ಅಲೆವೂರು ಗ್ರಾಮ ವಾಸ್ತವ್ಯ

0
251

ಮಂಗಳೂರು ಪ್ರತಿನಿಧಿ ವರದಿ
ಆಕಾಶವಾಣಿ ಮಂಗಳೂರು ಕೇಂದ್ರದ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಸೆ.28ರಂದು ಬೆಳಿಗ್ಗೆ 8.50 ರಿಂದ 9.30ರವರೆಗೆ ಬಾನುಲಿ ಗ್ರಾಮಾಯಣದ 10ನೇ ಸಂಚಿಕೆಯಲ್ಲಿ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮ ವಾಸ್ತವ್ಯದ ನುಡಿಚಿತ್ರ ಪ್ರಸಾರವಾಗಲಿದೆ.
 
 
 
ಉಡುಪಿ ಜಿಲ್ಲೆಯ ಅಲೆವೂರು ಗ್ರಾಮವು ಕೊರಂಗ್ರಪಾಡಿ ಮತ್ತು ಅಲೆವೂರು ಗ್ರಾಮಗಳನ್ನೊಳಗೊಂಡ ಗ್ರಾಮ ಪಂಚಾಯತ್ ಜಿಲ್ಲಾ ಕೇಂದ್ರದ ಪಕ್ಕದಲ್ಲಿದ್ದು ಅಭಿವೃದ್ಧಿಯಲ್ಲಿದೆ. ಭಾರತ ಸ್ಕೌಟ್ ಆಂಡ್ ಗೈಡ್ಸ್ ನ ತರಬೇತಿ ಕೇಂದ್ರ, ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖಾ ಕಚೇರಿ, ಟಿಎಂಎ ಪೈ ಆರಂಭಿಸಿದ ಶಾಲೆ, ಅಲೆವೂರ ಅಂಬಿಕೆ ಖ್ಯಾತಿಯ ಶ್ರೀ ದುರ್ಗಾಪರಮೇಶ್ವರಿ ದೇಗುಲ ನಗರ ಸಭೆಯ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕವನ್ನು ಹೊಂದಿರುವ ಗ್ರಾಮವಿದು. ಯಕ್ಷಗಾನ ಕಲಾವಿದರು, ವಾದ್ಯ ಪರಿಕರ ನುಡಿಸುವ ಕಲಾವಿದರು ದೈವನರ್ತಕರು, ಉಬ್ಬು ಶಿಲ್ಪಿ ಕಲಾವಿದರು ಇರುವ ಈ ಗ್ರಾಮದ ವಿಶೇಷತೆ ನುಡಿಚಿತ್ರದಲ್ಲಿ ಮೂಡಿಬರಲಿದೆ.
 
 
ಡಾ.ಕೃಷ್ಣರಾಜ ಭಟ್, ಪಂ.ಅದ್ಯಕ್ಷ ಶ್ರೀಕಾಂತ್ ನಾಯಕ್, ಹರೀಶ್ ಶೇರಿಗಾರ್, ಕಲ್ಮಾಡಿ ಶೇಖರ ಪೂಜಾರಿ, ಸುಂದರ ಶೇರಿಗಾರ , ಸಾಧು ಪಾಣಾರ, ಜಯಕರ ಬೈಲೂರು, ಉದಯ ಶೇರಿಗಾರ, ಭಾರತಿ ಜಯಕರ್, ಜಯಲಕ್ಮ್ಷೀ, ಪ್ರೇಮಾ, ಪಿಡಿಒ ಬೂದ ಪೂಜಾರಿ, ವಾರಿಜಾ ಮತ್ತಿತರರು ಗ್ರಾಮದ ವೈಶಿಷ್ಟ್ಯವನ್ನು ಬಣ್ಣಿಸಿದ್ದಾರೆ.
 
 
ಈ ಗ್ರಾಮ ವಾಸ್ತವ್ಯದ ನುಡಿಚಿತ್ರವನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಪ್ರಸ್ತುತ ಪಡಿಸಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಧ ಡಾ.ವಸಂತ ಕುಮಾರ್ ಪೆರ್ಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here