ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಜ.20 ರಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್, ತಮ್ಮ ಅಳಿಯ ಜೇರ್ಡ್ ಕುಶ್ನರ್ ಅವರನ್ನು ಶ್ವೇತ ಭವನದ(ಅಮೆರಿಕ ಅಧ್ಯಕ್ಷರ) ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ.
ಯಾವುದೇ ರಾಜಕೀಯ ಅನುಭವವನ್ನು ಹೊಂದಿರದ ಜೇರ್ಡ್ ಕುಶ್ನರ್ (35) ಅವರು ಡೊನಾಲ್ಡ್ ಟ್ರಂಪ್ ಅವರಂತೆಯೇ ವೇತನ ಪಡೆಯದೇ ಅಮೆರಿಕ ಅಧ್ಯಕ್ಷರಿಗೆ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.