ಉದ್ಯೋಗಸಾಮಾನ್ಯ ಜ್ಞಾನ

ಅವಿಭಜಿತ ದ.ಕ ಜಿಲ್ಲೆಯ ಸ್ವಸಹಾಯ ಸಂಘದ ಸಮಾವೇಶ.

ಅವಿಭಜಿತ ದ.ಕ ಜಿಲ್ಲೆಯ ಸ್ವಸಹಾಯ ಸಂಘದ ಸಮಾವೇಶ.

ಮೂಡುಬಿದಿರೆ: ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಸಹಾಯ ಸಂಘದ ಸಮಾವೇಶ ಭಾನುವಾರ ಮೂಡುಬಿದಿರೆಯ ಪದ್ಮಾವತಿ ಕಲಾ ಮಂಟಪದಲ್ಲಿ ನಡೆಯಿತು, ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಬಗೆಗೆ ಮಾತನಾಡಿದ ನೇಮಿರಾಜ ಅಡಿಗ “೨೦೧೧ರಲ್ಲ ಕರ್ನಾಟಕ ಸ್ಥಾಪನೆಗೊಂಡ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಕೆಲವೇ ಕೆಲವು ವರ್ಷಗಳಲ್ಲಿ ಮೂವತ್ತು ಸಾವಿರ ಸ್ವಯಂ ಸೇವಕರು ಇದೀಗ ಸಕ್ರಿಯ ಭಾಗಿದಾರರಾಗಿದ್ದಾರೆ, ರಾಜ್ಯಾದ್ಯಂತ ಸುಮಾರು ೧೫ ಸಾವಿರ ಮಹಿಳೆಯರನ್ನು ಹೊಂದಿರುವ ಸ್ವಸಹಾಯ ಸಂಘ ಸುಮಾರು ಹದಿನೈದು ಕೋಟಿ ವಹಿವಾಟು ನಡೆಸಿದೆ, ಪ್ರಸಕ್ತ ಸಾಲಿನಲ್ಲಿ ಸುಮಾರು ಹತ್ತು ಕೋಟಿ ಸಾಲ ಮತ್ತಿತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲಾಗಿದೆ, ಸುಮಾರು ೨೮೫ ಮಂದಿ ಯುವಕರ ವಿವಾಹಕ್ಕಾಗಿ ಹದಿನೈದು ಸಾವಿರ ರೂಪಾಯಿ ಸಹಾಯಧನವನ್ನು ನೀಡಿದೆ” ಎಂದರು. ಇದೇ ವೇಳೆಯಲ್ಲಿ ಜೈನ ಸಮಾಜದ ಪರ ಹಕ್ಕೊತ್ತಾಯ ಮಾಡಿದ ನೇಮಿಚಂದ್ರ ಅಡಿಗ “ಜೈನ ಸಮಾಜವ ಅಲ್ಪಸಂಖ್ಯಾತ ಸ್ಥಾನ ಹೆಸರಿಗಷ್ಟೇ ಸೀಮಿತವಾಗಿದೆ ಸುಮಾರು ನಲವತ್ತಕ್ಕೂ ಹೆಚ್ಚು ಪ್ರವರ್ಗ ಇರುವ ಜೈನ ಸಮಾಜವನ್ನ ೩ಬಿ ಇಂದ ೨ಬಿಗೆ ಸೇರ್ಪಡೆಗೊಳಿಸಬೇಕು,ಜೈನರಿಗೆ ಕೆಲವೊಂದು ಸೌಲಭ್ಯಗಳು ಸಿಗುತ್ತಿಲ್ಲ ಈ ಕಾರಣದಿಂದಾಗಿ ೩ಬಿ ಯಿಂದ ೨ಬಿಗೆ ಸೇರ್ಪಡೆಗೊಳಿಸಬೇಕು” ಎಂದು ಹಕ್ಕೊತ್ತಾಯ ಮಂಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರು “ನಾವು ಭಿಕ್ಷುಕರಲ್ಲ, ನಮ್ಮ ಹಕ್ಕನ್ನ ನಾವು ಪಡೆಯಬೇಕು ಎಂಬುದು ತಪ್ಪಲ್ಲ, ನನ್ನ ಬಳಿ ಬರುವ ಹಲವರು ಇತರ ಸಮುದಾಯದವರು ತಮಗೆ ಸಿಗುವ ಹಕ್ಕನ್ನ ಕೇಳಿ ಪಡೆಯುತ್ತಾರೆ ಆದರೆ ಜೈನರು ಸಂಕೋಚದಿಂದ ಕೇಳಿ ಪಡೆಯುತ್ತಾರೆ ಎನ್ನುತ್ತಾರೆ, ಸೇವೆಗಳಲ್ಲಿ ಎರಡು ರೀತಿಯ ಸೇವೆ ಒಂದು ತಮಗಾಗಿ ಇನ್ನೊಂದು ಸಮಾಜಕ್ಕಾಗಿ, ನಾವೆಲ್ಲರೂ ಸಮಾಜದ ಏಳಿಗೆಗೆ ಶ್ರಮಿಸಬೇಕಿದೆ, ಸಂಸಾರ ಹಾಗೂ ಸಮಾಜ ಇವೆರಡೂ ಮಾನವ ಜೀವನಕ್ಕೆ ಅತೀ ಮುಖ್ಯ, ಸಂಸಾರ ಏಳಿಗೆಯಾದಾಗ ಸಮಾಜ ಏಳಿಗೆಯಾಗುತ್ತದೆ, ನಾವು ನಾನೇ ಶ್ರೇಷ್ಠ ಎಂಬ ಭಾವನೆ ಬಿಟ್ಟಾಗ ಮೋಕ್ಷ ಸಾಧ್ಯ, ನಮ್ಮಲ್ಲಿ ಶುದ್ಧತೆಯಿರಬೇಕು, ನಾವು ಲಾಲಸೆಗೆ ಬಲಿಯಾಗಬಾರದು, ನಾವು ಸಂಪತ್ತಿನ ಕೈಯಲ್ಲಿ ಸ್ವತ್ತಾಗಬಾರದು ಸಂಪತ್ತು ನಮ್ಮ ಸ್ವತ್ತಾಗಬೇಕು” ಎಂದರು. ಕಾರ್ಯಕ್ರಮದ ಗೌರವಾಧ್ಯಕ್ಷರಾದ ಎಂ.ಎನ್.ರಾಜೇಂದ್ರರವರು “ನಾನು ಎಂಬುದು ಸ್ವಯಂ ಸೇವಾ ಸಂಘಗಳಿಂದ ಹೋಗುತ್ತದೆ ” ನಾನು” ಎಂಬುದು ಹೋದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ, ಮಹಿಳೆಯರಿಗೆ ದ್ವಿಪಾತ್ರದ ವರ ದೇವರು ಕರುಣಿಸಿದ್ದಾನೆ, ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಎರಡೂ ಕಡೆ ಕಾರ್ಯನಿರ್ವಹಿಸುವ ಶಕ್ತಿ ಮಹಿಳೆಗೆ ಇದೆ.” ಎಂದರು. ವೇದಿಕೆಯಲ್ಲಿ ಮೂಡು ಬಿದಿರೆಯ ಖ್ಯಾತ ವಕೀಲರಾದ ಶ್ರೀಮತಿ ಶ್ವೇತಾ ಸೇರಿದಂತೆ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಸ್ವಸಹಾಯ ಸಂಘಂದ ಸದಸ್ಯರು ಭಾಗಿಯಾಗಿದ್ದರು, ಮಾಜಿ ಶಾಸಕರಾದ ಅಭಯಚಂದ್ರ ಜೈನ್ ಹಾಗೂ ಹಾಲಿ ಮೂಲ್ಕಿ ಮೂಡುಬಿದಿರೆ ಶಾಸಖ ಉಮಾನಾಥ್ ಕೋಟ್ಯಾನ್ ವೇದಿಕೆ ಹಂಚಿಕೊಂಡರು

Comment here