ಅಸುರಕ್ಷಿತ ರಕ್ತ ವರ್ಗಾವಣೆಯಿಂದ ಎಚ್ ಐವಿ ಸೋಂಕು

0
424

 
ರಾಷ್ಟ್ರೀಯ ಪ್ರತಿನಿಧಿ ವರದಿ
ರಕ್ತ ವರ್ಗಾವಣೆಯ ಸಂದರ್ಭ ಭಾರತದಲ್ಲಿ 2234 ಮಂದಿಗೆ ಎಚ್ ಐವಿ ತಗುಲಿದೆ ಎಂಬ ಅತಂಕಕಾರಿ ಮಾಹಿತಿಯನ್ನು ನ್ಯಾಕೋ ಬಿಡುಗಡೆ ಮಾಡಿದೆ.
 
 
ಆಸ್ಪತ್ರೆಗಳ ಅಸುರಕ್ಷತೆ, ಅವೈಜ್ಞಾನಿಕ ಕ್ರಮ ಮತ್ತು ಬೇಜಾವಾಬ್ದಾರಿಯಿಂದಾಗಿ ಈ ಅಚಾತುರ್ಯ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಆರ್ ಟಿಐ ಕಾರ್ಯಕರ್ತ ಚೇತನ್ ಕೊಠಾರಿ ಎಂಬುವವರು ಹಕ್ಕು ಕಾಯ್ದೆ ಅಡಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯಿಂದ ಪಡೆದ ಮಾಹಿತಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
 
 
 
ಕಳೆದ 17 ತಿಂಗಳಿಂದ ಉತ್ತರಪ್ರದೇಶದಲ್ಲಿ 361 ಪ್ರಕರಣಗಳು, ಕರ್ನಾಟಕಲ್ಲಿ 127 ಪ್ರಕರಣಗಳು, ಗುಜರಾತ್, ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ಭಾರೀ ಪ್ರಮಾಣದಲ್ಲಿ ಅಸುರಕ್ಷಿತ ರಕ್ತ ವರ್ಗಾವಣೆಯಿಂದ ಎಚ್ ಐವಿ ಸೋಂಕು ಹರಡಿದ ಪ್ರಕರಣಗಳು ಪತ್ತೆಯಾಗಿದೆ.

LEAVE A REPLY

Please enter your comment!
Please enter your name here