ಅರ್ಜಿ ಆಹ್ವಾನ

0
642

ಮ0ಗಳೂರು ಪ್ರತಿನಿಧಿ ವರದಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಪ.ಜಾತಿ/ಪ.ಪಂಗಡದವರಿಗೆ ಶೇ.24.10ರ ನಿಧಿಯ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
 
 
ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಕುಟುಂಬದ ವಾರ್ಷಿಕ ವರಮಾನ ರೂ.2.50ಲಕ್ಷ ಹಾಗೂ ಇತರ ಸಾಮಾನ್ಯ ಸೌಲಭ್ಯಕ್ಕೆ ಕುಟುಂಬದ ವಾರ್ಷಿಕ ವರಮಾನ ರೂ.3.00ಲಕ್ಷಕ್ಕೆ ಮೀರಿರಬಾರದು.
 
 
ನಿವೇಶನ ಖರೀದಿ, ಮನೆ ನಿರ್ಮಾಣ, ಮನೆ ರಿಪೇರಿ, ಸ್ವಯಂ ಉದ್ಯೋಗಕ್ಕೆ ಸಹಾಯಧನ, ಶಸ್ತ್ರಚಿಕಿತ್ಸೆಗೆ ಸಹಾಯಧನ, ಕೃತಕ ಅಂಗ ಜೋಡಣೆಗೆ ಸಹಾಯಧನ, ಶೌಚಾಲಯ ನಿರ್ಮಾಣ, ವಿದ್ಯಾಪ್ರೋತ್ಸಾಹಧನ (ಎಸ್.ಎಸ್.ಎಲ್.ಸಿ ಯಿಂದ ಸ್ನಾತಕೋತ್ತರ/ಡಾಕ್ಟರೇಟ್ ಪದವಿವರೆಗಿನ ವಿದ್ಯಾಭ್ಯಾಸಕ್ಕಾಗಿ), ಕ್ರೀಡೆ ಕಲೆ ಸಾಂಸ್ಕೃತಿಕ ಚಟುವಟಿಕೆಗೆ ಸಹಾಯಧನ, ಎಂ.ಬಿ.ಬಿ.ಎಸ್ ಮತ್ತು ಬಿ.ಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡೆಸ್ಕ್ಟಾಪ್/ಕಂಪ್ಯೂಟರ್ ಲ್ಯಾಪ್ ಟಾಪ್ ಖರೀದಿಗಾಗಿ ಸಹಾಯಧನ, ವೈದ್ಯರಿಗೆ ಸಲಕರಣೆ ಪಡೆದು ಕೊಳ್ಳಲು, ಪಿ.ಹೆಚ್.ಡಿ/ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಸಮಾವೇಶ/ ಕಾರ್ಯಗಾರಗಳಲ್ಲಿ ಭಾಗವಹಿಸಲು, ವೈಯಕ್ತಿಕ ಅಭ್ಯಾಸ ಪ್ರಾರಂಭಿಸಿರುವ ವೈದ್ಯರಿಗೆ ಸಲಕರಣೆ ಪಡೆದು ಕೊಳ್ಳಲು, ಕುಡಿಯುವ ನೀರಿನ ಸಂಪರ್ಕ, ಯು.ಜಿ.ಡಿ ಸಂಪರ್ಕ, ಅಡುಗೆ ಅನಿಲ ಸಂಪರ್ಕ ಇವುಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ.
 
 
ಸದ್ರಿ ಸೌಲಭ್ಯಗಳನ್ನು ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮಹಾನನಗರಪಾಲಿಕೆ ಕಚೇರಿ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here