ಅ.7ರಿಂದ ಕಬ್ಬಡ್ಡಿ ವಿಶ್ವಕಪ್ ಟೂರ್ನಿ ಆರಂಭ

0
190

ಸ್ಪೋರ್ಟ್ಸ್ ಪ್ರತಿನಿಧಿ ವರದಿ
8ನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ.
 
 
ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣದಲ್ಲಿವೆ. 2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.
 
 
ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಿದೆ. ಅ.21 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಅದರ ಮರುದಿನವೇ ಫೈನಲ್ ನಿಗದಿಯಾಗಿದೆ.
ವಿಶ್ವಕಪ್‌ಗೆ ವಿಶೇಷ ಲಾಂಛನವನ್ನು ತಯಾರಿಸಲಾಗಿದ್ದು, ಸಿಂಹ ಗರ್ಜನೆಯ ಮುಖ ಹೊಂದಿದೆ.
ಗುಂಪುಗಳ ವಿವರ:
ಗುಂಪು ಎ : ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ ದೇಶ ಇದೆ.
ಗುಂಪು ಬಿ: ಇರಾನ್, ಥಾಯ್ಲೆಂಡ್, ಜಪಾನ್, ಯುಎಸ್ಎ, ಪೋಲೆಂಡ್ ಹಾಗೂ ಕೀನ್ಯಾ ದೇಶ ಇದೆ.

LEAVE A REPLY

Please enter your comment!
Please enter your name here