಸಿ ಹುದ್ದೆಯಿಂದ ಶಿಖಾ ಎತ್ತಂಗಡಿ
ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಸಿ ಶಿಖಾ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ರಾಜ್ಯ ಸರ್ಕಾರ ಶಿಖಾರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಿತ್ತು.
ಸುಟ್ಟು ಕರಕಲಾದ ಓಮ್ನಿ ವ್ಯಾನ್
ಚಲಿಸುತ್ತಿದ್ದ ಮಾರುತಿ ಓಮ್ನಿ ವ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರಿನ ಪೀಣ್ಯ 8ನೇ ಮೈಲಿಯ ಪೆಟ್ರೋಲ್ ಬಂಕ್ ಬಳಿ ನಡೆದಿತ್ತು. ಓಮ್ನಿ ವ್ಯಾನ್ ನಡುರಸ್ತೆಯಲ್ಲಿ ಹೊತ್ತಿ ಉರಿದಿತ್ತು. ಓಮ್ನಿಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಕೇಂದ್ರ ಸಚಿವರ ಆಸ್ತಿ ವಿವರ ಘೋಷಣೆ
2016ನೇ ಸಾಲಿನ ಸ್ಥಿರಾಸ್ತಿ-ಚರಾಸ್ತಿಗಳನ್ನು ಸಚಿವರು ಘೋಷಿಸಿಗೊಂಡಿದ್ದರು. ಕೇಂದ್ರ ಸರ್ಕಾರದ 6 ಸಚಿವರು ಸ್ಥಿರಾಸ್ತಿ-ಚರಾಸ್ತಿಗಳನ್ನು ಘೋಷಣೆ ಮಾಡಿದ್ದರು.
ಪ್ರಕರಣವನ್ನು ಕೈಬಿಟ್ಟ ಕೋರ್ಟ್
ಪ್ರೇಮಲತಾಳ ದೂರು ಅರ್ಜಿಯ ವಿಚಾರಣೆ ಹಂತದಲ್ಲಿ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಶ್ರೀಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕೆಂದು ಕೊಟ್ಟಿದ್ದ ತಿಳುವಳಿಕೆ ಪತ್ರವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,ಸದರೀ ಪ್ರಕರಣ ತನಿಖೆ ಬಾಕಿ ಇತ್ತು. ಪ್ರೇಮಲತಾಳ ಪ್ರಕರಣದಲ್ಲಿ ರಾಘವೇಶ್ವರಶ್ರೀಗಳು ನಿರ್ದೋಷಿಯೆಂದು ಸೆಷನ್ಸ್ ನ್ಯಾಯಾಲಯದಲ್ಲಿ ಆದೇಶ ಆಗಿರುವುದಿರಂದ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣದಲ್ಲಿ ತನಿಖೆಗೆ ಯಾವುದೇ ವಿಚಾರ ಉಳಿದಿಲ್ಲವೆಂಬ ಹಿನ್ನೆಲೆಯಲ್ಲಿ ಮುಂದಿನ ತನಿಖೆ ಅವಶ್ಯವಿಲ್ಲವೆಂದು ಪ್ರಕರಣವನ್ನು ಉಚ್ಛ ನ್ಯಾಯಾಲಯ ಕೈಬಿಟ್ಟಿತ್ತು.
ಮತ್ತಿಬ್ಬರು ಆರೋಪಿಗಳ ಬಂಧನ
ಉಡುಪಿಯ ಹೊಟೇಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. 3ನೇ ಆರೋಪಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ ಭಟ್ ಮತ್ತು ನಿರಂಜನ್ ಭಟ್ ನ ಕಾರು ಚಾಲಕ ರಾಘವೇಂದ್ರನ ಬಂಧನವಾಗಿತ್ತ.
ಕೋಟಿಗೊಬ್ಬ-2 ತೆರೆ ಮೇಲೆ
ಕೋಟಿಗೊಬ್ಬ2′ ಸಿನೆಮಾ ನಾಳೆ ತೆರೆಗೆ ಅಪ್ಪಳಿಸಿತ್ತು. ಕನ್ನಡ, ತಮಿಳಿನಲ್ಲಿ ಎಕಕಾಲದಲ್ಲಿ ಚಿತ್ರ ರಿಲೀಸ್ ಆಗಿತ್ತು.
ಮುಖ್ಯಭೂಮಿಕೆಯಲ್ಲಿ ಕಿಚ್ಚ ಸುದೀಪ್, ನಿತ್ಯಾಮೆನನ್, ಚಿಕ್ಕಣ್ಣ, ರವಿಶಂಕರ್, ಸಾಧುಕೋಕಿಲಾ, ಪ್ರಕಾಶ್ ರೈ, ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಎಂ.ಬಿ.ಬಾಬು ನಿರ್ಮಾಣದ ಚಿತ್ರ ‘ಕೋಟಿಗೊಬ್ಬ 2’ ಅನ್ನು ಕೆ. ಎಸ್. ರವಿಕುಮಾರ್ ನಿರ್ದೆಶನ ಮಾಡಿದ್ದಾರೆ. ಡಿ.ಇಮಾನ್ ಸಂಗೀತ ನೀಡಿದ್ದಾರೆ.
ಸ್ಟಾರ್ ಎಂಗೇಜ್ ಮೆಂಟ್
ನಟ ಯಶ್ ಮತ್ತು ನಟಿ ರಾಧಿಕಾ ನಿಶ್ಚತಾರ್ಥ ನಡೆದಿದೆ. ಗೋವಾದ ತಾಜ್ ವಿವಾಂತ ಹೋಟೆಲ್ ನಲ್ಲಿ ಬೆಳಗ್ಗೆ 11.30ಕ್ಕೆ ಯಶ್-ರಾಧಿಕಾ ಎಂಗೇಜ್ ಮೆಂಟ್ ನಡೆದಿದೆ. ಕರ್ನಾಟಕ ಗೋಕರ್ಣ ಮೂಲದ ಪುರೋಹಿತ ರವಿಶಂಕರ್ ನೇತೃತ್ವದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಸಾಕ್ಷಿಯಾಗಿದ್ದರು.
ಸರಣಿ ಬಾಂಬ್ ಸ್ಪೋಟ
ಥೈಲ್ಯಾಂಡಿನ ಹುವಾ ಹಿನ್ ರೆಸಾರ್ಟಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಹಾಗೂ 19 ಮಂದಿ ಗಾಯಗೊಂಡಿದ್ದರು.
ಮತ್ತೆ ಬಂಧನಕ್ಕೊಳಗಾದ ಬಾದ್ ಶಾ
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಅಮೆರಿಕದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದರು. ವಿಚಾರಣೆಯ ನೆಪದಲ್ಲಿ ಲಾಸ್ ಏಂಜಲಿಸ್ ವಿಮಾನ ಆ.11ರಂದು ರಾತ್ರಿ ಶಾರುಖ್ ಖಾನ್ ಅವರನ್ನು ಅಮೆರಿಕದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.
ರೈತ ಹೋರಾಟಗಾರರಿಗೆ ಜಾಮೀನು
ಮಹದಾಯಿ ಹೋರಾಟಗಾರರಿಗೆ ಜಾಮೀನು ಮಂಜೂರಾಗಿತ್ತು. ಜೈಲಿನಲ್ಲಿರುವ 179 ರೈತ ಹೋರಾಟಗಾರರಿಗೆ ಜಾಮೀನು ದೊರಕಿತ್ತು.
ಆಕಸ್ಮಿಕ ಬೆಂಕಿ: ಓರ್ವ ಸಜೀವ ದಹನ
ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಓರ್ವ ವ್ಯಕ್ತಿ ಸಜೀವ ದಹನವಾದ ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಸುಲ್ತಾನ್ ಪಾರ್ಕ್ ರೂಡ್ ನಲ್ಲಿರುವ ಮನೆಯಲ್ಲಿ ಸಂಭವಿಸಿತ್ತು.
