ಅರ್ಜಿ ಆಹ್ವಾನ

0
6047

 
ಉಡುಪಿ ಪ್ರತಿನಿಧಿ ವರದಿ
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 2016-17ನೇ ಸಾಲಿಗೆ ಸ್ವಯಂ ಉದ್ಯೋಗ, ಹೈನುಗಾರಿಕೆ, ಉದ್ಯಮಶೀಲತಾ ಅಭಿವೃದ್ಧಿ, ಮೈಕ್ರೋ ಕ್ರೆಡಿಟ್ (ಕಿರುಸಾಲ), ಭೂ ಒಡೆತನ, ಮೈಕ್ರೋ ಕ್ರೆಡಿಟ್-1, ಮಹಿಳಾ ಸಮೃದ್ಧಿ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆ ಬಾವಿ/ ತೆರೆದ ಬಾವಿ/ಏತ ನೀರಾವರಿ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆಯಲು, ಪರಿಶಿಷ್ಟ ಜಾತಿಯವರಿಂದ ಅರ್ಜಿಗಳನ್ನು ಕರೆಯಲಾಗಿದೆ.
 
ಆಸಕ್ತಿಯುಳ್ಳವರು ಯೋಜನೆಗಳ ಮಾಹಿತಿ ಹಾಗೂ ಅರ್ಜಿಗಳನ್ನು ನಿಗಮದ ವೆಬ್ ಸೈಟ್ www.adcl.karnataka.gov.in ಮುಖಪುಟ ಮೆನುವಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದ್ದಿ ನಿಗಮ, ಬಿ ಬ್ಲಾಕ್, 2ನೇ ಮಹಡಿ, ಕೊಠಡಿ ಸಂಖ್ಯೆ 302, ಜಿಲ್ಲಾಡಳಿತ ಕಛೇರಿಗಳ ಸಂಕೀರ್ಣ, ರಜತಾದ್ರಿ ಮಣಿಪಾಲ-576104. ಇವರಿಂದ ಉಚಿತವಾಗಿ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮೇ.16 ರೊಳಗಾಗಿ ಮುದ್ದಾಂ ಅಥವಾ ಅಂಚೆಯ ಮೂಲಕ ಜಿಲ್ಲಾ ಕಛೇರಿಗೆ ಸಲ್ಲಿಸುವುದು.
 
 
ಜಾತಿ ಪ್ರಮಾಣ ಪತ್ರ ಹಾಗೂ ಪಡಿತರ ಚೀಟಿಯನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಇಲ್ಲವಾದಲ್ಲಿ ಸೂಚನೆ ನೀಡದೆ ಅರ್ಜಿಯನ್ನು ತಿರಸ್ಕರಿಸಲಾಗುವುದು. ಸಲ್ಲಿಸಿದ ಅರ್ಜಿಯನ್ನು ಆಯಾ ವಿಧಾನಸಭಾ ಕ್ಷೇತ್ರದ ಆಯ್ಕೆ ಸಮಿತಿ ಸಭೆಯಲ್ಲಿ ಮಂಡಿಸಲಾಗುವುದು. ಸಮಿತಿಯಿಂದ ಆಯ್ಕೆಯಾದ ಅರ್ಜಿದಾರರು ಆಯಾ ಯೋಜನೆಗಳಿಗೆ ಸಂಬಂಧಪಟ್ಟ ಉಳಿದ ದಾಖಲೆಗಳನ್ನು ನಂತರ ಸಲ್ಲಿಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಕಛೇರಿಯಿಂದ ಮಾಹಿತಿ ನೀಡಲಾಗುವುದು ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here