ಅರ್ಜಿ ಪುರಸ್ಕರಿಸಿದ ಸುಪ್ರೀಂ

0
282

ರಾಷ್ಟ್ರೀಯ ಪ್ರತಿನಿಧಿ ವರದಿ
ಕಾವೇರಿ ಮೇಲ್ಮನವಿ ಅರ್ಜಿ ಸಿಂಧುತ್ವದ ಬಗ್ಗೆ ತೀರ್ಪು ಪ್ರಕಟವಾಗಿದೆ. ರಾಜ್ಯಸ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಕರ್ನಾಟಕ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹವೆಂದು ಸುಪ್ರೀಂ ಹೇಳಿದೆ. ಡಿ.15ರಿಂದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಲಿದೆ.
 
 
ರಾಜ್ಯ ಸರ್ಕಾರ ಕಾವೇರಿ ನ್ಯಾಯಾಧಿಕರಣದ ಅಂತಿಮ ತಿರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಕರ್ನಾಟಕ ಸೇರಿ 3 ರಾಜ್ಯಗಳು ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
 
 
ಜಸ್ಟೀಸ್ ದೀಪಕ್ ಮಿಶ್ರಾ, ಜಸ್ಟೀಸ್ ಅಮಿತವ ರಾಯ್, ಜಸ್ಟೀಸ್ ಎ ಎಂ ಖಾನ್ ಮಿಲ್ಕರ್ ಅವರಿದ್ದ ಪೀಠದಿಂದ ತೀರ್ಪು ಪ್ರಕಟವಾಗಿದೆ. 2 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಮುಂದುವರಿಕೆಯಾಗಲಿದೆ. ಇದರಿಂದ ಸುಪ್ರೀ ತನ್ನ ಮಧ್ಯಂತರ ಆದೇಶವನ್ನು ಮುಂದುವರಿಸಿದೆ.

LEAVE A REPLY

Please enter your comment!
Please enter your name here