ಗುರುಗಳ ಕನಸು ಈಡೇರಿಸಿದ ಶಿಷ್ಯ
ಮಂತ್ರಾಲಯದಲ್ಲಿ ಚಿನ್ನದ ಮಂಟಪ ನಿರ್ಮಾಣವಾಗುತ್ತಿದೆ. 60 ಕೆ.ಜಿ. ತೂಕದ 9 ಅಡಿ ಎತ್ತರದ ಚಿನ್ನದ ಮಂಟಪ ನಿರ್ಮಾಣವಾಗುತ್ತಿದೆ. ಉಡುಪಿ ಕಲಾವಿದರಿಂದ ಚಿನ್ನದ ಮಂಟಪ ನಿರ್ಮಾಣವಾಗುತ್ತದೆ. ರಾಯರ ಆರಾಧನೆಗೂ ಮುನ್ನಬೇ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ. ಸುಯಂತೇಂದ್ರ ಶ್ರೀಗಳು ಚಿನ್ನದ ಮಂಟಪ ನಿರ್ಮಾಣದ ಕನಸು ಕಂಡಿದ್ದರು. ಈಗ ಗುರುಗಳ ಕನಸನ್ನು ಶ್ರೀಗಳ ಶಿಷ್ಯ ಸುಭುದೇಂದ್ರ ಶ್ರೀಗಳು ಈಡೇರಿಸಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ
70ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪರೇಡ್ ತಾಲೀಮು ನಡೆಸಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಡಿಸಿ ವಿ ಶಂಕರ್ ಸೇರಿದಂತೆ ಅನೇಕ ಅಧಿಕಾರಿಗಳು ತಾಲೀಮಿನ ವೇಳೆ ಉಪಸ್ಥಿತರಿದ್ದರು. ಪಥಸಂಚಲನ ತಾಲೀಮಿನಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು, ವಿವಿಧ ಪೊಲೀಸ್ ತುಕಡಿಗಳು, ಎನ್ ಸಿಸಿ ಕೆಡೆಟ್ ಗಳು, ಬಿಎಸ್ಎಫ್ ಯೋಧರು, ಶ್ವಾನದಳ ಸೇರಿ ಹಲವರು ಭಾಗಿಯಾಗಿದ್ದರು.
ಬೈಕ್ ಧಗಧಗ
ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಇಂದು ಸಂಭವಿಸಿತ್ತು. ದ್ವಿಚಕ್ರ ವಾಹನ ನಡುರಸ್ತೆಯಲ್ಲೇ ಸುಟ್ಟು ಕರಕಲಾಗಿತ್ತು.
ಸ್ಲೀಪರ್ ಬಸ್ ಸೇವೆ ಆರಂಭ
ರಾಜಧಾನಿ ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಸ್ಲೀಪರ್ ಸರಕಾರೀ ಬಸ್ ಸೇವೆ ಪ್ರಾರಂಭಗೊಂಡಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ, ರಾಜಹಂಸ, ವೋಲ್ವೊ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಖಾಸಗಿ ಸ್ಲೀಪರ್ ಬಸ್‌ಗಳಿಗೆ ತೀವ್ರ ಬೇಡಿಕೆ ಉಂಟಾದ ಹಿನ್ನಲೆಯಲ್ಲಿ ಕೆಎಸ್‌ಆರ್‌‌ಟಿಸಿ ಕೂಡ ಎಸಿ ಸ್ಲೀಪರ್ ಕರೋನ ಬಸ್‌ಗಳ ಸೇವೆಯನ್ನು ಪ್ರಾರಂಭಿಸಿತ್ತು.
ಧ್ವಜಾರೋಹಣಗೈ ಸಿಎಂ
70ನೇ ಸ್ವಾತಂತ್ರೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದರು.
ಧ್ವಜಾರೋಹಣಗೈದ ಪ್ರಧಾನಿ ಮೋದಿ
ರಾಷ್ಟ್ರಾದಾದ್ಯಂತ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದರು.
ಭಾಷಣದ ವೇಳೆ ಅಸ್ವಸ್ಥಗೊಂಡ ಸಚಿವ
70ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಭಾಷಣ ಮಾಡುತ್ತಿದ್ದ ವೇಳೆ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥಗೊಂಡಿದ್ದರು. ಶಿವಮೊಗ್ಗದ ಡಿಎಆರ್ ಪೊಲೀಸ್ ಮೈದಾನದಲ್ಲಿ ಅಸ್ವಸ್ಥಗೊಂಡಿದ್ದರು.
ಸ್ವಾತಂತ್ರೋತ್ಸವದ ಯಡವಟ್ಟು
70ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ಮಾಡುತ್ತಿದ್ದ ಸಂದರ್ಭದಲ್ಲಿ ಹಲವಡೆ ಅಚಾತುರ್ಯ ನಡೆದಿದೆ. ಬೆಳಗಾವಿಯ ಹುಕ್ಕೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿತ್ತು. ಹುಕ್ಕೇರಿಯಲ್ಲಿ ಬಾವುಟವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು.
ರಾಯಚೂರಿನ ಹಂಪನಾಳದಲ್ಲಿ ದಾರ ಕಡಿದು ರಾಷ್ಟ್ರಧ್ವಜ ಕೆಳಗೆ ಬಿದ್ದಿತ್ತು. ಚಾಮರಾಜನಗರದಲ್ಲೂ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಲಾಗಿತ್ತು.
ವಿಜಯಪುರದಲ್ಲಿ ಸಂದೇಶ ಭಾಷಣದ ಕೈಪಿಡಿಯಲ್ಲಿ ಎಡವಟ್ಟು ಮಾಡಲಾಗಿತ್ತು. ಕೆಂಪು, ಬಿಳಿ, ಕಂದು ಬಣ್ಣದ ಧ್ವಜ ಮುದ್ರಣವಾಗಿತ್ತು.
ಸರ್ಕಾರಿ ಬಸ್ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿಸಿ ಬಸ್ ಪಲ್ಟಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚನ್ನಮ್ಮನಹಳ್ಳಿ ಬಳಿ ಸಂಭವಿಸಿತ್ತು. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು.
ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ ಗೆ
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದಾಸೆ ಇನ್ನೂ ಜಿವಂತವಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತ ಪಿವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್ ಗೇರಿದ್ದರು.
ತೈಲ ಬೆಲೆಯಲ್ಲಿ ಇಳಿಕೆ
ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 ರೂ. ಹಾಗೂ ಡೀಸೆಲ್ ದರದಲ್ಲಿ 2 ರೂ. ಕಡಿತಗೊಳಿಸಲಾಗಿತ್ತು.
ಕಣಿವೆ ರಾಜ್ಯದಲ್ಲಿ ಮುಂದುವರಿದ ಹಿಂಸಾಚಾರ
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿತ್ತು. ಕಾಶ್ಮೀರದಲ್ಲಿ ಸೇನೆಯ ಫೈರಿಂಗ್ ಗೆ ಮತ್ತೆ ಐವರು ದುರ್ಮರಣ ಹೊಂದಿದ್ದರು. ಹಿಂಸಾಚಾರ ನಿಯಂತ್ರಿಸಲು ಸೇನಾ ಪಡೆ ಫೈರಿಂಗ್ ನಡೆಸಿದೆ. ಬದ್ಧಗಾಂವ್ ನಲ್ಲಿ ನಾಲ್ವರು ಮತ್ತು ಅನಂತನಾಗ್ ನಲ್ಲಿ ಓರ್ವ ಸಾವನ್ನಪ್ಪಿದ್ದರು. ಈವರೆಗೆ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 65ಕ್ಕೇರಿತ್ತು.
ಎಬಿವಿಪಿ ಪ್ರತಿಭಟನೆ
ಭಾರತೀಯ ಸೇನೆ ವಿರುದ್ಧ ಆಜಾದಿ ಹೆಸರಿನಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯನ್ನು ನಿಷೇಧಿಸಬೇಕು ಹಾಗೂ ದೇಶದ್ರೋಹಿ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಎಬಿವಿಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಅಲ್ಲದೇ ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಿದರು.
ಅಸಹಕಾರ ಚಳುವಳಿ
ಆಮ್ನೆಸ್ಟಿ ಸಂಸ್ಥೆ ನಿಷೇಧಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ತೀವ್ರಗೊಂಡಿತ್ತು. ಭಾರತೀಯ ಸೇನೆ ವಿರುದ್ಧ ಆಕ್ಷೇಪಾರ್ಹ ಘೋಷಣೆ ಪ್ರಕರಣ ಹಿನ್ನೆಲೆಯಲ್ಲಿ ಎಬಿವಿಪಿ ಅಸಹಕಾರ ಚಳುವಳಿಯನ್ನು ಕೈಗೊಂಡಿತ್ತು.
ಡಿಜಿಪಿ ಓಂಪ್ರಕಾಶ್ ವಿರುದ್ಧ ಶೆಣೈ ಕಂಪ್ಲೇಂಟ್
ಪೊಲೀಸ್ ಮಹಾನಿರ್ದೆಶಕ ಓಂ ಪ್ರಕಾಶ್ ವಿರುದ್ಧ ಅನುಪಮಾ ಶೆಣೈ ದೂರು ನೀಡಿದ್ದರು.. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಗೆ ಬಳ್ಳಾರಿಯ ಕೂಡ್ಲಿಗಿಯ ಡಿವೈಎಸ್ ಪಿಯಾಗಿದ್ದ ಅನುಪಮಾ ಶೆಣೈ ದೂರು ನೀಡಿದ್ದರು. ರಾಜದಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಪದಕ ನಿರೀಕ್ಷೆಯಲ್ಲಿ ಸಿಂಧು
ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ರೋಚಕ ಹಣಾಹಣಿಯಲ್ಲಿ ವಿಶ್ವದ ನಂಬರ್ 2 ಆಟಗಾರ್ತಿ ಚೀನದ ವಾಂಗ್ ಯಿಹಾನ್ ಅವರನ್ನು ಭಾರತ ಪಿವಿ ಸಿಂಧು ಮಣಿಸಿ ಸೆಮಿಫೈನಲ್ ಪ್ರವೇಶಿದ್ದರು. ಬೆಂಗಳೂರಿನಲ್ಲಿ ಆರ್ ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಪರ್ಮಿಟ್ ಇಲ್ಲದೇ ಓಡಾಡುತ್ತಿದ್ದ ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿತ್ತು.
