ಅರ್ಜಿ ಆಹ್ವಾನ

0
422

 
ಉಡುಪಿ ಪ್ರತಿನಿಧಿ ವರದಿ
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ, ಬೆಂಗಳೂರು ವತಿಯಿಂದ ‘ಹಿಂದಿ ಶಿಕ್ಷಕ್ ಟ್ರೈನಿಂಗ್ ಕೋರ್ಸ್’ 2016 ಮೇ 11 ರಿಂದ ಪ್ರಾರಂಭವಾಗಲಿದ್ದು, ನಮ್ಮ ಕಾಲೇಜಿನ ವಿವಿಧ ಜಿಲ್ಲೆಯ ಪ್ರಶಿಕ್ಷಣಾರ್ಥಿಳು ಪ್ರವೇಶ ಪತ್ರ ಹಾಗೂ ಪರೀಕ್ಷಾ ಸಂಬಂಧಿ ಮಾಹಿತಿಯನ್ನು ಸಂಸ್ಥೆಯಿಂದ ಪಡೆಯಲು ಸೂಚಿಸಲಾಗಿದೆ.
 
 
ಪ್ರಸಕ್ತ ಸಾಲಿನ 10 ತಿಂಗಳ ಅವಧಿಯ ‘ಹಿಂದಿ ಶಿಕ್ಷಕ್ ಟ್ರೈನಿಂಗ್ ಕೋರ್ಸ್’ ಗೆ ಪ್ರವೇಶ ಬಯಸುವವರು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಉತ್ತೀರ್ಣತೆಯೊಂದಿಗೆ ಹಿಂದಿ ರತ್ನ, ಪ್ರವೀಣ್, ವಿದ್ವಾನ್ ಪದವಿಯಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣತೆ ಹೊಂದಿದ್ದು, 18 ರಿಂದ 40 ವರ್ಷದ ವಯಸ್ಸಿನ ಆಸಕ್ತ ಅಭ್ಯರ್ಥಿಗಳು ಅರ್ಹರಾಗಿದ್ದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
 
 
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜ್’ಹಿಂದಿ ಭವನ್’ ಜಿಲ್ಲಾ ಪಂಚಾಯತ್ ಕಚೇರಿ ಎದುರು ಮಂಡ್ಯ ದೂರವಾಣಿ ಸಂಖ್ಯೆ 08232-226667/ 9448268114 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜ್’ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here