ಅರ್ಜಿ ಆಹ್ವಾನ

0
605

 
ಉಡುಪಿ ಪ್ರತಿನಿಧಿ ವರದಿ
ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಅನುಷ್ಟಾನಗೊಳಿಸುವ ಹಾಗೂ 11-ಇ ನಕ್ಷೆ, ತತ್ಕಾಲ್ ಪೋಡಿ ಪ್ರಕರಣಗಳ ಅಳತೆ ಕಾರ್ಯವನ್ನು ವಿಳಂಬವಿಲ್ಲದೆ ಒದಗಿಸುವ ಸಲುವಾಗಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಅರ್ಹ ಅಭ್ಯರ್ಥಿಗಳಿಗೆ ಪರವಾನಿಗೆ ನೀಡುವ ಕುರಿತು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
ಅಭ್ಯರ್ಥಿಗಳು ಏಪ್ರಿಲ್ 25 ರವರೆಗೆ ನಾಡಕಚೇರಿಗಳಲ್ಲಿ ರೂ.300/- ಪಾವತಿಸಿ ಅರ್ಜಿ ಸಂಖ್ಯೆ ಪಡೆದು ಆನ್ ಲೈನ್ http://landrecords.karnataka.gov.in/isrecruitment ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here