3 ರಾಜ್ಯಗಳಿಗೆ ನೂತನ ರಾಜ್ಯಪಾಲರು
ಕೇಂದ್ರ ಸರ್ಕಾರ ಮೂರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿತ್ತು. ಅಸ್ಸಾಂ, ಮಣಿಪುರ, ಪಂಜಾಬ್ ಗೆ ನೂತನ ರಾಜ್ಯಪಾಲರನ್ನು ಹಾಗೂ ಅಂಡಮಾನ್ ಉಪರಾಜ್ಯಪಾಲರನ್ನು ನೇಮಕಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು.
ವಿಧಾನಸಭೆಯಿಂದ ಡಿಎಂಕೆ ಶಾಸಕರು ಸಸ್ಪೆಂಡ್
ತಮಿಳುನಾಡಿನ ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು. ಡಿಎಂಕೆಯ ಎಲ್ಲಾ ಶಾಸಕರನ್ನು ಸಸ್ಪೆಂಡ್ ಮಾಡಲಾಗಿತ್ತು. ಸ್ಪೀಕರ್ ಧನಪಾಲ್ ಅವರು ಡಿಎಂಕೆಯ 89 ಶಾಸಕರನ್ನು ಸಸ್ಪೆಂಡ್ ಮಾಡಿದ್ದರು.
ರಾಖಿ ಹಬ್ಬಕ್ಕೆ ಉಡುಗೊರೆ
ರಕ್ಷಾಬಂಧನದ ಉಡುಗೊರೆಯಾಗಿ ಭಾರತಕ್ಕೆ ರಿಯೋ ಡೀ ಜನೈರೋ ಒಲಿಂಪಿಕ್ಸ್ ನಲ್ಲಿ ಚೊಚ್ಚಲ ಪದಕ ದೊರಕಿತ್ತು.. ಹರಿಯಾಣ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಡುವ ಮೂಲಕ ರಾಖಿ ಹಬ್ಬಕ್ಕೆ ಸಾಕ್ಟಿಯಾಗಿದ್ದರು.
ಭೀಕರ ಅಪಘಾತ
ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಕೂಡಿಗ್ಲಿ ತಾಲೂಕಿನ ಶಿವಪುರ ಸಮೀಪ ರಾ.ಹೆ.50ರಲ್ಲಿ ಸಂಭವಿಸಿತ್ತು.
ನಟ ದರ್ಶನಗೂ ಒತ್ತುವರಿ ತೆರವಿನ ಬಿಸಿ
ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿನ ಗಣ್ಯರಿಗೂ ಒತ್ತುವರಿ ತೆರವು ಬಿಸಿ ತಟ್ಟುವ ಸಾಧ್ಯತೆ ಇದೆ. ಚಿತ್ರನಟ ದರ್ಶನ್ ಗೆ ಒತ್ತುವರಿ ತೆರವಿನ ಬಿಸಿ ತಟ್ಟುವ ಸಂಭವಿಸಿತ್ತು. ಮಾಜಿ ಸಚಿವ ಶಾಮನೂರು ಒಡೆತನಕ್ಕೆ ಸೇರಿದ ಎಸ್ ಎಸ್ ಆಸ್ಪತ್ರೆ ಕಂದಾಯ ಇಲಾಖೆ ಪ್ರಕಾರ ತೆರವಿನ ಅಡಿಯಲ್ಲಿ ಬರುವ ಸಾಧ್ಯತೆಗಳಿತ್ತು.
ಬಿಜೆಪಿ ನೂತನ ಕಚೇರಿಗೆ ಶಂಕುಸ್ಥಾಪನೆ
ದೆಹಲಿಯಲ್ಲಿ ಬಿಜೆಪಿಯು ನೂತನ ಪ್ರಧಾನ ಕಚೇರಿ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ಮಾಡಿದ್ದರು. ಸದ್ಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯು ಚಿಕ್ಕದಾಗಿದ್ದು, ಪಕ್ಷವು ಚಟುವಟಿಕೆ ನಡೆಸಲು ಇಕ್ಕಟ್ಟಾಗುತ್ತಿತ್ತು. ಈ ಕಾರಣದಿಂದ ಪಕ್ಷವು ಹೊಸದಾಗಿ ಕಚೇರಿಯನ್ನು ತೆರೆಯಲು ನಿರ್ಧರಿಸಿತ್ತು.
ಸಹೋದರ-ಸಹೋದರಿಯರ ಪ್ರೀತಿಯ ಪ್ರತೀಕವಾಗಿ ಆಚರಿಸುವ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗಿತ್ತು.
ಮತ್ತೊಂದು ಪದಕದ ನಿರೀಕ್ಷೆಯಲ್ಲಿ ಭಾರತ
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಪದಕದ ನಿರೀಕ್ಷೆಯಲ್ಲಿತ್ತು. ಇಂಡಿಯಾದ ಬಹದ್ದೂರ್ ಹೆಣ್ಣು ಪಿ.ವಿ ಸಿಂಧು ಚಿನ್ನದ ಭೇಟೆಗೆ ಹೊರಟಿದ್ದರು. ಬ್ಯಾಡ್ಮಿಂಟನ್ ನಲ್ಲಿ ಮುತ್ತಿನ ನಗರಿ ಹೈದ್ರಾಬಾದ್ ನ ಪಿ ವಿ ಸಿಂಧು ಐತಿಹಾಸಿಕ ಸಾಧನೆ ಮಾಡಲಿದ್ದು, ಬೆಳ್ಳಿ ಅಥವಾ ಸುವರ್ಣ ಪದಕ ದೊರಕುವ ಸಾಧ್ಯತೆ ಇದೆ ಇತ್ತು. ರಾತ್ರಿ ನಡೆದ ಪಂದ್ಯದಲ್ಲಿ ಸಿಂಧು ಅವರು ಬೆಳ್ಳಿ ಪದಕ ಪಡೆದ ದೇಶದ ಕೀರ್ತಿ ಪಾತಕೆ ಹಾರಿಸಿದ್ದಾರೆ.
ಆರಾಧನಾ ಮಹೋತ್ಸವಕ್ಕೆ ಚಾಲನೆ
345ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿತ್ತು. ರಾಯಚೂರು ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರೆತ್ತಿತ್ತು.
ಪಾಕಿಸ್ತಾನ ಗೂಢಚಾರಿ ಬಂಧನ
ಗೂಢಚಾರ ಮಾಡುತ್ತಿದ್ದ ಪಾಕಿಸ್ತಾನಿ ಗೂಢಚಾರಿಯನ್ನು ರಾಜಸ್ತಾನದ ಜೈಸಲ್ಮರ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸೆಲ್ಯುಲರ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಸಾಕ್ಷಿಗೆ ಏರ್ ಇಂಡಿಯಾ ಗಿಫ್ಟ್
ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಗೆ ಗೌರವ ಸೂಚಕವಾಗಿ ಏರ್ ಇಂಡಿಯಾಗಳ ಕೊಡುಗೆ ನೀಡಿತ್ತು. ಸಾಕ್ಷಿ ಹಾಗೂ ಆಕೆಯ ಜೊತೆಗಾರರಿಗೆ ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಕೊಡುಗೆ ನೀಡಿತ್ತು.
ಬಿಜೆಪಿ ಹೈಕಮಾಂಡ್ ನಿಂದ ಬುಲಾವ್
‘ಸಂಗೊಳ್ಳು ರಾಯಣ್ಣ ಬ್ರಿಗೇಡ್’ ಸ್ಥಾಪನೆ ವಿವಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಿಂದ ಬುಲಾವ್ ಬಂದಿತ್ತು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ವಿಧಾನಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ, ಸಂಸದ ಪ್ರಹ್ಲಾದ್ ಜೋಶಿ ಸೇರಿ ರಾಜ್ಯ ಪ್ರಮುಖ ಬಿಜೆಪಿ ನಾಯಕರಿಗೆ ದೆಹಲಿಗೆ ಬರುವಂತೆ ವರಿಷ್ಠರಿಂದ ಬುಲಾವ್ ಬಂದಿತ್ತು.
