ಅರ್ಜಿ ಆಹ್ವಾನ

0
129

 
ಉಡುಪಿ ಪ್ರತಿನಿಧಿ ವರದಿ
ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿ ಜಿಲ್ಲೆ, ಇವರು ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಅನುಮೋದಿಸಲ್ಪಟ್ಟ ವಿವಿಧ ರೀತಿಯ ಸ್ವಯಂ ಉದ್ಯೋಗ ಉಚಿತ ತರಬೇತಿಯನ್ನು ಮುಂಬರುವ ತಿಂಗಳಿನಲ್ಲಿ ಆಯೋಜಿಸಿದ್ದಾರೆ.
 
 
ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18 ರಿಂದ 45 ವರ್ಷ ವಯೋಮಿತಿಯೊಳಗಿರುವ, ಸ್ವ ಉದ್ಯೋಗ ಮಾಡಲು ಉತ್ಕಟ ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಸಂಬಂಧ ಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸಂಸ್ಥೆಯಲ್ಲಿ ತರಬೇತಿಗಳು ಸಂಪೂರ್ಣ ಉಚಿತವಾಗಿದ್ದು, ವಸತಿಯತವಾಗಿವೆ. ಆಸಕ್ತರು ಕೂಡಲೇ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ತಕ್ಷಣ ಅರ್ಜಿ ಸಲ್ಲಿಸಲು ಕೋರಲಾಗಿದೆ.
 
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂರವಾಣಿ ಸಂಖ್ಯೆ 0820-2563455 ಸಂಪರ್ಕಿಸಿ ಅಥವಾ ವೆಬ್ ಸೈಟ್ www.rudsetitraining.org ಗೆ ಭೇಟಿ ನೀಡಬಹುದಾಗಿದೆ.

LEAVE A REPLY

Please enter your comment!
Please enter your name here