ಅ.28: ಗಂಜೀಮಠದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

0
375

ನಮ್ಮ ಪ್ರತಿನಿಧಿ ವರದಿ
ಉಚಿತ ಮಧುಮೇಹ ಶಿಬಿರ
ರಾಷ್ಟ್ರೀಯ ಆಯುರ್ವೇದ ದಿನದ ಅಗಂವಾಗಿ ಗಂಜೀಮಠದ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯ ವತಿಯಿಂದ ಅಕ್ಟೋಬರ್ 28ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರ ನಡೆಯಲಿದೆ.
 
 
 
ಮಧುಮೇಹ ನಿಯಂತ್ರಣ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದದ ಪಾತ್ರ ಎಂಬ ವಿಷಯದ ಬಗ್ಗೆ ಈ ಸಂದರ್ಭದಲ್ಲಿ ವಿಶೇಷ ಮಾಹಿತಿ ಶಿಬಿರ ನಡೆಯಲಿದೆ. ಗಂಜೀಮಠದ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯ ವಠಾರದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ.
 
 
ಹಿರಿಯ ಪುರೋಹಿತ ಶ್ರೀಪತಿ ಭಟ್ ನಾರ್ಲಪದವು ಶಿಬಿರದ ಉದ್ಘಾಟನೆ ನಡೆಸುವರು. ವಾರ್ತೆ.ಕಾಂ ನ ಪ್ರಧಾನ ಸಂಪಾದಕ ಹರೀಶ್ ಕೆ.ಆದೂರು, ಗಂಜೀಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ತಾಲೂಕು ಪಂಚಾಯತ್ ಸದಸ್ಯ ಸುನೀಲ್ ಅತಿಥಿಗಳಾಗಿ ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆಯಬೇಕಾಗಿ ಡಾ.ಸತೀಶ್ ಶಂಕರ್ ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here