ಅರ್ಜಿ ಆಹ್ವಾನ

0
553

ಮ0ಗಳೂರು ಪ್ರತಿನಿಧಿ ವರದಿ
ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಮಂಗಳೂರು ಇವರಿಂದ 2015-16ನೇ ಸಾಲಿಗೆ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
 
 
ಜಿಲ್ಲೆಯ ಆಸಕ್ತ ಯುವಕ -ಯುವತಿ ಮಂಡಳಗಳು ಅರ್ಜಿ ಸಲ್ಲಿಸಬಹುದಾಗಿದೆ. ಯುವ ಮಂಡಳಗಳು ಜಿಲ್ಲಾ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ನೋಂದಾವಣೆಯಾಗಿದ್ದು ಹಾಗೂ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರಬೇಕು. ಕಳೆದ ಸಾಲಿನಲ್ಲಿ 2015-16ರಲ್ಲಿ ಗ್ರಾಮದ ಅಭಿವೃದ್ದಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರಬೇಕು. (ಸಾಕ್ಷರತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ಕ್ರೀಡೆ, ಸಾಂಸ್ಕೃತಿಕ, ಮಹಿಳಾ ಜಾಗೃತಿ, ವೃತ್ತಿಪರ ಶಿಕ್ಷಣ, ಗ್ರಾಮ ನೈರ್ಮಲ್ಯ, ಮಳೆ ನೀರು ಸಂಗ್ರಹ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಗಳ ಆಚರಣೆ, ಶ್ರಮದಾನ ಇತ್ಯಾದಿ) ಮಾಹಿತಿಯು ಎಪ್ರಿಲ್ 2015ರಿಂದ ಮಾರ್ಚ್ 2016ರ ಒಳಗಿರಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಮಂಡಳಕ್ಕೆ ರೂ 25,000/- ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅರ್ಜಿಯು ರಾಜ್ಯಮಟ್ಟಕ್ಕೆ ಅರ್ಹತೆಯನ್ನು ಪಡೆಯುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ: ನವಂಬರ್ ಅರ್ಜಿಯನ್ನು ನೆಹರು ಯುವ ಕೇಂದ್ರ, ನೆಹರು ಮೈದಾನ್ ರೋಡ್, ಮಂಗಳೂರು-1 ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗಾಗಿ 0824-2422264 ಇಲ್ಲಿಗೆ ಕರೆಮಾಡಲು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here