ವಾರ್ತೆ

ಅರ್ಜಿ ಆಹ್ವಾನ

 
ಮ0ಗಳೂರು ಪ್ರತಿನಿಧಿ ವರದಿ
2016-17 ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳಾದ ಕೋಕೋ, ಕಾಳುಮೆಣಸು, ಅಡಿಕೆ, ಗೇರು, ತೆಂಗು, ಜಾಯಿಕಾಯಿ, ಲವಂಗ, ಮುಂತಾದ ಬೆಳೆಗಳನ್ನು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆಯಲು ಆಸಕ್ತಿ ಹೊಂದಿದ ಸಣ್ಣ, ಅತೀ ಸಣ್ಣ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ವೆಚ್ಚ ಹಾಗೂ ಪರಿಕರ ವೆಚ್ಚಗಳನ್ನು ಪಡೆದು ತೋಟ ಅಭಿವೃದ್ದಿ ಪಡಿಸಲು ಅವಕಾಶವಿರುತ್ತದೆ.
 
 
 
ಅಸಕ್ತಿ ಇರುವ ರೈತರು ತಮ್ಮ ಜಮೀನಿನ ಪಹಣಿ ಪತ್ರ ಹಾಗೂ ಜಾಬ್ ಕಾರ್ಡಿನ ಪ್ರತಿಯನ್ನು ಬಂಟ್ವಾಳ ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿಯೊಂದಿಗೆ ಸಲ್ಲಿಸಿ ಕಾಮಗಾರಿಗಳನ್ನು ನೊಂದಣಿ ಮಾಡಲು ತೋಟಗಾರಿಕೆ ಇಲಾಖೆಯಿಂದ ಸೂಕ್ತ ತಾಂತ್ರಿಕ ಸೂಚನೆಗಳನ್ನು ನೀಡಿ ಕಾಮಗಾರಿಗಳನ್ನು ಅನುಷ್ಟಾನ ಗೊಳಿಸಲಾಗುವುದು. ಎಂದು ಬಂಟ್ವಾಳ ತೋಟಗಾರಿಕಾ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here