ಸಿಂಧು-ಸಾಕ್ಷಿಗೆ ಆಪ್ ಗಿಫ್ಟ್
ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ-ಕಂಚು ಪದಕ ದೊರಕಿಸಿಕೊಟ್ಟ ಕ್ರೀಡಾಳುಗಳಿಗೆ ದೆಹಲಿಯ ಆಫ್ ಸರ್ಕಾರ ಬಹುಮಾನ ಘೋ಼ಷಣೆ ಮಾಡಿತ್ತು. ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಸಿಂಧುಗೆ 2 ಕೋಟಿ ರೂ., ಕುಸ್ತಿಯಲ್ಲಿ ಚೊಚ್ಚಲ ಪದಕ ಕಂಚು ಗೆದ್ದ ಸಾಕ್ಷಿ ಮಲಿಕ್ ಗೆ 1 ಕೋಟಿ ರೂ. ಹಾಗೂ ಸಾಕ್ಷಿ ತಂದೆಗೆ ಬಡ್ತಿ ನೀಡಲು ದೆಹಲಿ ಸರ್ಕಾರ ನಿರ್ಧರಿಸಿತ್ತು.
ಜಾಗ್ವರ್’ ಟೀಸರ್ ತೋರಿಸಿದ್ರು…
ನಟ ಪವನ್ ಕಲ್ಯಾಣ್ ಗಾಗಿ ಬ್ಲ್ಯಾಕ್ ಬಸ್ಟರ್ ಚಿತ್ರ ನಿರ್ಮಿಸುವೆ ಎಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈ ಮಾತುಕತೆ ವೇಳೆ ಹೆಚ್ ಡಿಕೆ ಮೊಬೈಲ್ ನಲ್ಲಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವರ್’ ಚಿತ್ರದ ಟೀಸರ್ ತೋರಿಸಿದ್ದರು. ‘ಜಾಗ್ವಾರ್’ ಹಾಡು, ಫೈಟ್, ನಿಖಿಲ್ ನಟನೆ ಬಗ್ಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬೆಳ್ಳಿ ಬಾಲೆಗೆ ಬಹುಮಾನ
ನಂತರ ಹೈದ್ರಾಬಾದ್ ನಲ್ಲಿ ಮಾತನಾಡಿದ ಹೆಚ್ ಡಿಕೆ, ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ಪಿ ವಿ ಸಿಂಧುಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವೆ. ಪುತ್ರ ನಿಖಿಲ್’ನ ‘ಜಾಗ್ವಾರ್’ ಚಿತ್ರದ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲೇ ಸಿಂಧುಗೆ 10ಲಕ್ಷ ನಗದು ಬಹುಮಾನ ನೀಡುತ್ತೇನೆ ಎಂದಿದ್ದರು.
ಒಲಿಂಪಿಕ್ಸ್​​​​ಗೆ ಅದ್ದೂರಿ ತೆರೆ
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ 16 ದಿನಗಳ ಕ್ರೀಡಾ ಹಬ್ಬ ಮುಕ್ತಾಯವಾಗಿದ್ದು, ಒಲಿಂಪಿಕ್ಸ್​​​​ಗೆ ಅದ್ದೂರಿ ತೆರೆ ಬಿದ್ದಿತ್ತು. ಮರಕಾನಾ ಸ್ಟೇಡಿಯಂನಲ್ಲಿ ನಡೆದ ಈ ಮುಕ್ತಾಯ ಸಮರೋಪ ಸಮಾರಂಭಕ್ಕೆ 78 ಸಾವಿರಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಲೇಜರ್​​ ಲೈಟ್​​ನ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಎಲ್ಲಾ ದೇಶದ ಅಥ್ಲಿಟ್​​ಗಳು ರಾಷ್ಟ್ರ ಧ್ವಜ ಹಾಗೂ ತಾವು ಗೆದ್ದ ಪದಕದೊಂದಿಗೆ ಕಾಣಿಸಿಕೊಂಡರು.
ರಸ್ತೆ ಅಪಘಾತ
ಸರ್ಕಾರಿ ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ದುರ್ಮರಣ ಹೊಂದಿದ್ದ ಘಟನೆ ತುಮಕೂರಿನ ಬಟವಾಡಿ ಬಳಿ ಸಂಭವಿಸಿತ್ತು.
ಸಿಂಧು ವಿಜಯೋತ್ಸವ
ಒಲಿಂಪಿಕ್ ಗ್ರಾಮದಿಂದ ಭಾರತದ ಕೀರ್ತಿ ಪತಾಕೆ ಹಾರಿಸಿದ ಬೆಳ್ಳಿತಾರೆ ಪಿ.ವಿ. ಸಿಂಧು ತಾಯ್ನಾಡಿಗೆ ಆಗಮಿಸಿದ್ದರು. ಭಾರತಕ್ಕೆ ಬಂದಿಳಿದ ಸಿಂಧುಗೆ ಅಭೂತಪೂರ್ವ ಸ್ವಾಗತ ನೀಡಲಾಗಿತ್ತು. ಸಿಂಧು ಸನ್ಮಾನಕ್ಕೆ ಗಚ್ಚಿಬೋಲಿ ಮೈದಾನದಲ್ಲಿ ಸಿದ್ಧತೆ ಮಾಡಲಾಗಿತ್ತು. ಸಿಂಧು ಮೆರವಣಿಗೆಗೆ ಮುಂಬೈ ಸಾರಿಗೆ ಸಂಸ‍್ಥೆ ವತಿಯಿಂದ ಓಪನ್ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಸ್ಟ್ ಸಾರಿಗೆ ಸಂಸ್ಥೆಗೆ ಸೇರಿದ ವಿಶೇಷ ಬಸ್ ನಲ್ಲಿ ಮೆರಣಿಗೆ ನಡೆದಿತ್ತು.
ಸಿಎಂ ಉತ್ತರಾಧಿಕಾರಿಯಾಗಿ ಡಾ.ಯತೀಂದ್ರ?
ಸಿಎಂ ಎರಡನೇ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ರಾಜಕೀಯಕ್ಕೆ ಎಂಟ್ರಿಯಾಗುವ ಸೂಚನೆ ದೊರಕಿತ್ತು. ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಉತ್ತರಾಧಿಕಾರಿಯಾಗಿ ಅವರ ಎರಡನೇ ಪುತ್ರ ಡಾ. ಯತೀಂದ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿತ್ತು.
ಮೀನುಗಾರರ ರಕ್ಷಣೆ
ಸಮುದ್ರದಲ್ಲಿ ಮುಳುಗಡೆಯಾಗುತ್ತಿದ್ದ ಎರಡು ದೋಣಿಯಲ್ಲಿದ್ದ ಮೀನುಗಾರರನ್ನು ಮುಂಬೈ ಕರಾವಳಿ ತೀರದಿಂದ 70 ನಾಟಿಕಲ್ ಮೈಲು ದೂರದಲ್ಲಿ ರಕ್ಷಿಸಲಾಗಿತ್ತು.
ಲೋಕಾ ದಾಳಿ
ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 5 ಕಡೆ ದಾಳಿ ನಡೆಸಿದ್ದರು. ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.​ ಅಡಿ ಆದೇಶದಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. 3 ಆರ್​​ಟಿಒ ಚೆಕ್​ಪೋಸ್ಟ್​​, 2 ವಾಣಿಜ್ಯ ತೆರಿಗೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಸಿಂಧು-ಸಾಕ್ಷಿಗೆ ಒಲಿದ ಖೇಲ್ ರತ್ನ
ಈ ಸಾಲಿನ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕಂಚಿನ ಪದಕ ಗೆದ್ದ ಕುಸ್ತಿಪಟು ಸಾಕ್ಷಿ ಮಲಿಕ್, ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಹಾಗೂ ಶೂಟರ್ ಜೀತು ರಾಯ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕದ ಹಾಕಿ ಆಟಗಾರ ವಿ.ಆರ್.ರಘುನಾಥ್, ಕ್ರಿಕೆಟ್ ಆಟಗಾರ ಅಜಿಂಕ್ಯ ರಹಾನೆ, ಲಲಿತ್ ಬಾಬರ್, ಶಿವ ಥಾಪಾ ಹಾಗೂ ಅಪೂರ್ವಿ ಚಾಂಡೇಲಾ ಸೇರಿದಂತೆ 15 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ದೀಪಾ ಕರ್ಮಾಕರ್ ಕೋಚ್ ಬಿಶ್ವೇಶ್ವರ್ ನಂದಿ ಸೇರಿದಂತೆ ಆರು ಮಂದಿಗೆ ಈ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಕ್ಷಮೆ ಕೇಳಲು ನಿರಾಕರಿಸಿದ ಮಾಜಿ ಸಂಸದೆ
ಪಾಕ್ ಬಗ್ಗೆ ಹೇಳಿಕೆಗೆ ಕ್ಷಮೆ ಕೇಳುವ ಅಗತ್ಯವಿಲ್ಲ. ನಾನು ಪಾಕಿಸ್ತಾನದ ಪರವಾಗಿ ಮಾತನಾಡಿಲ್ಲ. ಮಾಧ‍್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೆ ಅಷ್ಟೆ ಎಂದು ಮಾಜಿ ಸಂಸದೆ, ನಟಿ ರಮ್ಯಾ ಹೇಳಿದ್ದರು. ಪಾಕಿಸ್ತಾನದ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ರಮ್ಯ ಪ್ರತಿಯೊಬ್ಬರಿಗೂ ತಮ್ಮ ಅಅಭಿಪ್ರಾಯ ಹೇಳುವ ಹಕ್ಕಿದೆ. ಎಲ್ಲರೂ ಒಂದೇ ಸಿದ್ಧಾಂತಕ್ಕೆ ಅನುಗುಣವಾಗಿ ಇರಬೇಕಿಲ್ಲ. ಪಾಕ್ ಬಗ್ಗೆ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಪಾಕಿಸ್ತಾನದ ಬಗ್ಗೆ ನನ್ನ ಅನುಭವಗಳನ್ನು ಹಂಚಿಕೊಂಡೆ. ದೇಶದ್ರೋಹ ಕಾಯ್ದೆ ದುರುಪಯೋಗವಾಗುತ್ತಿದೆ ಎಂದಿದ್ದರು.
