ಆಕಾಶವಾಣಿ ಫೋನ್-ಇನ್ ಸಿಎಂ

0
426

 
ವರದಿ: ಲೇಖಾ
ಬೆಂಗಳೂರು ಆಕಾಶವಾಣಿ ಕೇಂದ್ರವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿಶೇಷ ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಿದೆ.
 
ಶನಿವಾರ ರಾತ್ರಿ 7-45 ಗಂಟೆಯಿಂದ ರಾತ್ರಿ 8-42 ಗಂಟೆಯವರೆಗೆ ನಡೆಯಲಿರುವ ಈ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಶೋತೃಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
 
ಆಕಾಶವಾಣಿಯ ದೂರವಾಣಿ ಸಂಖ್ಯೆಗಳಾದ 080 – 2237 0477, 080 – 2237 0488 ಹಾಗೂ 080 – 2237 0499 ಮೂಲಕ ಶ್ರೋತೃಗಳು ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here