ಅರ್ಥಾಂಕಣ ಅನಾವರಣ

0
548

ಉಜಿರೆ ಪ್ರತಿನಿಧಿ ವರದಿ
ನಮ್ಮನ್ನು ನಾವು ಬದಲಿಸಿಕೊಂಡಾಗ ಮಾತ್ರ ದೇಶದ ಅಭಿವೃಧ್ದಿ ಸಾಧ್ಯ.ನಾವು ಯಾವ ಪಥದಲ್ಲಿ ನಡೆಯುತ್ತೇವೆ ಅನ್ನುವುದರ ಮೇಲೆ ನಮ್ಮದೇಶದ ಅಳಿವು-ಉಳಿವು ನಿಂತಿದೆ.ಉತ್ತಮ ಹವ್ಯಾಸ ಹಾಗೂ ಪ್ರಯೋಗಶೀಲತೆ ಬೆಳವಣಿಗೆಗೆ ರಹದಾರಿ ಎಂದು ಉದಯವಾಣಿ ದಿನಪತ್ರಿಕೆಯ ವರದಿಗಾರ ಲಕ್ಷ್ಮೀಮಚ್ಚಿನ ಅವರು ಹೇಳಿದರು.
 
 
ಲಕ್ಷ್ಮೀಮಚ್ಚಿನ ಅವರು ಇತ್ತೀಚೆಗೆ ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ದಿನಪತ್ರಿಕೆಗಳಲ್ಲಿ ಬರುವ ಅರ್ಥಶಾಸ್ತ್ರಕ್ಕೆ ಸಂಬಂದಿಸಿದ ಲೇಖನಗಳ ಬಗ್ಗೆ ಚರ್ಚಿಸಲು ಸಂಘಟಿಸಿದ ವಿಶೇಷ ವಿದ್ಯಾರ್ಥಿ ವೇದಿಕೆ ಅರ್ಥಾಂಕಣವನ್ನು ದೀಪ ಪ್ರಜ್ವಾಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನರು ದಿನಪತ್ರಿಕೆಯಲ್ಲಿ ಅವರವರ ಆಸಕ್ತಿಯ ವಿಷಯಗಳನ್ನು ಮಾತ್ರ ಓದುತ್ತಾರೆ. ವಿಷಯಗಳನ್ನು ಅರಿಯುವುದರಲ್ಲಿ ನಮ್ಮ ಆಸಕ್ತಿ ಅಡಕವಾಗಿದೆಯೇ ಹೊರತು ವಿಷಯಗಳು ಕ್ಲಿಷ್ಟಕರವಾಗಿರುವುದಿಲ್ಲ. ಸಾಲ ಠೇವಣಿಯ ಬರಹಗಳಿದ್ದರೆ ಸಂಬಂಧಪಟ್ಟ ಜನರು ಓದುತ್ತಾರೆಯೇ ಹೊರತು ಎಲ್ಲರಲ್ಲ. ನಮ್ಮ ಪಠ್ಯಕ್ಕೆ ಸಂಬಂದಪಟ್ಟ ವಿಷಯಗಳ ಲೇಖನಗಳನ್ನು ಓದಿ, ತಮ್ಮ ಸಹಪಾಠಿಗಳೊಂದಿಗೆ ಚರ್ಚಿಸಿದಾಗ ಮಾತ್ರ ವಿಷಯಗಳ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಅರ್ಥಾಂಕಣ ವಿದ್ಯಾರ್ಥಿಗಳಲ್ಲಿ ಉತ್ತಮ ಹವ್ಯಾಸ ಹಾಗೂ ಪ್ರಯೊಗಶೀಲತೆಯ ಮನಸ್ಸನ್ನು ಬೆಳೆಸುವ ಉತ್ತಮ ವೇದಿಕೆ ಎಂದು ಶ್ಲಾಘಿಸಿದರು.
 
 
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಚಲಿತ ಆರ್ಥಿಕ ವಿದ್ಯಾಮಾನಗಳ ಬಗ್ಗೆ ಪ್ರಕಟವಾಗಿರುವ ಲೇಖನಗಳ ಮೇಲೆ ವಿಷಯಮಂಡನೆ ಹಾಗೂ ಚರ್ಚೆಗಳು ಆರ್ಥಶಾಸ್ತ್ರದ ವಿಷಯಗಳನ್ನು ಹಾಗೂ ಸವಾಲುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿ. ಈ ಪ್ರಯೋಗ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದಲು ಪ್ರೇರೇಪಿಸುವುದರೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಎಂದು ಹೇಳಿದರು.
 
 
ಅರ್ಥಾಂಕಣದಲ್ಲಿ ತೃತೀಯ ಬಿ.ಎ, ವಿದ್ಯಾರ್ಥಿಗಳಾದ ಸ್ವಸ್ತಿಕಾ, ಆಶ್ರಿತಾ, ಶ್ರೀಹರಿ ಶರ್ಮ, ಕಾರ್ಇಕೇಯ, ಸ್ವಸ್ತಿಕ್, ಸಿಂಧು ಅವರು ಕಳೆದ ಆರು ತಿಂಗಳಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಬಡ್ಡಿದರ, ಹಣದುಬ್ಬರ ಹಾಗೂ ಅಭಿವೃದ್ದಿ ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಬಗ್ಗೆ ವಿಚಾರವನ್ನುಮಂಡಿಸಿದರು.ಈ ಕಾರ್ಯಕ್ರಮದಲ್ಲಿಅರ್ಥಶಾಸ್ತ್ರ ಪ್ರಾಧ್ಯಾಪಕರಾದಗಣರಾಜ್, ನಾಗರಾಜ್, ಮಹೇಶ್ ಶೆಟ್ಟಿ, ವಸಂತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೀತಿ ಭಟ್ ಸ್ವಾಗತಿಸಿ, ಮೌಲ್ಯ ಪ್ರಾರ್ಥಿಸಿ, ಅಸ್ರತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೊನೆಗೆ ಸ್ವಾತಿ ವಂದಿಸಿದರು.

LEAVE A REPLY

Please enter your comment!
Please enter your name here