ಅಥ್ಲೀಟ್ ಗೆ ಝಿಕಾ ಶಂಕೆ
ಅಥ್ಲೀಟ್ ಸುಧಾಸಿಂಗ್ ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧಾಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉತ್ತರಪ್ರದೇಶ ಮೂಲದ ಸುಧಾ ಅವರಿಗೆ ರಿಯೋ ಒಲಿಂಪಿಕ್ಸ್ ವೇಳೆ ಆರೋಗ್ಯ ಕೈಕೊಟ್ಟಿತ್ತು. ಸೊಳ್ಳೆ ಕಡಿತದಿಂದ ಝಿಕಾ ವೈರಸ್ ತಗುಲಿರುವ ಬಗ್ಗೆ ಶಂಕೆಯಿದೆ.
ಮಾಸಿಕ ದರ ಕೇವಲ 49ರೂ.!
ಲ್ಯಾಂಡ್‌ಲೈನ್‌ ಫೋನ್‌ಗಳತ್ತ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬಿಎಸ್‌ಎನ್‌ಎಲ್‌, ಮಾಸಿಕ ಕನಿಷ್ಠ
ಶುಲ್ಕವನ್ನು ಕೇವಲ 49 ರೂ.ಗೆ ಇಳಿಸಿತ್ತು. ಇದರಿಂದ ಹೊಸದಾಗಿ ಸಂಪರ್ಕ ಪಡೆಯುವವರು 500 ರೂ. ಭದ್ರತಾ ಠೇವಣಿ ಜತೆಗೆ 49 ರೂ. ಶುಲ್ಕ ಪಾವತಿಸಿದರೆ ಒಂದು ತಿಂಗಳು ಒಳಬರುವ ಕರೆಗಳನ್ನು ಸ್ವೀಕರಿಸಬಹುದು. ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಫೋನ್‌ಗಳಿಗೆ ಮಾಡಲಾಗುವ ಕರೆಗೆ ನಿಮಿಷಕ್ಕೆ 1 ರೂ., ಮೊಬೈಲ್‌ ಫೋನ್‌ಗಳಿಗೆ ಮಾಡಲಾಗುವ ಕರೆಗೆ ನಿಮಿಷಕ್ಕೆ 1.20 ರೂ. ಶುಲ್ಕ ವಿಧಿಸಲಾಗುತ್ತದೆ.
ಕರಡಿ ಜತೆ ಫೈಟ್
ರೈತನೊಬ್ಬ ಕರಡಿ ಜೊತೆ ಕಾದಾಡಿ ಪ್ರಾಣ ಉಳಿಸಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗರುಡೊಳ್ಳಿ ಬಳಿ ನಡೆದಿತ್ತು. ರೈತ ಜುಬೆ ವಾಲಂತಿ ಅಡವೆಪ್ಪಾಚೇಗೆಯ ಸುಮಾರು ಎರಡು ಗಂಟೆಗಳ ಕಾಲ ಕರಡಿ ಜತೆ ಹೋರಾಟ ನಡೆಸಿದ್ದರು. ಕಾಡಿನ ಮಧ್ಯೆ ಇರುವ ಗದ್ದೆಗೆ ತೆರಳುವಾಗ ಕರಡಿ ದಾಳಿ ನಡೆಸಿತ್ತು. ರೈತ ಜುಬೆ ವಾಲಂತಿ ಅಡವೆಪ್ಪಾಚೇಗೆಯ ಸ್ಥಿತಿ ಗಂಭೀರವಾಗಿದ್ದು, ಕಣ್ಣು ಮತ್ತು ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು,
ಭಾರತದ ಸಿಂಹಣಿಗೆ ಅದ್ಧೂರಿ ಸ್ವಾಗತ
ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ಗೆದ್ದಿರುವ ಭಾರತದ ಹೆಣ್ಣು ಹುಲಿ ಸಾಕ್ಷಿ ಮಲಿಕ್ ತವರಿಗೆ ಮರಳಿದ್ದು, ಕುಸ್ತಿ ಪಂದ್ಯದಲ್ಲಿ ಭಾರತಕ್ಕೆ ಕಂಚು ತಂದುಕೊಟ್ಟಿದ್ದರು. ರಿಯೋದಿಂದ ನವದೆಹಲಿ ಏರ್ ಪೋರ್ಟ್ ಗೆ ಬಂದ ಸಾಕ್ಷಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು.
ನರಸಿಂಗ್ ನಿಷೇಧಕ್ಕೆ ನಾಡಾ ಕಾರಣ
ವ್ರೆಸ್ಲರ್ ನರಸಿಂಗ್ ಯಾದವ್ ಗೆ 4 ವರ್ಷ ಬ್ಯಾನ್ ಕೇಸ್ ಸಂಬಂಧಪಟ್ಟಂತೆ ಭಾರತ ಕುಸ್ತಿ ಫೆಡರೇಷನ್ ಹೊಸ ಕತೆ ಹೇಳುತ್ತಿದೆ. ಬ್ಯಾನ್ ಕೇಸ್ ಹಿಂದೆ ನಾಡಾ, ಸಾಯ್ ನ ಕಿರಿಯ ಅಧಿಕಾರಿಗಳ ಕೈವಾಡವಿದೆಯಂತೆ ಎಂದು ಡಬ್ಲ್ಯು ಎಫ್ ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆರೋಪಿಸಿದ್ದರು.
ಮಲ್ಯ ವಿರುದ್ಧ ಮತ್ತೊಂದು ಕೇಸ್
ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮಲ್ಯ ವಿರುದ್ಧ ಹೊಸದಾಗಿ ಅಕ್ರಮ ಲೇವದೇವಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ಬಿಗಿಗೊಳಿಸಲು ಜಾರಿ ನಿರ್ದೇಶನಾಲಯ ಚಿಂತಿಸಿತ್ತು.
ಸುಪ್ರೀಂ ತರಾಟೆ
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಮಾನನಷ್ಟ ಮೊಕದ್ದಮೆ ಸಂಬಂಧ ಜಯಲಲಿತಾರನ್ನು ತರಾಟೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜಯಲಲಿತಾಗೆ ನೋಟಿಸ್ ಜಾರಿ ಮಾಡಿತ್ತು. ಜನಪ್ರತಿನಿಧಿಯಾಗಿ ನೀವು ಟೀಕೆಗಳನ್ನು ಎದುರಿಸಲೇಬೇಕು. ಜಯಾ ಅರ್ಜಿಗೆ ಸುಪ್ರೀಂ ಕೋರ್ಟ್ ಖಡಕ್ ಪ್ರತಿಕ್ರಿಯೆ ನೀಡಿದೆ. ಸಿಎಂ ಆರೋಗ್ಯದ ವರದಿ ಮಾಡಿದರೆ ಕೇಸ್ ಹಾಕಲಾಗಲ್ಲ. ಇದಕ್ಕೆಲ್ಲಾ ನೀವು ಮಾನನಷ್ಟ ಮೊಕದ್ದಮೆ ಹೂಡಲಾಗಲ್ಲ ಎಂದು ಸುಪ್ರೀಂ ಜಯಾಗೆ ಹೇಳಿತ್ತು.
