ಅರ್ಜಿ ವಿಲೇವಾರಿಗೆ ಸಿಎಂ ಸೂಚನೆ

0
372

 
ಬೆಂಗಳೂರು ಪ್ರತಿನಿಧಿ ವರದಿ
ಆಂಧ್ರಪ್ರದೇಶ ಮಾದರಿಯಲ್ಲಿ ಎಂ. ಸ್ಯಾಂಡ್ ನೀತಿ ಜಾರಿಗೆ ಬರಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನಿಯಮಕ್ಕೆ ಒಪ್ಪಿಗೆ ದೊರೆಯಲಿದೆ ಎಂದು ಕಾನೂನು, ಸಂಸದೀಯ ಖಾತೆ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
 
ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,  ಸಿಎಂ ಸೂಚನೆಯಂತೆ ಸಂಪುಟ ಉಪಸಮಿತಿ ನೀಡಿದ್ದ ವರದಿಗೆ ಕೆಲವು ಬದಲಾವಣೆ ಮಾಡಲಾಗುತ್ತದೆ. ಎಂ ಸ್ಯಾಂಡ್ ಉತ್ಪಾದನೆ ಅರ್ಜಿ ವಿಲೇವಾರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
 
ಮರಳಿನ ಅಭಾವ ನೀಗಿಸಲೆಂದು ಎಂ. ಸ್ಯಾಂಡ್ ನೀತಿ ಜಾರಿಗೆ ತರಲಾಗುತ್ತದೆ. ರಾಜ್ಯದಲ್ಲಿ ಎಂ.ಸ್ಯಾಂಡ್ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತೇವೆ. ಸದ್ಯ 36 ಕಡೆಗಳಲ್ಲಿ ಎಂ.ಸ್ಯಾಂಡ್ ಉತ್ಪಾದನೆ ಮಾಡಲಾಗುತ್ತಿದೆ. 94 ಕಡೆ ಎಂ ಸ್ಯಾಂಡ್ ಉತ್ಪಾದನೆಗೆ ಜಾಗ ಗುರುತಿಸಲಾಗಿದೆ. ಆದರೆ ಎಂ.ಸ್ಯಾಂಡ್ ಉತ್ಪಾದನೆಗೆ ಇನ್ನೂ ಅನುಮತಿ ನೀಡಿಲ್ಲ.
 
ಈಗಾಗಲೇ ಎಂ.ಸ್ಯಾಂಡ್ ಉತ್ಪಾದನೆ ಸಂಬಂಧ 6500 ಅರ್ಜಿಗಳು ಬಂದಿದೆ. ಕೂಡಲೇ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಸಚಿವ ಜಯಚಂದ್ರ ಹೇಳಿದ್ದಾರೆ.

LEAVE A REPLY

Please enter your comment!
Please enter your name here