ಅವಲಕ್ಕಿ ಮಿಕ್ಸರ್

0
792

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
ಅವಲಕ್ಕಿ – 5 ಕಪ್‌ಗಳು, ಅವರೆಕಾಳು – 1 ಕಪ್, ಕಡಲೆಕಾಳು – 2 ಚಮಚ, ಬಟಾಣಿ – 3 ಚಮಚ, ಉದ್ದಿನ ಬೇಳೆ – 3 ಚಮಚ, ಸಾಸಿವೆ- 3 ಚಮಚ, ಅರಶಿನ ಹುಡಿ – 1 ಚಮಚ, ಕರಿಬೇವಿನೆಲೆ – 8-10 ಎಸಳು, ಮುರಿದ ಕೆಂಪು ಮೆಣಸು – 4-5, ಇಂಗಿನ ಹುಡಿ – 1 ಚಮಚ, ಕೊಬ್ಬರಿ -ಸಣ್ಣ ತುಂಡು, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ- 2 ಚಮಚ.
 
 
 
ತಯಾರಿಸುವ ವಿಧಾನ
ಅವರೆಕಾಳನ್ನು ಮೊದಲಿಗೆ ಸಿಪ್ಪೆಯಿಂದ ಬೇರ್ಪಡಿಸಿ ಇದನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅವರೆಕಾಳು ಅನ್ನು ಎಣ್ಣೆಗೆ ಹಾಕಿ ಮತ್ತು ಅದು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಇದೇ ಸಮಯದಲ್ಲಿ ಅವಲಕ್ಕಿಯನ್ನು ಹುರಿದುಕೊಳ್ಳಿ. ಕೊಬ್ಬರಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಕಡಲೆಕಾಳು, ಕೊಬ್ಬರಿ ತುಂಡನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದುಕೊಳ್ಳಿ. ಇದು ಚಿನ್ನದ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಇದಕ್ಕೆ ಕರಿಬೇವಿನೆಲೆ, ಮೆಣಸು, ಸಾಸಿವೆ, ಉದ್ದಿನ ಬೇಳೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
ನಂತರ ಇದಕ್ಕೆ ಅರಶಿನ ಹುಡಿ, ಇಂಗು, ಉಪ್ಪು ಹಾಕಿ 30 ಸೆಕೆಂಡುಗಳಷ್ಟು ಹುರಿದುಕೊಳ್ಳಿ. ತದನಂತರ ಇದಕ್ಕೆ ಮೆಣಸಿನಹುಡಿ ಹಾಕಿ 15 ಸೆಕೆಂಡು ಹುರಿಯಿರಿ.
ಇನ್ನು ಇದಕ್ಕೆ ಅವರೆಕಾಳು ಹಾಗೂ ಹುರಿದ ಅವಲಕ್ಕಿಯನ್ನು ಸೇರಿಸಿ. ಉರಿಯನ್ನು ಕಡಿಮೆ ಮಾಡಿಕೊಳ್ಳಿ. ಇದು ತಣ್ಣಗಾಗುತ್ತಿದ್ದಂತೆ ಗಟ್ಟಿ ಮುಚ್ಚಳವಿರುವ ಪಾತ್ರೆಯಲ್ಲಿ ತೆಗೆದಿಡಿ.
 

LEAVE A REPLY

Please enter your comment!
Please enter your name here