ವರದಿ ವಿಶ್ಲೇಷಿಸುವಂತೆ ಸೂಚನೆ
ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ ಎಂಬ ವರದಿಗಳು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ನೌಕಾಪಡೆ ಮುಖ್ಯಸ್ಥರಿಗೆ ಬಹಿರಂಗಗೊಂಡಿರುವ ವರದಿಯನ್ನು ವಿಶ್ಲೇಷಿಸುವಂತೆ ಆದೇಶಿಸಿದ್ದರು. ಭಾರತೀಯ ನೌಕಾದಳದ ಸಬ್ ಮೆರಿನ್ ನ ರಹಸ್ಯ ದಾಖಲೆ ಸೋರಕೆ ಬಗ್ಗೆ ಆಸೀಸ್ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸಬ್ ಮೆರಿನ್ ನ 22 ಸಾವಿರ ಪುಟಗಳ ದಾಖಲೆ ಸೋರಿಕೆಯಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಸೂಕ್ತ ತನಿಖೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆದೇಶಿಸಿದ್ದರು.
ರಾಹುಲ್ ಗೆ ರಿಲೀಫ್
ಸುಪ್ರೀಂ ಕೋರ್ಟ್ ನಿಂದ ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ರಿಲೀಫ್ ದೊರಕಿತ್ತು. ರಾಹುಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ಕೇಸ್ ವಜಾವಾಗಿದೆ. ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣದಿಂದ ರಿಲೀಫ್ ಸಿಕ್ಕಿತ್ತು.
ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಗೆ ಒಪ್ಪಿಗೆ
ಬಾಡಿಗೆ ತಾಯಂದಿರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ-2016ಕ್ಕೆ ಒಪ್ಪಿಗೆ ನೀಡಲಾಗಿತ್ತು. ವಾಣಿಜ್ಯ ಬಾಡಿಗೆ ತಾಯ್ತನವನ್ನು ಈ ಮಸೂದೆ ನಿರ್ಬಂಧಿಸುತ್ತೆ. ಆದರೆ ಮಕ್ಕಳಿಲ್ಲದವರಿಗೆ ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗಿದೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ರಚನೆಯಾಗಲಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿಯೂ ಮಂಡಳಿ ರಚನೆಯಾಗಲಿದೆ ಎಂದು ಸಚಿವೆ ಸುಷ್ಮಾ ಹೇಳಿದ್ದರು. ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿಗಳು ತಮ್ಮ ಹತ್ತಿರದ ಸಂಬಂಧಿಕರನ್ನು ಮಾತ್ರ ಬಾಡಿಗೆ ತಾಯಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಂತೆಯೇ ಮಗು ಪಡೆಯುವ ದಂಪತಿಗಳು ವೈದ್ಯಕೀಯ ಖರ್ಚು ವೆಚ್ಚಗಳನ್ನು ಮಾತ್ರ ಭರಿಸಬೇಕಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿತ್ತು.
ಪೂರ್ವೋತ್ತರ ಭಾರತದಲ್ಲಿ ಕಂಪಿಸಿದ ಭೂಮಿ
ಪೂರ್ವ ಭಾರತದ ಹಲವೆಡೆ ಭೂಮಿ ಕಂಪಿಸಿತ್ತು. ಪಶ್ಚಿಮಬಂಗಾಳ, ಬಿಹಾರ, ಅಸ್ಸಾಂ, ಮಣಿಪುರ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಜಾರ್ಖಂಡ್, ಮಿಜೋರಾಂ ಸೇರಿದಂತೆ ಪೂರ್ವೋತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿತ್ತು. ನಾಗಾಲ್ಯಾಂಡ್ ಸೇರಿ ಹಲವೆಡೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 6.7 ಪ್ರಮಾಣದ ಭೂಕಂಪನ ದಾಖಲಾಗಿತ್ತು. ಕೇಂದ್ರ ಮ್ಯಾನ್ಮಾರ್ ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ.
ಗ್ರೆನೇಡ್ ದಾಳಿ
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಗ್ರೆನೇಡ್ ದಾಳಿ ನಡೆದಿತ್ತು. ದಾಳಿಯಲ್ಲಿ 10 ಪೊಲೀಸರಿಗೆ ಗಾಯಗಳಾಗಿತ್ತು.
ಕಾಬೂಲ್ ದಾಳಿ: ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಅಫ್ಘಾನಿಸ್ಥಾನದ ಕಾಬುಲ್ ನಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯದ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಪೊಲೀಸರು, ಇಬ್ಬರು ಭದ್ರತಾ ಸಿಬ್ಬಂಧಿಗಳು ಸೇರಿ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ ಎಂದು ಕಾಬುಲ್ ಪೊಲೀಸ್ ಇಲಾಖೆಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದರು.
ವಿವಿ ಸರ್ವರ್ ಹ್ಯಾಕ್
ಜಯನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯದ ಎಕ್ಸಾಮ್ ಸರ್ವರ್ ಹ್ಯಾಕ್ ಆಗಿತ್ತು. ವೆಬ್ ಸೈಟ್ ಮಾಡಿರುವ ದುಷ್ಕರ್ಮಿಗಳು ಮೆಸೇಜ್ ಕಳುಹಿಸಿದ್ದರು. ಸರ್ವರ್ ಸರಿಹೋಗಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ವಿವಿ ವೆಬ್ ಸೈಟ್ ನಲ್ಲಿ ಹ್ಯಾಕರ್ಸ್ ಸಂದೇಶ ರವಾನಿಸಿದ್ದರು.
ಪತ್ನಿಯ ಶವವನ್ನು ಹೊತ್ತು ಸಾಗಿದ ಪತಿ
ಒಡಿಶಾದಲ್ಲಿ ಹೃದಯ ವಿದ್ರಾಹಕ ಘಟನೆಯೊಂದು ನಡೆದಿತ್ತು. ಇದರಿಂದ ಒಡಿಶಾ ಸರ್ಕಾರಕ್ಕೆ ಮುಜುಗರ ತಂದಿಟ್ಟಿತ್ತು. ವ್ಯಕ್ತಿಯೊಬ್ಬ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಸಾಗಿದ ಘಟನೆ ಒಡಿಶಾ ಕಲಹಂಡಿಯಲ್ಲಿ ನಡೆದಿತ್ತು. ಕ್ಷಯ ರೋಗದಿಂದ ಬಳಲಿ, ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿ ಶವವನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿದ್ದ ಪತಿಯೊಬ್ಬ ಅಂತಿಮವಾಗಿ ಒಂದು ಬಟ್ಟೆಯಲ್ಲಿ ತನ್ನ ಪತ್ನಿಯ ಶವವನ್ನು ಸುತ್ತಿಕೊಂಡ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಮಾರ್ಗ ಮಧ್ಯೆ ಇದನ್ನು ಗಮನಿಸಿದ ಸ್ಥಳೀಯ ಮಾಧ್ಯಮಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದರು.
ಮಂಗಳೂರಿನಲ್ಲಿ ರಮ್ಯಾಗೆ ಮೊಟ್ಟೆ ಅಭಿಷೇಕ!
ಪಾಕಿಸ್ತಾನ ಪರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ, ಅವರ ಕಾರಿನತ್ತ ಮೊಟ್ಟೆ ಎಸೆದ ಘಟನೆ ಗುರುವಾರ ನಡೆದಿತ್ತು. ಪಾಕ್‌ ಪರ ಹೇಳಿಕೆ ನೀಡಿದ ಬೆನ್ನಲ್ಲೇ ಮಾಧ್ಯಮ ಸಂದರ್ಶನದಲ್ಲಿ ಮಂಗಳೂರು ನರಕ ಎಂದು ಇನ್ನೊಂದು ವಿವಾದ ಹುಟ್ಟು ಹಾಕಿದ್ದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಅಕ್ರೋಶಗೊಂಡು, ಪ್ರತಿಭಟನೆ ನಡೆಸಿದ್ದರು. ರಮ್ಯಾ ವಿಮಾನ ನಿಲ್ದಾಣದಿಂದ ಹೊರ ಬರುವಾಗ ಅಲ್ಲಿ ಸೇರಿದ್ದ ಪ್ರತಿಭಟನಾಕಾರರು ರಮ್ಯಾ ಗೋ ಬ್ಯಾಕ್ ಎಂದು ಕೂಗಿ, ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್‌ ಹಾಕಿದರು. ತಕ್ಷಣ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದಿದ್ದರು.
ಎರಡು ದಿನದ ರಾಜ್ಯ ಪ್ರವಾಸದಲ್ಲಿ ರಾಷ್ಟ್ರಪತಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಎರಡು ದಿನಗಳ ಕಾಲ ರಾಜ್ಯಕ್ಕೆ ಅಧಿಕೃತವಾಗಿ ಭೇಟಿ ನೀಡಿದ್ದರು. ಆ.27 ಮತ್ತು ಅ.28ರಂದು ರಾಷ್ಟ್ರಪತಿಯವರು ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದರು.
