ಅರ್ಜಿ ಆಹ್ವಾನ

0
295

 
ಮ0ಗಳೂರು ಪ್ರತಿನಿಧಿ ವರದಿ
ಭಾರತ ಸರ್ಕಾರವು 2015-16ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಈ ರಾಷ್ಟ್ರ ಯುವ ಪ್ರಶಸ್ತಿಗೆ 2015-16ನೇ ಸಾಲಿನಲ್ಲಿ ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ 15 ರಿಂದ 29 ವರ್ಷದ ವಯೋಮಿತಿಯ ಯುವಕ ಅಥವಾ ಯುವತಿಯರನ್ನು ಒಳಗೊಂಡ ಯುವಕ ಮತ್ತು ಯುವತಿ ಸಂಘಗಳು ವೈಯಕ್ತಿಕ ಮತ್ತು ಸಾಂಘಿಕ ಪ್ರಶಸ್ತಿಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
 
 
ಯುವಕ/ಯುವತಿಯರು ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರುವ ಬಗ್ಗೆ ಕಾರ್ಯಕ್ರಮದ ದಿನಾಂಕ ಹಾಗೂ ಸದರಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆ ಛಾಯಾಚಿತ್ರಗಳು, ಪತ್ರಿಕಾ ವರದಿ, ದೃಡೀಕರಣ ಪತ್ರಗಳು ಮುಂತಾದ ಪುರಾವೆಗಳ ಮೂಲ ದಾಖಲೆಗಳನ್ನು ಎ-4 ಅಳತೆಯ ಕಾಗದದಲ್ಲಿ ಸ್ಪಷ್ಟವಾಗಿ ಆಂಗ್ಲ ಭಾಷೆಯಲ್ಲಿ ನಿಗದಿತ ಅರ್ಜಿ ನಮೂನೆಯೊಂದಿಗೆ ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಿ ಆಗಸ್ಟ್ 17 ರೊಳಗೆ ಮಂಗಳೂರಿನ ಮಂಗಳ ಕ್ರೀಡಾಂಗಣ ಕಚೇರಿಗೆ ಸಲ್ಲಿಸಬೇಕು.
 
 
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಮಂಗಳೂರು ಇವರ ಕಚೇರಿಯನ್ನು ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here