ಅರ್ಜಿ ಸಲ್ಲಿಕೆ

0
340

ಬೆಂಗಳೂರು ಪ್ರತಿನಿಧಿ ವರದಿ
ಕಾವೇರಿ ನದಿ ನೀರು ವಿಚಾರದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿದೆ.ರಾಜ್ಯದಲ್ಲಿ ಕುಡಿಯಲು ಮಾತ್ರ ನೀರು ಇರುವುದರಿಂದ ಸೆಪ್ಟೆಂಬರ್ 20ರ ಆದೇಶಕ್ಕೆ ಮಾರ್ಪಾಟು ತರುವಂತೆ ಅರ್ಜಿ ಮೂಲಕ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಪರ ಕರ್ನಾಟಕ ವಕೀಲರು ಮನವಿ ಮಾಡಿದ್ದಾರೆ.
 
 
 
ನಾವು ತಮಿಳುನಾಡಿಗೆ ನೀರು ಬಿಡಲ್ಲ ಎಂದು ಹೇಳಿಲ್ಲ. ಆರೆ ನೀರು ಬಿಡಲಾಗದ ಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ. ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ವಿವರಿಸುತ್ತೇವೆ.ಸುಪ್ರೀಂಕೋರ್ಟ್ ಮನವೊಲಿಸಲು ಪ್ರಯತ್ನ ಮಾಡುತ್ತೇವೆ  ಎಂದು ದೆಹಲಿಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
 
 
 
ನಮ್ಮಲ್ಲಿ ಈಗ ಮಳೆಯಾಗುತ್ತಿಲ್ಲ, ಕೇರಳದಲ್ಲೂ ಆಗುತ್ತಿಲ್ಲ. ಕಬಿನಿ, ಹಾರಂಗಿಗೆ ಕೇರಳದಿಂದ ಮಳೆನೀರು ಬರಬೇಕಾಗಿತ್ತು. ಮಳೆಯಿಲ್ಲದ ಹಿನ್ನೆಲೆಯಲ್ಲಿ ಡ್ಯಾಂಗಳಿಗೆ ನೀರು ಹರಿದು ಬರುತ್ತಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಕುಡಿಯುವ ನೀರು ಅತ್ಯಗತ್ಯವಾಗಿದೆ. ಮಂತ್ರಿಮಂಡಲವು ವಿಧಾನಮಂಡಲದ ಸೃಷ್ಠಿಯಾಗಿದೆ. ವಿಧಾನಮಂಡಲ ನಿರ್ಧಾರದಂತೆ ಸರ್ಕಾರ ನಡೆದುಕೊಂಡಿದೆ ಎಂದಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.
 

LEAVE A REPLY

Please enter your comment!
Please enter your name here