ಅರಮನೆ ಪ್ರವೇಶಕ್ಕೆ ಕ್ಷಣಗಣನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016 ಹಿನ್ನೆಲೆಯಲ್ಲಿ ಇಂದು ಗಜಪಡೆ ಸಮೂಹ ಅರಮನೆ ಆವರಣ ಪ್ರವೇಶಿಸಿದೆ. ಅರ್ಜುನ ನೇತೃತ್ವದ ದಸರಾ ಗಜಪಡೆಯ ಮೊದಲ ತಂಡ ಅರಮನೆ ಪ್ರವೇಶಿಸಿದೆ. ಅರ್ಜುನ, ಅಭಿಮನ್ಯು, ಬಲರಾಮ, ಗಜೇಂದ್ರ, ವಿಜಯ ಆನೆಗಳು ಅರಮನೆ ಪ್ರವೇಶಿಸಿದೆ. ಅರಮನೆ ಆವರಣದಲ್ಲಿ ಆನೆಗಳು, ಮಾವುತ, ಕಾವಡಿಗಳ ಸ್ತವ್ಯಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ಧಗಧಗ ಹೊತ್ತಿ ಉರಿದ ಶಾಲಾ ಬಸ್
ಸ್ಕೂಲ್ ಬಸ್ ಒಂದು ಧಗಧಗ ಹೊತ್ತಿ ಉರಿದ ಘಟನೆ ಹೈದರಾಬಾದ್ ಮನಿಕೊಂಡಾದಲ್ಲಿ ಸಂಭವಿಸಿತ್ತು. ಬಸ್ ನಲ್ಲಿದ್ದ ಶಾಲಾ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಸ್ಕೂಲ್ ಅವರಣದಲ್ಲಿ ಬಸ್ ಗೆ ಬೆಂಕಿ ಕಾಣಿಸಿಕೊಂಡಿದ್ದು, ಶಾಲಾ ಮಕ್ಕಳನ್ನು ಕೆಳಗಿಳಿಸುತ್ತಿದ್ದಂತೆ ಬಸ್ ಬೆಂಕಿಗಾಹುತಿಯಾಗಿದೆ.
ಬಿಎಂಟಿಸಿ ಧಗಧಗ
ಬಿಎಂಟಿಸಿ ಬಸ್ ಗೆ ಬೆಂಕಿ ತಗುಲಿದ ಘಟನೆ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸರ್ಜಾಪುರ ಬಳಿಯಿರುವ ತ್ಯಾವಕನಹಳ್ಳಿ ಗ್ರಾಮದಲ್ಲಿ ಸಂಭವಿಸಿತ್ತು. ಸರ್ಕಾರಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಬೆಂಕಿಯ ಕಿನ್ನಾಲೆಗೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.
ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ
ಹಾಜಿ ಅಲಿ ದರ್ಗಾಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು.
ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಮಹಿಳೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ತೀರ್ಪು ಪ್ರಕಟಿಸಿತ್ತು. ಪವಿತ್ರ ಸಮಾಧಿ ಸ್ಥಳಕ್ಕೆ ಮಹಿಳೆಯರ ಪ್ರವೇಶಕ್ಕೆ ದರ್ಗಾ ಮಂಡಳಿ ನಿಷೇಧ ಹಾಕಿತ್ತು. ಇದನ್ನು ಪ್ರಶ್ನಿಸಿ ಸಾರ್ಜಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇನ್ನು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ದರ್ಗಾ ಮಂಡಳಿ ಹೇಳಿದೆ.
ಸೋರಿಕೆಯಲ್ಲ… ಕಳ್ಳತನ!
ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ಮಹತ್ವದ ಮಾಹಿತಿ ಲಭ್ಯವಾಗಿತ್ತು. ದಿ ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿರುವಂತೆ ಮಾಹಿತಿ ಸೋರಿಕೆಯಾಗಿಲ್ಲ. ಬದಲಿಗೆ ಇಡೀ ದಾಖಲೆಗಳನ್ನೇ ಕದಿಯಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಈ ವಿಚಾರವನ್ನು ಸ್ವತಃ ಫ್ರಾನ್ಸ್ ಸರ್ಕಾರ ಒಪ್ಪಿಕೊಂಡಿದ್ದು, ನೌಕಾ ಮಾಹಿತಿ ಕಳುವಾಗಿದೆ ಎಂದು ಹೇಳಿದೆ. 2011ರಲ್ಲೇ ಮಾಹಿತಿಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳವು ಪ್ರಕರಣದಲ್ಲಿ ಫ್ರಾನ್ಸ್ ನ ನೌಕಾಪಡೆಯ ಮಾಜಿ ಅಧಿಕಾರಿಯ ಪಾತ್ರದ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಸ್ಕಾರ್ಪಿನ್ ನೌಕೆ ನಿರ್ಮಾಣ ಮಾಡುತ್ತಿರುವ ಡಿಸಿಎನ್ ಎಸ್ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಿದ್ದ ಫ್ರಾನ್ಸ್ ನ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬ ನೌಕೆಯ ಮಾಹಿತಿಯನ್ನು ಕದ್ದು ಚೀನಾ ಅಥವಾ ಪಾಕಿಸ್ತಾನಕ್ಕೆ ನೀಡಿರಬಹುದು ಎಂದು ಶಂಕಿಸಲಾಗಿತ್ತು.
ಕುಡಿದು ಶಾಲಾ ಬಸ್ ಚಾಲನೆ
ಕುಡಿದು ಶಾಲಾ ಬಸ್ ಚಲಾಯಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿತ್ತು. ಪಾನಮತ್ತ ಚಾಲಕರಾದ ಕೃಷ್ಣ, ವೆಂಕಟಸ್ವಾಮಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನ್ಯೂ ಹಾರಿಜನ್ ಗುರುಕುಲ್ ಶಾಲೆಯ ಎರಡು ಬಸ್ ಗಳನ್ನು ಜಪ್ತಿ ಮಾಡಲಾಗಿತ್ತು. ಲಾಲ್ ಬಾಗ್ ‍ಪ್ರವಾಸಕ್ಕೆಂದು ಕಾಡುಬೀಸನಹಳ್ಳಿಯ ಶಾಲೆಯಿಂದ ಮಕ್ಕಳನ್ನು ಶಾಲಾ ಬಸ್ ನಲ್ಲಿ ಕರೆತರಲಾಗುತ್ತಿತ್ತು.
ಕರ್ನಾಟಕದಲ್ಲಿ ‘ಪ್ರವಾಸಿ ಭಾರತೀಯ ದಿವಸ್’
ಬೆಂಗಳೂರಿನಲ್ಲಿ 14ನೇ ‘ಪ್ರವಾಸಿ ಭಾರತೀಯ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸುಷ್ಮಾ ಸ್ವರಾಜ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಇದೇ ಮೊದಲ ಭಾರಿಗೆ ಕರ್ನಾಟಕದಲ್ಲಿ ಪ್ರವಾಸಿ ದಿವಸ್ ಆಚರಣೆಯಾಗಲಿದೆ. 2017 ಜನವರಿ 7, 8 ಮತ್ತು 9ಕ್ಕೆ ಪ್ರವಾಸಿ ಭಾರತೀಯ ದಿವಸ್ ಆಚರಣೆ ನಡೆಯಲಿದೆ. ವಿಷಯ ಅನೌನ್ಸ್ ಮಾಡಲು ಅತೀವ ಸಂತಸವಾಗುತ್ತಿದೆ. ಭಾರತೀಯ ದಿವಸ್ ಅನ್ನು ಅವಿಸ್ಮರಣಿಯವಾಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಪ್ರವಾಸಿ ಭಾರತೀಯ ದಿವಸ್ ಗೆ ಅತಿಥಿಗಳಿಗೆ ಮುಕ್ತಾ ಆಹ್ವಾನ ನೀಡಲಾಗಿದೆ. ಪ್ರವಾಸಿ ‘ಭಾರತೀಯ ದಿವಸ್’ ನ ಲೋಗೋ ಬಿಡುಗಡೆ ಮಾಡಿದ್ದು, ಪ್ರತಿನಿಧಿಗಳ ರಿಜಿಸ್ಟ್ರೇಷನ್ ಪೋರ್ಟಲ್ ಗೂ ಸಿಎಂ ಚಾಲನೆ ನೀಡಿದ್ದರು.
