ಅವರ ಭವಿಷ್ಯ ನಿಜವಾಯ್ತು…! ಯಡಿಯೂರಪ್ಪ ಸರ್ಕಾರ ಭದ್ರವಾಯ್ತು!

0
13399

ಮೂಡುಬಿದಿರೆ: ಅರರೆ ಇದೇನಪ್ಪಾ ಎಂಬ ಯೋಚನೆಯೇ… ಇದು ಹೌದು…ಯಾಕಂದ್ರೆ ಅವರು ಅಂದೇ ಭವಿಷ್ಯ ನುಡಿದಿದ್ರು. ಆ ಭವಿಷ್ಯ ಇದೀಗ ಮತ್ತೊಮ್ಮೆ ನಿಜವಾಯ್ತು. ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವ ಖಂಡಿತಾ ಬದಲಾವಣೆಯಾಗದು ಎಂಬ ಭವಿಷ್ಯ ಅವರದ್ದಾಗಿತ್ತು. ಇದೀಗ ಉಪ ಚುನಾವಣೆಯ ನಂತರ ಈ ಭವಿಷ್ಯ ಮತ್ತೊಮ್ಮೆ ದೃಢವಾಗಿದೆ. ಬಿಜೆಪಿ ಭರ್ಜರಿ ಜಯ ಗಳಿಸುವ ಮೂಲಕ ಯಡಿಯೂರಪ್ಪ ಅವರ ತಾಕತ್ತು ಮತ್ತೊಮ್ಮೆ ಸಾಬೀತಾಗಿದೆ. ಪಕ್ಷ ಮತ್ತಷ್ಟು ಗಟ್ಟಿಯಾಗುವಂತಾಗಿದೆ.


ಹಾಗಾದರೆ ಈ ನಿಖರ ಭವಿಷ್ಯ ನುಡಿದದ್ದು ಯಾರು ಗೊತ್ತೇ.? ಕರಾವಳಿ ಭಾಗದ ಹೆಸರಾಂತ ಜ್ಯೋತಿಷ್ಯ ಮನೆತನದ , ಇಂದಿಗೂ ಅದೆಷ್ಟೋ ರಾಜಕೀಯ ಮುಖಂಡರು ತಮ್ಮ ಭವಿಷ್ಯದ ಬಗ್ಗೆ ಕೇಳಿ ಅರಿತುಕೊಳ್ಳುವ ಹೆಸರಾಂತ ಜ್ಯೋತಿಷ್ಯ ವಿಧ್ವಾನ್‌ ಪ್ರಖ್ಯಾತ ಜ್ಯೋತಿಷಿ ಕೆ.ವಿ.ಗಣೇಶ್‌ ಭಟ್‌ ಈ ವಿಚಾರವನ್ನು ಈ ಹಿಂದೆಯೇ ʻವಾರ್ತೆ.ಕಾಂʼಗೆ ತಿಳಿಸಿದ್ದು, ಇದೀಗ ನಿಜವಾಗಿದೆ.


ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುವ ಎಲ್ಲಾ ಪ್ರಯತ್ನಗಳೂ ಸಾಗಿವೆ. ಆದರೆ ಡಿಸಂಬರ್‌ ಅಂತ್ಯದೊಳಗೆ ಈ ಪ್ರಯತ್ನಗಳು ವಿಫಲವಾಗಿವೆ.
ಜ್ಯೋತಿಷ್ಯ ಶಾಸ್ತ್ರ ದೃಷ್ಠಿಯಿಂದ ನೋಡಿದಾಗ ನಾಯಕತ್ವ ಬದಲಾವಣೆಯ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಒಂದೊಮ್ಮೆ ಯಡಿಯೂರಪ್ಪರ ನಾಯಕತ್ವ ಬದಲಾವಣೆಯ ಚಿಂತನೆ ಬಂದದ್ದೇ ಆದರೆ ರಾಜ್ಯದಲ್ಲಿ ಬಿಜೆಪಿ ಅಸ್ಥಿರಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಪ್ರಭಲವಾದ ಲಕ್ಷಣ ಕಂಡು ಬಂದಿದೆ ಎಂದವರು ನುಡಿದಿದ್ದಾರೆ.
ಬಿಹಾರ ವಿಧಾನ ಸಭಾ ಚುನಾವಣೆಯ ಜೊತೆಗೆ ದೇಶದ ಹನ್ನೊಂದು ರಾಜ್ಯಗಳ ಐವತ್ತೆಂಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲೂ ಬಿಜೆಪಿ ಮುನ್ನಡೆ ಸಾಧಿಸುವುದರೊಂದಿಗೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂಬ ಭವಿಷ್ಯವನ್ನೂ ಅವರು ನುಡಿದಿದ್ದು ಫಲಿತಾಂಶ ಬಂದಾಗಿ ಇದು ಸಾಬೀತಾಗಿದೆ.

LEAVE A REPLY

Please enter your comment!
Please enter your name here