ಆಂಧ್ರದ ಪಾಲಾಗುತ್ತಿರುವ ನೀರು

0
280

ರಾಯಚೂರು ಪ್ರತಿನಿಧಿ ವರದಿ
ಆರ್ ಡಿ ಎಸ್ ಡ್ಯಾಂನಿಂದ ಆಂಧ್ರಕ್ಕೆ ಸರಾಗವಾಗಿ ನೀರು ಹರಿಯುತ್ತಿದೆ. ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ರಾಜಲಬಂಡ ಗ್ರಾಮದ ಬಳಿಯಿರುವ ಡ್ಯಾಂಗೆ ತಾತ್ಕಾಲಿಕ ಗೇಟ್ ಅಳವಡಿಸಿದರೂ ನೀರು ಹರಿವು ಇನ್ನೂ ನಿಲ್ಲಲಿಲ್ಲ.
 
 
 
 
ಇದರಿಂದ ಪ್ರತಿನಿತ್ಯ 200 ಕ್ಯೂಸೆಕ್ ನೀರು ಆಂಧ್ರದ ಪಾಲಾಗುತ್ತಿದೆ. ಈವರೆಗೆ 3000 ಕ್ಯೂಸೆಕ್ ನೀರು ಆಂಧ್ರದ ಪಾಲಾಗಿದೆ. ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನೀರಿನ ಒತ್ತಡಕ್ಕೆ ತಾತ್ಕಾಲಿಕ ಗೇಟ್ ಬೆಂಡಾಗುತ್ತಿದೆ.
 
 
 
ಅಧಿಕಾರಿಗಳು ಶಾಶ್ವತ ರಿಪೇರಿಗೆ ಚಿಂತನೆ ನಡೆಸಿದ್ದಾರೆ. ಪ್ರಸ್ತುತ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ 6 ಅಡಿ ಇದೆ. ಕಲಾಶಯದ ಗರಿಷ್ಟ ಸಂಗ್ರಹ ಸಾಮರ್ಥ್ಯ 8 ಅಡಿಗಳಿವೆ.

LEAVE A REPLY

Please enter your comment!
Please enter your name here