ಹಾಲು ಕೃಷ್ಣಾರ್ಪಣ…
ಡೈರಿ ಹಾಲಿನ ಟ್ಯಾಂಕರ್ ಸೇತುವೆ ಬಳಿ ಪಲ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿನಬೇಸಿಗೆ ಗ್ರಾಮದ ಬಳಿ ಶರಾವತಿ ನದಿ ಸೇತುವೆ ಮೇಲೆ ನಡೆದಿತ್ತು. ಹಾಲಿನ ವಾಹನ ಪಲ್ಟಿಯಾದ ಹಿನ್ನೆಲೆಯಲ್ಲಿ ವಾಹನದಲ್ಲಿದ್ದ ಸುಮಾರು 20 ಸಾವಿರ ಲೀಟರ್ ಹಾಲು ಶರಾವತಿ ನದಿ ಪಾಲಾಗಿತ್ತು. ಹಾಲಿನ ಟ್ಯಾಂಕರ್ ಹುಬ್ಬಳ್ಳಿಯಿಂದ ಮಂಗಳೂರಿಗೆ ಹೊರಟ್ಟಿತ್ತು. ಅಪಘಾತವಾದ ವಾಹನ ಮಹಾರಾಷ್ಟ್ರ ಮೂಲದ ಕೃಷ್ಣ ಹಾಲಿನ ಡೈರಿಗೆ ಸೇರಿತ್ತು.
ಗುರಂಗಾವ್ ನಲ್ಲಿ ಭಾರೀ ಮಳೆ
ದೆಹಲಿ ಬಳಿಯ ಗುರಂಗಾವ್ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಬಿಟ್ಟುಬಿಡದೇ ನಿರಂತರ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದರು.
ಭೀಕರ ರಸ್ತೆ ಅಪಘಾತ: 8 ಸಾವು
ಎರಡು ಬೃಹತ್ ಲಾರಿಗಳ ನಡುವೆ ಟವೇರಾ ಸಿಕ್ಕಿಹಾಕಿಕೊಂಡ ಪರಿಣಾಮ ಟವೇರಾದಲ್ಲಿದ್ದ 8 ಜನರು ಧಾರುಣಾವಾಗಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸುತಾರಿಗುಡ ಟೋಲ್ ಬಳಿ ಸಂಭವಿಸಿತ್ತು. ಟೋಲ್ ಕಟ್ಟಲು ನಿಂತಿದ್ದ ಲಾರಿಗೆ ಟವೇರಾ ಬಂದು ಡಿಕ್ಕಿಯಾಗಿದ್ದು, ಇದೇ ವೇಳೆ ಟವೇರಾಗೆ ಹಿಂದಿನಿಂದ ಬೃಹತ್ ಲಾರಿ ಡಿಕ್ಕಿಯಾಗಿತ್ತು. 2 ಬೃಹತ್ ಲಾರಿಗಳ ನಡುವೆ ಸಿಕ್ಕಿಹಾಕಿಕೊಂಡ ಟವೇರಾ ನಜ್ಜುಗುಜ್ಜಾಗಿತ್ತು.
ಸಿನಿಮೀಯ ರೀತಿಯಲ್ಲಿ ಕೈದಿ ಎಸ್ಕೇಪ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಡೇವಿಡ್ ಎಂಬಾತ ಸಿನಿಮೀಯ ರೀತಿಯಲ್ಲಿ ತರಕಾರಿ ವಾಹನದಲ್ಲಿ ಎಸ್ಕೇಪ್ ಆಗಿದ್ದ.
ಡಿಸೇಲ್ ಟ್ಯಾಂಕರ್ ಪಲ್ಟಿ
ಡಿಸೇಲ್ ಟ್ಯಾಂಕರ್ ಪಲ್ಟಿಯಾದ ಘಟನೆ ಬಳ್ಳಾರಿ ಜಿಲ್ಲೆಯ ಹಲಕುಂದಿ ಬಳಿ ಸಂಭವಿಸಿತ್ತು. ಟ್ಯಾಂಕರ್ ಪಲ್ಟಿಯಾ‍ದ ಪರಿಣಾಮ ಭಾರೀ ಪ್ರಮಾಣದ ಡೀಸೆಲ್ ಸೋರಿಕೆಯಾಗಿತ್ತು.
ವಿಶೇಷ ಕೋರ್ಟ್ ಲೋಕಾರ್ಪಣೆ
ಬೆಂಗಳೂರಿನಲ್ಲಿ ಕೆಂಪೇಗೌಡ ರಸ್ತೆ ಕಂದಾಯ ಭವನದಲ್ಲಿ ನಿರ್ಮಾಣವಾದ ಈ ವಿಶೇಷ ಕೋರ್ಟ್ ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಭೂಕಬಳಿಕೆ ತಡೆಯಲು ವಿಶೇಷ ಕೋರ್ಟ್ ಸ್ಥಾಪನೆಯಾಗಿದೆ.
ಪಾಕ್ ನ್ನು ಬದಿಗಿಟ್ಟು ತ್ರಿಪಕ್ಷೀಯ ಮಾತುಕತೆ
ಪಾಕಿಸ್ತಾನವನ್ನು ಮತ್ತಷ್ಟು ಪ್ರತ್ಯೇಕಿಸಲು ಸಾಧ್ಯವಾಗಿರುವ, ಆಫ್ಘಾನಿಸ್ತಾನವನ್ನು ಬಲಗೊಳಿಸಿ ಮತ್ತಷ್ಟು ಸ್ಥಿರಗೊಳಿಸಲು ತ್ರಿಪಕ್ಷೀಯ ಸಹಕಾರವನ್ನು ಆರಂಭಿಸಲು ಭಾರತ ಮತ್ತು ಅಮೆರಿಕ ಘೋಷಿಸಿತ್ತು.
ರಾಷ್ಟ್ರರಾಜಧಾನಿಯಲ್ಲಿ ಮಳೆ ಅವಾಂತರ!
ದೆಹಲಿಯಲ್ಲಿ ವರುಣ ಭಾರೀ ಅವಾಂತರ ಸೃಷ್ಠಿಸಿತ್ತು. ವರ್ಷಧಾರೆಗೆ ರಾಷ್ಟ್ರರಾಜಧಾನಿ ತತ್ತರಿಸಿ ಹೋಗಿತ್ತು. ಮಳೆನೀರಿನಿಂದ ದೆಹಲಿಯ ರಸ್ತೆಗಳು ಕೆರೆಯಂತಾಗಿತ್ತು.
ಅಯ್ಯೋ ಹಳ್ಳಕ್ಕೆ ಬಿದ್ದುಬಿಟ್ಟಿಯಾ…!
ಒಂಟಿ ಸಲಗ ಹಳ್ಳಕ್ಕೆ ಬಿದ್ದ ಪರಿಣಾಮ ಬೆಂಗಳೂರು ದಕ್ಷಿಣ ತಾಲೂಕಿನ ಗೋಪಾಲನಗರದ ನಡೆದಿತ್ತು. ಹಳ್ಳಕ್ಕೆ ಬಿದ್ದಿದ್ದರಿಂದ ಕಾಡಾನೆಯ ಬಲಗಾಲಿಗೆ ಗಾಯಗಳಾಗಿತ್ತು. ರಸ್ತೆ ಮೇಲೆ ಚಲಿಸುತ್ತಿದ್ದ ವೇಳೆ ಆನೆ ಆಯತಪ್ಪಿ ಹಳ್ಳಕ್ಕೆ ಬಿದ್ದಿತ್ತು. ಏಕಾಏಕಿ ರಸ್ತೆಯಿಂದ ಎಡಭಾಗದ ಗುಂಡಿಗೆ ಬಿದ್ದುಬಿಟ್ಟಿತ್ತು.
ಕೆರ್ರಿಯನ್ನೂ ಕಾಡಿದ ವರುಣ
ಈ ವೇಳೆ ಮಾತನಾಡಿದ ಕೆರ್ರಿ, ‘ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದು ಸಂತೋಷ ತಂದಿದೆ. ಮಳೆಯಿಂದಾಗಿ ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.ಕಾರ್ಯಕ್ರಮಕ್ಕೆ ನೀವೆಲ್ಲಾ ಬೋಟ್ ನಲ್ಲಿ ಬಂದಿದ್ದೀರಾ? ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದರು. ಭಾರತ ಪ್ರವಾಸದಲ್ಲಿರುವ ಜಾನ್ ಕರ್ರಿ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಾನ್ ಕೆರ್ರಿ ಭಾಷಣ ಮಾಡಿದ್ದಾರೆ. ಭಾಷಣದ ವೇಳೆ ಟ್ರಾಫೀಕ್ ಜಾಮ್, ಮಳೆ ಬಗ್ಗೆ ಉಲ್ಲೇಖ ಮಾಡಿದ್ದರು. ಭಾರೀ ಮಳೆಯಿಂದಾಗಿ ಭಾರತ ಭೇಟಿಯಲ್ಲಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ದೆಹಲಿ ಸುತ್ತಮುತ್ತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಜನೆಯನ್ನು ರದ್ದುಗೊಳಿಸಿದ್ದರು.

LEAVE A REPLY

Please enter your comment!
Please enter your name here